Shiralakoppa | ಶಿರಾಳಕೊಪ್ಪದಲ್ಲಿ ವ್ಯಕ್ತಿಯೊಬ್ಬರಿಗೆ ಚಾಕು‌ ಇರಿದು ಕೊಲೆ

Breaking news

 

 

  • ಶಿರಾಳಕೊಪ್ಪದ ಶ್ರೀಧರ್ ನರ್ಸಿಂಗ್ ಹೋಂ ಹತ್ತಿರ ಮನೆ ನಿರ್ಮಾಣದ ಹಣ ನೀಡುವಂತೆ ಜಗಳ, ಕೊಲೆಯಲ್ಲಿ ಅಂತ್ಯ
  • ಹೊಟ್ಟೆಗೆ ಚಾಕುವಿನಿಂದ ಇರಿತ, ಗಾಯಾಳುವನ್ನು ಆಸ್ಪತ್ರೆಗೆ ದಾಖಲು, ಚಿಕಿತ್ಸೆ ಫಲಿಸದೇ ಸಾವು

ಸುದ್ದಿ ಕಣಜ.ಕಾಂ‌| TALUK | 27 AUG 2022
ಶಿಕಾರಿಪುರ: ಮನೆ ನಿರ್ಮಾಣ ಮಾಡಿದ ಹಣದ ವಿಚಾರವಾಗಿ ನಡೆದ ಗಲಾಟೆ‌ ಕೊಲೆ(murder)ಯಲ್ಲಿ ಅಂತ್ಯಗೊಂಡ ಘಟನೆ ಶನಿವಾರ ಬೆಳಗ್ಗೆ ಶಿರಾಳಕೊಪ್ಪ(shiralakoppa)ದಲ್ಲಿ ಸಂಭವಿಸಿದೆ.
ಶಿರಾಳಕೊಪ್ಪ ಪಟ್ಟಣದ ಗಾಂಧಿನಗರ ನಿವಾಸಿ ದಯಾನಂದ್ (69) ಮೃತರು.
ಹೊಸ ಕಟ್ಟಡವನ್ನು ಶಿರಾಳಕೊಪ್ಪ ಪಟ್ಟಣದ ಶ್ರೀಧರ್ ನರ್ಸಿಂಗ್ ಹೋಂ ಹತ್ತಿರ ನಿರ್ಮಿಸುತ್ತಿದ್ದು, ಕಟ್ಟಡದ ಕಾಮಗಾರಿಯನ್ನು ಸೊರಬ ತಾಲೂಕಿನ ಚನ್ನಾಪುರದ ಕೊಟ್ರೇಶ್ ಎಂಬಾತನಿಗೆ ಗುತ್ತಿಗೆ (contract) ನೀಡಿದ್ದಾರೆ. ಆದರೆ, ಕೊಟ್ರೇಶನು ಸರಿಯಾಗಿ ಕಟ್ಟಡದ ಕೆಲಸವನ್ನು ಮಾಡದೇ ಇದ್ದುರಿಂದ  ದಯಾನಂದ್ ಅವರು ಕಟ್ಟಡ ನಿರ್ಮಾಣ ಕೆಲಸದಿಂದ ಅವನನ್ನು ಬಿಡಿಸಿರುತ್ತಾರೆ. ನಂತರ ಕೊಟ್ರೇಶನು ತಾನು ಇಲ್ಲಿಯವರೆಗೂ ಮಾಡಿದ ಕೆಲಸದ ಬಾಬ್ತು ಹಣವನ್ನು ನೀಡುವಂತೆ ದಯಾನಂದ್ ಅವರಿಗೆ ಹಲವು ಬಾರಿ ಕೇಳಿದ್ದರೀ ಕೊಟ್ಟಿರುವುದಿಲ್ಲ.

READ | ಶಿವಮೊಗ್ಗದಲ್ಲಿ ಡಿಜೆ ನಿಷೇಧ, ಯಾವಾಗಿಂದ ನಿಯಮ ಅನ್ವಯ?

ಚಾಕು‌ ಇರಿತ, ಚಿಕಿತ್ಸೆ ಫಲಕಾರಿಯಾಗದೇ ಸಾವು
ಶನಿವಾರ ಬೆಳಗ್ಗೆ ಕೊಟ್ರೇಶನು ಶ್ರೀಧರ್ ನರ್ಸಿಂಗ್ ಹೋಂ ಹತ್ತಿರ ನಿರ್ಮಿಸುತ್ತಿರುವ ಹೊಸ ಕಟ್ಟಡದ ಬಳಿ ಬಂದು ಬಾಕಿ ಹಣವನ್ನು ನೀಡು ಎಂದು ಕೇಳಿದಾಗ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಆಗ ಕೊಟ್ರೇಶನು ತನ್ನ ಬಳಿ ಇದ್ದ ಚಾಕುವಿನಿಂದ ದಯಾನಂದ್ ಅವರ ಹೊಟ್ಟೆಗೆ ಹಲ್ಲೆ ಮಾಡಿ ರಕ್ತ ಗಾಯಪಡಿಸಿದ್ದು, ಕೂಡಲೇ ಅವರನ್ನು ಚಿಕಿತ್ಸೆಗಾಗಿ ಶಿರಾಳಕೊಪ್ಪ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.‌ ಆದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ. ಅವರ  ಮಗನಾದ ರಾಘವೇಂದ್ರ(40) ಅವ್ ಎದೆಗೆ ಹಲ್ಲೆ ಮಾಡಿ ರಕ್ತ ಗಾಯ ಪಡಿಸಿದ್ದು, ಆತನನ್ನು ಚಿಕಿತ್ಸೆ ಸಂಬಂಧ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

https://suddikanaja.com/2020/12/30/penalty-for-dumping-waste-in-empty-land-city-corporation-official-filed-complaint-in-vinobnagar-police-station/

Leave a Reply

Your email address will not be published. Required fields are marked *

error: Content is protected !!