Funeral | ಮಾಲತಿ ನದಿಯಲ್ಲೇ‌ ಶವ ಸಾಗಿಸಿ‌ ಅಂತ್ಯಸಂಸ್ಕಾರ! ಇದು ಹೃದಯ ಕಲಕುವ ಘಟನೆ

Funeral thirthahalli

 

 

ಸುದ್ದಿ ಕಣಜ.ಕಾಂ | TALUK | RAINFALL
ತೀರ್ಥಹಳ್ಳಿ: ಮಳೆಯಿಂದ ಮೈದುಂಬಿ‌ ಹರಿಯುತ್ತಿರುವ ನದಿಗಳು‌ ಮಲೆನಾಡಿಗರ ಬದುಕನ್ನೇ ಅದ್ವಾನಗೊಳಿಸಿರುವುದು ಒಂದೆಡೆಯಾದರೆ ಅಂತ್ಯಸಂಸ್ಕಾರಕ್ಕೂ ಪರದಾಡಿದ ಹೃದಯ ಕಲಕುವ ಘಟನೆಯೊಂದು ತಾಲೂಕಿನ ಕೋಡ್ಲ‌ ಗ್ರಾಮದಲ್ಲಿ ನಡೆದುಹೋಗಿದೆ.
ನಡೆದಿದ್ದೇನು?
ಕೋಡ್ಲು ಗ್ರಾಮದಲ್ಲಿ ಸ್ಮಶಾನಕ್ಕೆ‌ ತೆರಳಲು ಸಮರ್ಪಕ ರಸ್ತೆ ಇಲ್ಲ‌. ಹೀಗಾಗಿ, ಏನಿದ್ದರೂ ನದಿ ಮಾರ್ಗದ ಮೂಲಕವೇ ತೆರಳಬೇಕು. ಕುತ್ತಿಗೆವರೆಗೂ ಇರುವ ನೀರನ್ನು ದಾಟಿ ಸ್ಮಶಾನ ತಲುಪಬೇಕು. ಇತ್ತೀಚೆಗೆ ಇಂತಹದ್ದೇ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

READ | ಕುವೆಂಪು ವಿವಿ ವ್ಯಾಪ್ತಿಯ ಕಾಲೇಜುಗಳಲ್ಲಿ ಡಿಗ್ರಿ ಪ್ರವೇಶಾತಿ ದಿನಾಂಕ ವಿಸ್ತರಣೆ, ಎನ್.ಇ.ಪಿ ಬಗ್ಗೆ ವಿವಿ ಮಹತ್ವದ ಪ್ರಕಟಣೆ 

ಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಡ್ಲು ಗ್ರಾಮದ ತಿಮ್ಮಯ್ಯಗೌಡ(80) ಮಯೋಸಹಜವಾಗಿ ಮೃತಪಟ್ಟಿದ್ದರು. ಅವರ ಮೃತದೇಹವನ್ನು ಹೊತ್ತು ಮಾಲತಿ ನದಿ ದಾಟಿದ ವಿಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ಆರು ಜನ ಸೇರಿ‌ ಶವವನ್ನು ಕೊಂಡೊಯ್ಯಲು ಪ್ರಯಾಸಪಟ್ಟರು.
ಎದೆಮಟ್ಟಕ್ಕೆ‌ ನೀರಿದ್ದರೂ ಸಂಬಂಧಿಕರು‌ಜೀವದ ಪರಿವನ್ನು ಬಿಟ್ಟು ಶವಸಂಸ್ಕಾರಕ್ಕಾಗಿ ನದಿ ದಾಟಿ ಹೋಗಿದ್ದಾರೆ. ಜೋರಾಗಿ ಮಳೆ ಸುರಿಯುತ್ತಿದ್ದರಿಂದ ಶೀಟ್ ಹಾಕಿ ತಾತ್ಕಾಲಿಕ ಶೆಡ್ ನಿರ್ಮಿಸಿಕೊಂಡು ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.

ತುರ್ತು ಆಗಬೇಕಿರುವುದೇನು?

  • ಸ್ಮಶಾನದ ಹಾದಿಗೆ ಮಣ್ಣು ಹಾಕಿ ಎತ್ತರಿಸಬೇಕು. ಈ ಬಗ್ಗೆ ಗ್ರಾಮಸ್ಥರು ಹಲವು ಸಲ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮನವಿ‌ ಮಾಡಿದರೂ ಪ್ರಯೋಜನ ಶೂನ್ಯ.
  • ಮಳೆಗಾಲ ಆರಂಭವಾದರೆ ಮೂರ್ನಾಲ್ಕು‌ ತಿಂಗಳು ರಸ್ತೆಯಲ್ಲಿ ನೀರು‌ ಹರಿಯುತ್ತದೆ. ಇದರಿಂದ ಓಡಾಡುವುದಕ್ಕೆ ಆಗುವುದಿಲ್ಲ. ಯಾವುದೇ ತುರ್ತು ಸಂದರ್ಭದಲ್ಲೂ ಸೂಕ್ತ ರಸ್ತೆ ವ್ಯವಸ್ಥೆ ಇಲ್ಲ. ಆದ್ದರಿಂದ, ಶಾಶ್ವತ ಪರಿಹಾರ ಕಲ್ಪಿಸಬೇಕು.

https://suddikanaja.com/2020/12/27/open-heart-surgery-in-narayana-hrudayalaya-shivamogga/

Leave a Reply

Your email address will not be published. Required fields are marked *

error: Content is protected !!