ಭದ್ರಾವತಿ ರೈಲ್ವೆ ನಿಲ್ದಾಣ ಬಳಿ ಪೊಲೀಸರ ದಿಢೀರ್ ದಾಳಿ, ಒಬ್ಬನ ಬಂಧನ

Bhadravathi railway station

 

 

ಸುದ್ದಿ ಕಣಜ.ಕಾಂ | TALUK | CRIME NEWS 
ಭದ್ರಾವತಿ: ರೈಲ್ವೆ ನಿಲ್ದಾಣದ ಮೇಲೆ ಹಳೇನಗರ ಪೊಲೀಸರು ದಿಢೀರ್ ದಾಳಿ ನಡೆಸಿ ಒಬ್ಬನನ್ನು ಬಂಧಿಸಿದ್ದು, ಆತನ ಬಳಿಯಿದ್ದ ಮೂರು ಮೊಬೈಲ್ ಗಳನ್ನು ವಶಕ್ಕೆ ಪಡೆದಿದ್ದಾರೆ.
ಭೋವಿ ಕಾಲೋನಿಯ ವೆಂಕಟೇಶ್ ಎಂಬುವವನ್ನು ಬಂಧಿಸಲಾಗಿದೆ. ಈತನು ಕದ್ದ ಮೊಬೈಲ್ ಗಳನ್ನು ರೈಲ್ವೆ ನಿಲ್ದಾಣ ಬಳಿ ಕಡಿಮೆ ದರಕ್ಕೆ ಮಾರಾಟ ಮಾಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿ ಆತನನ್ನು ಬಂಧಿಸಿದ್ದಾರೆ.

READ | ಪ್ರಯಾಣಿಕನ ಕೈಸೇರಿದ ತಾಳಗುಪ್ಪ ರೈಲ್ವೆ ನಿಲ್ದಾಣದಲ್ಲಿ ಮರೆತಿದ್ದ ಈಯರ್ ಫೋನ್! 

ಮೊಬೈಲ್ ಬಗ್ಗೆ ಇಲ್ಲ ಮಾಹಿತಿ
ಖಚಿತ ಮಾಹಿತಿಯ ಮೇರೆಗೆ ದಾಳಿ ಮಾಡಿದ ಪೊಲೀಸರು ಆತನ ಬಳಿಯಿದ್ದ ಸ್ಯಾಮ್ ಸಂಗ್, ರೆಡ್ ಮಿ ಮೊಬೈಲ್ ಗಳನು ವಶಕ್ಕೆ ಪಡೆದಿದ್ದಾರೆ. ನಂತರ, ಮೊಬೈಲ್ ಬಗ್ಗೆ ವಿಚಾರಣೆ ನಡೆಸಿದ್ದಾರೆ. ಆದರೆ, ಆರೋಪಿಯಿಂದ ಇದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಹಳೇನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Leave a Reply

Your email address will not be published. Required fields are marked *

error: Content is protected !!