ಜು.16ರಂದು ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ವಿದ್ಯುತ್ ಅದಾಲತ್

MESCOM

 

 

ಸುದ್ದಿ‌ ಕಣಜ.ಕಾಂ | DISTRICT | MESCOM
ಶಿವಮೊಗ್ಗ: ಜಿಲ್ಲೆಯ ಎಲ್ಲ ತಾಲೂಕುಗಳ ವಿವಿಧ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕಕ್ಕೆ ಸಂಬಂಧಿಸಿದ ಗ್ರಾಹಕರ ಸಮಸ್ಯೆಗಳನ್ನು ಪರಿಹರಿಸಲು ಜುಲೈ 16 ರಂದು ಬೆಳಗ್ಗೆ 11ರಿಂದ ವಿದ್ಯುತ್ ಅದಾಲತ್ ಹಮ್ಮಿಕೊಳ್ಳಲಾಗಿದೆ.

READ | ಕೆಲ ಸೆಕೆಂಡ್‍ಗಳಲ್ಲಿ ಮರ್ಡರ್, ಹಂದಿ ಅಣ್ಣಿ ಕೊಲೆಯ ಬಗ್ಗೆ ತಿಳಿಯಲೇಬೇಕಾದ ವಿಷಯಗಳಿವು

ಎಲ್ಲೆಲ್ಲಿ‌ ವಿದ್ಯುತ್ ಅದಾಲತ್?
ಶಿವಮೊಗ್ಗ ತಾಲೂಕಿನ ಕೊಮ್ಮನಾಳು ಮತ್ತು ಮಲ್ಲಾಪುರ, ತೀರ್ಥಹಳ್ಳಿ ತಾಲೂಕಿನ ಶೇಡ್‍ಗಾರ್ ಮತ್ತು ಹುಂಚದಕಟ್ಟೆ, ಭದ್ರಾವತಿ ತಾಲೂಕಿನ ಬದನೆಹಾಳ್ ಮತ್ತು ಹಂಚಿನಸಿದ್ಧಾಪುರ, ಸಾಗರ ತಾಲೂಕಿನ ಡ್ಯಾಮ್ ಹೊಸೂರು ಮತ್ತು ನಾಗವಳ್ಳಿ, ಹೊಸನಗರ ತಾಲೂಕಿನ ಹರತಾಳು, ಸೊರಬ ತಾಲೂಕಿನ ಹಲಸಿನಕೊಪ್ಪ ಮತ್ತು ಸಂಪಗೋಡು ಹಾಗೂ ಶಿಕಾರಿಪುರ ತಾಲೂಕಿನ ಅರಳೇಹಳ್ಳಿ ಮತ್ತು ತಂಡಗುಂದ ಗ್ರಾಮಗಳಲ್ಲಿ ವಿದ್ಯುತ್ ಅದಾಲತ್ ನಡೆಸಲಾಗುವುದು.
ಹಾರ್ನಳ್ಳಿ ಶಾಖಾ ವ್ಯಾಪ್ತಿಯ ಮಲ್ಲಾಪುರ ಗ್ರಾಮದ ಗ್ರಾ.ಪಂ ಕಚೇರಿಯಲ್ಲಿ ವಿದ್ಯುತ್ ಸಂಪರ್ಕಕ್ಕೆ ಸಂಬಂಧಿಸಿದ ಗ್ರಾಹಕರ ಸಮಸ್ಯೆಗಳನ್ನು ಪರಿಹರಿಸಲು ಜುಲೈ 16 ರಂದು ಬೆಳಗ್ಗೆ 10.30 ರಿಂದ ವಿದ್ಯುತ್ ಅದಾಲತ್ ಹಮ್ಮಿಕೊಳ್ಳಲಾಗಿದೆ. ಕುಂಸಿ ಉಪವಿಭಾಗದ ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!