Har ghar tiranga | ಶಿವಮೊಗ್ಗದಲ್ಲಿ ಹರ್ ಘರ್ ತಿರಂಗಾ ಹವಾ

BJP Har Ghar Tiranga

 

 

ಸುದ್ದಿ ಕಣಜ.ಕಾಂ | DISTRICT | BIKE RALLY
ಶಿವಮೊಗ್ಗ: ನಗರದ ಎಂ.ಆರ್.ಎಸ್. ವೃತ್ತದಿಂದ ಬಿಜೆಪಿ ಕಚೇರಿಯವರೆಗೆ ಬೋಲೋ ಭಾರತ್ ಮಾತಾ ಕಿ ಜೈ, ಹರ್ ಘರ್ ತಿರಂಗಾ (HAR GHAR TIRANGA) ಘೋಷಣೆಗಳು ಮೊಳಗಿದವು.
75ನೇ ಭಾರತ ಸ್ವಾತಂತ್ರ್ಯ ಅಮೃತೋತ್ಸವ ಹಿನ್ನೆಲೆ ರಾಷ್ಟ್ರಪ್ರೇಮ ಜಾಗೃತಿ ಮೂಡಿಸುವ ಅನೇಕ ಕಾರ್ಯಕ್ರಮಗಳನ್ನು ಬಿಜೆಪಿ ಆಯೋಜಿಸಿದೆ. ಅದರ ಭಾಗವಾಗಿಯೇ ನಡೆಯುತ್ತಿರುವ ಹರ್ ಘರ್ ಮೆ ತಿರಂಗಾ ಅಭಿಯಾನಕ್ಕೆ ಜಿಲ್ಲೆಯಲ್ಲಿ ಅಭೂತಪೂರ್ವ ಸ್ಪಂದನೆ ದೊರೆತಿದೆ. ಅದರಲ್ಲೂ ಯುವಪೀಳಿಗೆ ಇದರಲ್ಲಿ ಪ್ರೀತಿಯಿಂದ ಭಾಗವಹಿಸಿದರು.

VIDEO REPORT

READ | ಬೆಳ್ಳಂಬೆಳಗ್ಗೆ ಪ್ರಾವಿಜನ್ ಸ್ಟೋರ್‍ಗೆ ಬೆಂಕಿ, ಲಕ್ಷಾಂತರ ಮೌಲ್ಯದ ಸಾಮಗ್ರಿಗಳು ಭಸ್ಮ

ಬೈಕ್ ರಾ ್ಯಲಿಗೆ ಚಾಲನೆ ನೀಡಿ ಮಾತನಾಡಿದ ಶಾಸಕ ಕೆ.ಎಸ್. ಈಶ್ವರಪ್ಪ, ರಾ ್ಯ ಲಿಯು ಸ್ವಾತಂತ್ರ್ಯ ಪೂರ್ವದ ಹೋರಾಟ ನೆನಪಿಸುತ್ತಿದೆ. ಪ್ರಪಂಚದಲ್ಲೇ ತ್ರಿವರ್ಣ ಧ್ವಜದ ಹಾರಬೇಕಿತ್ತು ಎಂಬ ನಮ್ಮ ಕನಸು ನನಸಾದಂತೆ ಭಾಸವಾಗುತ್ತಿದೆ ಎಂದರು.
ಎಲ್ಲೆಲ್ಲೂ ತ್ರಿವರ್ಣ ಧ್ವಜ…
ಎಂ.ಆರ್.ಎಸ್. ವೃತ್ತದಿಂದ ಶಿವಮೂರ್ತಿ ಸರ್ಕಲ್ ವರೆಗೆ ರಾ ್ಯಲಿ ನಡೆಯುವಾಗ ಮಹಿಳಾ ಕಾರ್ಯಕರ್ತೆಯರು ಮತ್ತು ಬಿಜೆಪಿ ನಾಯಕರು ಭಾಗವಹಿಸಿದ್ದರು. ಇದರಿಂದ ಎಲ್ಲೆಲ್ಲೂ ತ್ರಿವರ್ಣ ಧ್ವಜವೇ ಕಾಣುತಿತ್ತು.
ಸಂಸದ ಬಿ.ವೈ. ರಾಘವೇಂದ್ರ, ಪ್ರಮುಖರಾದ ಎಂ.ಬಿ. ಭಾನುಪ್ರಕಾಶ್, ಶಾಸಕರಾದ ಎಸ್. ರುದ್ರೇಗೌಡ, ಡಿ.ಎಸ್. ಅರುಣ್, ಆರ್.ಕೆ. ಸಿದ್ಧರಾಮಣ್ಣ, ಟಿ.ಡಿ. ಮೇಘರಾಜ್, ಜ್ಯೋತಿ ಪ್ರಕಾಶ್, ಮೇಯರ್ ಸುನೀತಾ ಅಣ್ಣಪ್ಪ, ಜಗದೀಶ್, ಬಳ್ಳೆಕೆರೆ ಸಂತೋಷ್, ವಿಶ್ವಾಸ್, ಸುರೇಖಾ ಮುರಳೀಧರ್ ಪಾಲ್ಗೊಂಡಿದ್ದರು.

https://suddikanaja.com/2022/08/07/har-ghar-tiranga-campaign-organize-in-shivamogga/

Leave a Reply

Your email address will not be published. Required fields are marked *

error: Content is protected !!