ಸೋಲಾರ್ ವಾಟರ್ ಹೀಟರ್ ಸರ್ವೀಸ್ ನೀಡದ ಕಂಪನಿಗೆ ಬಿತ್ತು ಭಾರೀ ದಂಡ

Consumer forum

 

 

ಸುದ್ದಿ ಕಣಜ.ಕಾಂ | DISTRICT | CONSUMER FORUM
ಶಿವಮೊಗ್ಗ: ಸೋಲಾರ್ ವಾಟರ್ ಹೀಟರ್ (Solar water heater) ನಲ್ಲಿ ಕಂಡು ಬಂದ ನ್ಯೂನ್ಯತೆಗಳನ್ನು ಸರಿಪಡಿಸುವಲ್ಲಿ ನಿರ್ಲಕ್ಷ್ಯ ತೋರಿದ ಬೆಂಗಳೂರಿನ ಖಾಸಗಿ ಕಂಪನಿಯೊಂದಕ್ಕೆ ಗ್ರಾಹಕರ ನ್ಯಾಯಾಲಯ ದಂಡ ವಿಧಿಸಿ ಆದೇಶಿಸಿದೆ.
2019-20ರಲ್ಲಿ ಗೃಹೋಪಯೋಗಕ್ಕಾಗಿ ಎ.ಜೆ.ರಾಜೇಶ್ ಎಂಬುವವರು ಸೋಲಾರ್ ವಾಟರ್ ಹೀಟರ್ ಅನ್ನು 40,000 ರೂಪಾಯಿ ಪಾವತಿಸಿ ಖರೀದಿಸಿದ್ದರು. ಅದರಲ್ಲಿ ಕೆಲವು ನ್ಯೂನ್ಯತೆಗಳು ಕಂಡುಬಂದಿದ್ದವು. ಸಾಕಷ್ಟು ಬಾರಿ ಸರಿಪಡಿಸಿಕೊಂಡರೂ ಸಮಸ್ಯೆ ಪರಿಹಾರವಾಗಿರಲಿಲ್ಲ. ಆಗ ಲಿಖಿತ ನೋಟಿಸಿನ ಮೂಲಕ ವಿನಂತಿಸಿದರೂ ಕಂಪನಿಯಿಂದ ಪ್ರತಿಕ್ರಿಯೆ ಬಂದಿಲ್ಲ.

READ | ಶಿರಾಳಕೊಪ್ಪ ಪೊಲೀಸರ ಭರ್ಜರಿ ಕಾರ್ಯಾಚರಣೆ, ಕಾರಿನಲ್ಲಿತ್ತು ರಾಶಿ ರಾಶಿ ಮದ್ಯ

ಈ ಕಾರಣಕ್ಕಾಗಿ ಕಂಪನಿಯ ವಿರುದ್ದ ರಾಜೇಶ್ ಅವರು ತಾವು ಖರೀದಿಸಿದ ಸರಕಿನ ಸೇವಾ ನ್ಯೂನ್ಯತೆಗಾಗಿ ಸೂಕ್ತ ಪರಿಹಾರ ಕೋರಿ ಶಿವಮೊಗ್ಗ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ(Shimoga District Consumer Disputes Redressal Commission)ದ ಮುಂದೆ ದಾಖಲಿಸಿದ್ದ ಪ್ರಕರಣದಲ್ಲಿ ಪೀಠವು ಅರ್ಜಿದಾರರಿಗೆ ಸರಕಿನ ಹಣ ಮತ್ತು ನ್ಯಾಯಾಲಯದ ಮತ್ತು ಇತರೆ ಖರ್ಚುವೆಚ್ಚ ಪಾವತಿಸುವಂತೆ ಆದೇಶಿಸಿದೆ.
ಪೀಠ ನೀಡಿದ ಆದೇಶವೇನು?
ವಾಸ್ತವಾಂಶಗಳನ್ನು ಕೂಲಂಕಶವಾಗಿ ಪರಿಶೀಲಿಸಿ ಪೀಠವು ಎದುರುದಾರರಿಗೆ ವಾಟರ್ ಹೀಟರ್ ಹಿಂಪಡೆಯುವ ಮುಖಾಂತರ ಖರೀದಿಸಿದ ಮೊತ್ತ 40,000 ರೂಪಾಯಿಗಳನ್ನು ಖರೀದಿಯ ದಿನಾಂಕದಿಂದ ಹಣ ಸಂದಾಯ ಮಾಡುವವರೆಗೆ ವಾರ್ಷಿಕ ಶೇ.7 ಬಡ್ಡಿ ದರದಂತೆ ಹಿಂತಿರುಗಿಸಲು ಮತ್ತು ನ್ಯಾಯಾಲಯ ಇತರೆ ವೆಚ್ಚ 18000 ರೂ.ಗಳನ್ನು ಹಿಂತಿರುಗಿಸುವಂತೆ ಆಯೋಗದ ಅಧ್ಯಕ್ಷ ಟಿ.ಶಿವಣ್ಣ, ಸದಸ್ಯರಾದ ಸವಿತಾ ಬಿ ಪಟ್ಟಣಶೆಟ್ಟಿ, ಬಿ.ಡಿ.ಯೋಗಾನಂದ ಪೀಠವು ಆದೇಶಿಸಿದೆ.

https://suddikanaja.com/2022/02/20/mineral-water-plant-to-be-set-up-in-shimoga-by-karnataka-soaps-and-detergents-limited/

Leave a Reply

Your email address will not be published. Required fields are marked *

error: Content is protected !!