ಶಿವಮೊಗ್ಗ, ಭದ್ರಾವತಿ ರೈಲ್ವೆ ಓವರ್ ಬ್ರಿಡ್ಜ್ ಪರಿಶೀಲಿಸಿದ ಸಂಸದ ರಾಘವೇಂದ್ರ, ಕಾಮಗಾರಿಗಳ ಪೂರ್ಣ ಮಾಹಿತಿ ಇಲ್ಲಿದೆ

Railway overbridge ROB

 

 

ಸುದ್ದಿ ಕಣಜ.ಕಾಂ | DISTRICT | ROB
ಶಿವಮೊಗ್ಗ: ಸಂಸದ ಬಿ.ವೈ.ರಾಘವೇಂದ್ರ ಅವರು ಭದ್ರಾವತಿ(Bhadravathi)ಯ ಕಡದಕಟ್ಟೆ, ವಿದ್ಯಾನಗರ, ಉಷಾ ನರ್ಸಿಂಗ್ ಹೋಮ್, ಕಾಶೀಪುರ ಬಳಿ ನಿರ್ಮಿಸಲಾಗುತ್ತಿರುವ ರೈಲ್ವೆ ಓವರ್ ಬ್ರಿಡ್ಜ್ (ಆರ್.ಓ.ಬಿ- railway over bridge) ಕಾಮಗಾರಿಗಳನ್ನು ಪರಿಶೀಲಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆದರು.

READ | ಆಗುಂಬೆ ಘಾಟಿಯಲ್ಲಿ ಗುಡ್ಡ ಕುಸಿತ, ಬದಲಿ ಮಾರ್ಗದ ಮಾಹಿತಿ ಇಲ್ಲಿದೆ, ಯಾವ ವಾಹನಗಳ ನಿರ್ಬಂಧ?

  • ರೈಲ್ವೆ ಕಾಮಗಾರಿಗಳ ಹೈಲೈಟ್ಸ್
  • ಭದ್ರಾವತಿಯ ಕಡದಕಟ್ಟೆ ಬಳಿಯ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ಸಂಖ್ಯೆ 34, ಶಿವಮೊಗ್ಗ ಸವಳಂಗ ರಸ್ತೆಯ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ಸಂಖ್ಯೆ 49, ಕಾಶೀಪುರದ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ಸಂಖ್ಯೆ 54 ಬಳಿಯಲ್ಲಿ ರೈಲ್ವೆ ಇಲಾಖೆಯ ವತಿಯಿಂದ ನಿರ್ಮಿಸಲಾಗುತ್ತಿರುವ ರಸ್ತೆ ಮೇಲ್ಸೇತುವೆಗಳು ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆಯಿಂದ ವಿದ್ಯಾನಗರದ ಬಳಿ ಎಲ್.ಸಿ. 46ಕ್ಕೆ ವೃತ್ತಾಕಾರದ ರೈಲ್ವೆ ಮೇಲ್ಸೇತುವೆ ಕಾಮಗಾರಿ ಪ್ರಗತಿಯಲ್ಲಿದೆ.
  • ರೈಲ್ವೆ ಇಲಾಖೆಯ 3 ರಸ್ತೆ ಮೇಲ್ಸೇತುವೆಗಳ ಅಂದಾಜು ವೆಚ್ಚ 116 ಕೋಟಿ ರೂಪಾಯಿಗಳಾಗಿದ್ದು, ಇದರಲ್ಲಿ ಕಾಮಗಾರಿ ವೆಚ್ಚದ ಶೇ.50ರಷ್ಟು ಹಾಗೂ ಭೂಸ್ವಾಧೀನದ ಸಂಪೂರ್ಣ ವೆಚ್ಚವನ್ನು ರಾಜ್ಯ ಸರ್ಕಾರದ ಭರಿಸುತ್ತದೆ. ಕಾಮಗಾರಿ ವೆಚ್ಚದ ಶೇಕಡ 50 ರಷ್ಟನ್ನು ರೈಲ್ವೆ ಇಲಾಖೆ ಭರಿಸುತ್ತಿದೆ.
  • ಈ ಯೋಜನೆಗೆ ರಾಜ್ಯ ಸರ್ಕಾರದ ಪಾಲು 70 ಕೋಟಿ ರೂ., ರೈಲ್ವೆ ಇಲಾಖೆಗೆ ರಾಜ್ಯ ಸರ್ಕಾರದಿಂದ ಈಗಾಗಲೇ 8.61 ಕೋಟಿ ರೂ.ಗಳನ್ನು ಹಾಗೂ ಭೂಸ್ವಾಧೀನಕ್ಕಾಗಿ 20.60 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ.
  • ಎಸ್.ಆರ್.ಸಿ. ಕಂಪನಿಯವರು ಈ 3 ಯೋಜನೆಗಳ ಗುತ್ತಿಗೆ ಪಡೆದಿದ್ದಾರೆ. ಈಗಾಗಲೇ ಕಾಮಗಾರಿಯು ಶೇ.30-40ರಷ್ಟು ಪೂರ್ಣಗೊಂಡಿದೆ. ಕಾಮಗಾರಿ ಭರದಿಂದ ಸಾಗುತ್ತಿದೆ. ಮುಂದಿನ ಡಿಸೆಂಬರ್ ಅಥವಾ ಜನವರಿ ತಿಂಗಳುಗಳಲ್ಲಿ ಈ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು.
  • ವಿದ್ಯಾನಗರ ಬಳಿಯಲ್ಲಿ ಟ್ರಂಪ್ಪೆಟ್ ವಿನ್ಯಾಸದ ರೈಲ್ವೆ ಮೇಲ್ಸೇತುವೆ
    ವಿದ್ಯಾನಗರದ ಬಳಿ ಎಲ್.ಸಿ. ಗೇಟ್ ನಂ.46ರಲ್ಲಿ ವೃತ್ತಕಾರದ ರೈಲ್ವೆ ಮೇಲ್ಸೇತುವೆಯು ಅಂದಾಜು 43.90 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದದೆ. ರಾಷ್ಟ್ರೀಯ ಹೆದ್ದಾರಿ ಇಲಾಖೆಯಿಂದ ಕಾಮಗಾರಿ ಅನುಷ್ಠಾನಗೊಳ್ಳುತ್ತಿದೆ.

https://suddikanaja.com/2022/06/03/railway-crossing-awaerness-day-at-shimoga/

Leave a Reply

Your email address will not be published. Required fields are marked *

error: Content is protected !!