House collapse | ಜನರ ಜೀವ ಮುಖ್ಯವೋ, ಧ್ವಜ ಹಾರಿಸುವುದು ಮುಖ್ಯವೋ? ಪಿಡಿಓ ವಿರುದ್ಧ ಕಾಂಗ್ರೆಸ್ ನಾಯಕಿ ಗರಂ

congress Pallavi

 

 

ಸುದ್ದಿ ಕಣಜ.ಕಾಂ | TALUK | RAINFALL
ಶಿವಮೊಗ್ಗ: ಗ್ರಾಮಾಂತರ ಪ್ರದೇಶದಲ್ಲಿ ನಿರಂತರ ಮಳೆ ಸುರಿಯುತ್ತಿದ್ದು, ಹಲವೆಡೆ ಮನೆಗಳು ಕುಸಿದಿವೆ. ಅದನ್ನು ಅರಿತು ಪರಿಶೀಲನೆಗೆಂದು ಹೋದಾಗ ಕಾಂಗ್ರೆಸ್ ಜಿಲ್ಲಾ ವಕ್ತಾರೆ ಜಿ.ಪಲ್ಲವಿ ಸಂತ್ರಸ್ತರು ತಮ್ಮ ಗೋಳನ್ನು ತೋಡಿಕೊಂಡಿದ್ದಾರೆ.

ವಿಡಿಯೋ ವೀಕ್ಷಿಸುವುದಕ್ಕಾಗಿ ಕ್ಲಿಕ್ ಮಾಡಿ (VIDEO REORT)

READ |  ಬೀಗರೂಟ ತಂದ ಫಜೀತಿ, ಬಾಣಸಿಗ ಸೇರಿ 11 ಜನರ ವಿರುದ್ಧ ಕೇಸ್

ಪಿಡಿಓ ವಿರುದ್ಧ ಹರಿಹಾಯ್ದ ಪಲ್ಲವಿ
ಕೊಮ್ಮನಾಳು ಗ್ರಾಮದಲ್ಲಿ ಯಶೋದಮ್ಮ ಮತ್ತು ಕಾಂತಿ ಬಾಯಿ ಎಂಬುವವರ ಮನೆಗಳಿಗೆ ಭೇಟಿ ನೀಡಿದ ಅವರು ಸಾಂತ್ವನ ನೀಡಿದರು. ಶನಿವಾರ ಮನೆ ಕುಸಿದರೂ ಅಧಿಕಾರಿಗಳು ಮನೆಗೆ ಬಂದಿಲ್ಲ ಎಂದು ಸಂತ್ರಸ್ತರು ಅಳಲು ತೋಡಿಕೊಂಡರು.
ತಕ್ಷಣ ಸಂಬಂಧಪಟ್ಟ ಪಿಡಿಒಗೆ ಕರೆದು ವಿಚಾರವನ್ನು ತಿಳಿದುಕೊಳ್ಳಲು ಪ್ರಯತ್ನಿಸಿದ್ದಾರೆ. ಆಗ ಪಿಡಿಓ ಅವರ ‘ಧ್ವಜ ವಿತರಣೆ ಮಾಡಲು ಹೋಗಿದ್ದೆ. ಧ್ವಜಕ್ಕೆ ಬೇಕಾಗಿರುವ ಕೋಲು ತರಲು ಹೋಗಿದ್ದೆ’ ಎಂಬ ಸಮಜಾಯಿಷಿ ನೀಡಿದರು. ಇದರಿಂದ ಕೆಂಡಾಮಂಡಲಗೊಂಡ ಪಲ್ಲವಿ, ‘ಜನರ ಹೆಣದ ಮೇಳೆ ಧ್ವಜ ನೆಡಲು ಹೊರಟಿದ್ದಾರೆ?’ ಎಂದು ಖಾರವಾಗಿ ಪ್ರಶ್ನಿಸಿದರು. ಕೂಡಲೇ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
‘ಜನರ ಪ್ರಾಣ ಮುಖ್ಯವೋ? ಬಾವುಟ ಹಾರಿಸುವುದು ಮುಖ್ಯವೋ? ಎಂದು ತರಾಟೆ ತೆಗೆದುಕೊಂಡರು.

https://suddikanaja.com/2022/08/04/har-ghar-tiranga-meeting-at-shimoga-instruction-on-people/

Leave a Reply

Your email address will not be published. Required fields are marked *

error: Content is protected !!