
ಸುದ್ದಿ ಕಣಜ.ಕಾಂ | NATIONAL | HAR GHAR TIRANGA
ನವದೆಹಲಿ: ದೆಹಲಿಯ ಕೆಂಪು ಕೋಟೆಯಿಂದ ವಿಜಯ ಚೌಕ್’ವರೆಗೆ ನೆಡೆದ ಹರ್ ಘರ್ ತಿರಂಗಾ ಬೈಕ್ ರ್ಯಾಲಿಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ ಮಿಂಚಿದ್ದು ವಿಶೇಷವಾಗಿತ್ತು.
ರಾಘವೇಂದ್ರ ಅವರು ಸಚಿವರು ಹಾಗೂ ಸಂಸದರೊಂದಿಗೆ ರ್ಯಾಲಿಯಲ್ಲಿ ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಕೇಂದ್ರದ ಸಂಸದೀಯ ವ್ಯವಹಾರ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಷಿ ಉಪಸ್ಥಿತರಿದ್ದರು.