Assembly election | ಎರಡೇ ದಿನಗಳಲ್ಲಿ 8 ಲಕ್ಷ ನಗದು ಸೇರಿ 1.27 ಕೋಟಿ ಮೌಲ್ಯದ ಸಾಮಗ್ರಿ ಸೀಜ್

check post Assembly election

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ರಾಜ್ಯ ವಿಧಾನಸಭೆ ಚುನಾವಣೆ (assembly election) ನೀತಿ ಸಂಹಿತೆ (Modal code of conduct) ಜಾರಿಗೊಂಡು ಎರಡು ದಿನವಷ್ಟೇ ಕಳೆದಿದ್ದು, ಈ ಅವಧಿಯಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಲಕ್ಷಾಂತರ ನಗದು ಹಣ, ಮದ್ಯ, ಮಾದಕವಸ್ತುಗಳು ಸೇರಿ ಒಟ್ಟು 1.27 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

READ | ಮಕ್ಕಳೇ, ಎಸ್ಸೆಸ್ಸೆಲ್ಸಿ ಪರೀಕ್ಷೆ ಹಾಜರಾಗುವ ಮುನ್ನ ಒಮ್ಮೆ ಇದನ್ನು ಓದಿ, ಇಲ್ಲಿವೆ 13 ಟಿಪ್ಸ್

ಶಿವಮೊಗ್ಗ (shimoga) ಮತ್ತು ತೀರ್ಥಹಳ್ಳಿ(thirthahalli)ಯಲ್ಲಿ ತಲಾ 4 ಲಕ್ಷ ರೂ. ವಶಕ್ಕೆ ಪಡೆದಿದ್ದು, 3.75 ಲಕ್ಷ ರೂ. ಮೌಲ್ಯದ ಮದ್ಯ, 3.25 ಲಕ್ಷ ಮೌಲ್ಯದ ಮಾದಕ ವಸ್ತುಗಳು, ಇನ್ನಿತರ ವಸ್ತುಗಳು 4.98 ಲಕ್ಷ ಮೌಲ್ಯದ್ದು ಸೇರಿ ಎರಡು ದಿನಗಳಲ್ಲಿ ಒಟ್ಟು 1.27 ಕೋಟಿ ಮೌಲ್ಯದ ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ.

error: Content is protected !!