Arrest | ಭದ್ರಾವತಿ ಮನೆಯಲ್ಲಿ ಕಳ್ಳತನ, ಹೊಸಮನೆ ನಿವಾಸಿ ಅರೆಸ್ಟ್, ಲಕ್ಷಾಂತರ ಮೌಲ್ಯದ ಚಿನ್ನಾಭರಣ ಸೀಜ್

bhadravathi arrrest

 

 

ಸುದ್ದಿ ಕಣಜ.ಕಾಂ | 18 AUG 2022 | CRIME NEWS
ಭದ್ರಾವತಿ: ಒಂದು ಕಳ್ಳತನ ಪ್ರಕರಣದ ಕಾರ್ಯಾಚರಣೆ ಕೈಗೊಂಡ ಹೊಸಮನೆ ಪೊಲೀಸರು ಎರಡು ಕೇಸ್ ಗಳನ್ನು ಬೇಧಿಸಲು ಸಫಲರಾಗಿದ್ದಾರೆ.
ಹೊಸಮನೆ ಮೂರನೇ ಕ್ರಾಸ್ ನಿವಾಸಿ ವಸಂತರಾಜು(37) ಎಂಬಾತನನ್ನು ಗುರುವಾರ ಬಂಧಿಸಲಾಗಿದೆ. ಈತನ ಬಳಿಯಿಂದ ₹5,89,500 ಮೌಲ್ಯದ 131 ಗ್ರಾಂ ಬಂಗಾರದ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ.

READ | ನಿಷೇಧಾಜ್ಞೆ ಮುಂದುವರಿಕೆ, ಎಲ್ಲಿಯವರೆಗೆ ಇರಲಿದೆ ಸೆಕ್ಷನ್ 144?

ಮನೆಯ ಬೀಗ ಮುರಿದು ಕಳ್ಳತನ
2021ರ ಜನವರಿ 11ರ ಬೆಳಗ್ಗೆ ಭದ್ರಾವತಿ ಹಳೆನಗರ ಪೊಲೀಸ್‌ ಠಾಣೆ ವ್ಯಾಪ್ತಿಯ ಭೂತನಗುಡಿ ವಾಸಿಯೊಬ್ಬರು ತಮ್ಮ ವಾಸದ ಮನೆಯ ಬಾಗಿಲಿಗೆ ಬೀಗವನ್ನು ಹಾಕಿ, ಬೀಗದ ಕೀ ಅನ್ನು ತುಳಸಿ ಕಟ್ಟೆಯ ಹತ್ತಿರ ಇಟ್ಟು ಹೊರ ಹೋಗಿದ್ದಾಗ ಯಾರೋ ಕಳ್ಳರು ಬೀಗದ ಕೀ ತೆಗೆದುಕೊಂಡು ಮನೆಯೊಳಗೆ ಪ್ರವೇಶಿಸಿ ಬೀರುವಿನಲ್ಲಿ ಇಟ್ಟಿದ್ದ ಬಂಗಾರದ ಆಭರಣಗಳು, ನಗದು ಹಣ ಮತ್ತು ಮೊಬೈಲ್‌ ಫೋನ್‌ ಅನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದರು.
ಈ ಸಂಬಂಧ ನೀಡಲಾದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ತನಿಖೆ ಆರಂಭಿಸಿದ ಭದ್ರಾವತಿ ನಗರ ವೃತ್ತದ ಸಿಪಿಐ ಮತ್ತು ಹೊಸಮನೆ ಪೊಲೀಸ್‌ ಠಾಣೆ ಪಿಎಸ್ಐ ಹಾಗೂ ಸಿಬ್ಬಂದಿ ತಂಡವು ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ಲಕ್ಷಾಂತರ ಮೌಲ್ಯದ ಚಿನ್ನಾಭರಣ ಜಪ್ತಿ
ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಬಳಿಕ ಹೊಸಮನೆ ಪೊಲೀಸ್‌ ಠಾಣೆಯ 1 ಮತ್ತು ಭದ್ರಾವತಿ ಹಳೆನಗರ ಪೊಲೀಸ್‌ ಠಾಣೆಯ 1 ಪ್ರಕರಣ ಸೇರಿ ಒಟ್ಟು 2 ಕಳ್ಳತನ ಪ್ರಕರಣಗಳಲ್ಲಿ ಕಳ್ಳತನ ಮಾಡಲಾದ ಅಂದಾಜು ಮೌಲ್ಯ ₹5,89,500ದ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ.

Leave a Reply

Your email address will not be published. Required fields are marked *

error: Content is protected !!