Varamahalakshmi Festival | ವರಮಹಾಲಕ್ಷ್ಮೀ ಹಬ್ಬಕ್ಕೆ ರೇಟ್ ಶಾಕ್!, ದರ ಕೇಳಿದ್ರೆ ಗಾಬರಿಯಾಗೋದು ಗ್ಯಾರಂಟಿ

 

ಸುದ್ದಿ ಕಣಜ.ಕಾಂ | DISTRICT | VARAMAHALAKSHMI
ಶಿವಮೊಗ್ಗ: ವರಮಹಾಲಕ್ಷ್ಮೀ ಹಬ್ಬ(Varamahalakshmi Festival)ಕ್ಕೆ ಖರೀದಿಯೇನೋ ಬಲು ಜೋರಾಗಿ ನಡೆದಿದೆ. ಆದರೆ, ಹಣ್ಣು(Fruits), ಹೂವು (Flower) ಮತ್ತು ಪೂಜಾ ಸಾಮಗ್ರಿಗಳ ಬೆಲೆ ಗಗನಕ್ಕೇರಿದೆ.
ಜಿಲ್ಲೆಯ ಪ್ರಮುಖ ಮಾರಾಟ ಕೇಂದ್ರಗಳಲ್ಲಿ ದರ ಏರಿಕೆಯಾದರೂ ಖರೀದಿ ಪ್ರಮಾಣದಲ್ಲಿ ಮಾತ್ರ ಯಾವುದೇ ಕಡಿಮೆಯಾಗಿಲ್ಲ. ಹೆಣ್ಣುಮಕ್ಕಳು ಗಾಜಿನ ಬಳೆ, ಸೀರೆ ಮತ್ತಿತರ ಅಲಂಕಾರಿಕ ವಸ್ತುಗಳ ಖರೀದಿಯಲ್ಲಿ ತೊಡಗಿರುವುದು ಸರ್ವೆ ಸಾಮಾನ್ಯವಾಗಿ ಕಂಡುಬಂದಿತು.

READ | Agumbe Ghat- ಆಗುಂಬೆ ಘಾಟಿಯಲ್ಲಿ ಕಾರಿನ ಮೇಲೆ ಬಿದ್ದ ಮರ, ಟ್ರಾಫಿಕ್ ಜಾಮ್ 

ಬೆಳಗ್ಗೆಯಿಂದಲೇ ಶಿವಪ್ಪನಾಯಕ ಮಾರುಕಟ್ಟೆ, ಗೋಪಿ ವೃತ್ತ, ವಿನೋಬನಗರ ಪೊಲೀಸ್ ಚೌಕಿ, ಲಕ್ಷ್ಮೀ ಟಾಕೀಸ್, ಬಿ.ಎಚ್.ರಸ್ತೆ ಭಾಗಗಳಲ್ಲಿ ವ್ಯಾಪಾರ ಬಲು ಜೋರಾಗಿದೆ ನಡೆದಿದೆ.
ಯಾವುದಕ್ಕೆಷ್ಟು ರೇಟ್?
ಸೇಬು ಪ್ರತಿ ಕೆಜಿಗೆ 140ರಿಂದ 160 ರೂಪಾಯಿ, ದ್ರಾಕ್ಷಿ 200 ರೂಪಾಯಿ, ಸೀತಾಫಲ 120 ರೂ., ದಾಳಿಂಬೆ 120 ರೂ., ಬಾಳೆಹಣ್ಣು 100 ರೂ. ಹಾಗೂ ಹೂವುಗಳಲ್ಲಿ ಮಾರು ದುಂಡು ಮಲ್ಲಿಗೆಗೆ 400 ರೂ., ಮಲ್ಲಿಗೆಗೆ 200 ರೂ., 1 ಕೆಜಿ ಸೇವಂತಿಗೆ 100 ರೂ., ಗುಲಾಬಿ 240 ರೂ. ದರವಿದೆ.
ದುಬಾರಿ ದುನಿಯಾದಲ್ಲಿ ಖರೀದಿ ಭರಾಟೆ
ಹೂವು, ಹಣ್ಣುಗಳ ಬೆಲೆ ಆಕಾಶಕ್ಕೇರಿದರೂ ಖರೀದಿ ಪ್ರಮಾಣ ಮಾತ್ರ ಕಡಿಮೆಯಾಗಿಲ್ಲ. ಗುರುವಾರ ಬೆಳಗ್ಗೆಯಿಂದಲೇ ಮಳೆಯ ನಡುವೆಯೇ ಖರೀದಿಸುವುದಕ್ಕೆ ಜನರು ಮಾರುಕಟ್ಟೆಗೆ ಆಗಮಿಸಿದ್ದರು. ಲಕ್ಷ್ಮೀ ವಿಗ್ರಹ, ಮೂರ್ತಿ, ಮುಖವಾಡ, ಹಾರ, ಬಳೆ, ಅರಿಷಿಣ, ಮಾಂಗಲ್ಯ ಸರ, ಉತ್ತತ್ತಿ, ಕೊಬ್ಬರಿ ಖರೀದಿಸಿದರು.
ಶ್ರಾವಣದಲ್ಲಿ ಹೂವುಗಳಿಗೆ ಎಲ್ಲಿಲ್ಲದ ಬೇಡಿಕೆ ಇರುತ್ತದೆ. ಅದರಲ್ಲೂ ವರ ಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಹೂವಿನ ಬೆಲೆ ಏರಿಕೆಯಾಗಿದೆ. ಕಳೆದ ವಾರಕ್ಕೆ ಹೋಲಿಸಿದರೆ ಬೆಲೆ ದುಪ್ಪಟ್ಟು ಆಗಿದೆ. ಬಾಳೆ ಎಲೆ, ಬಾಳೆ ಕಂದು ಬೆಲೆ ಕಡಿಮೆ ಇದೆ.

ವೇಗಕ್ಕೆ ಇನ್ನೊಂದು ಹೆಸರೇ `ಈಸೂರು ದಂಗೆ’, ಸಾಧನೆ ಕೇಳಿದ್ರೆ ಬೆಚ್ಚಿ ಬೀಳ್ತಿರಾ!

Leave a Reply

Your email address will not be published.