Court News | ಷರೀಫ್’ಗೆ ಬೇಲ್, ಪ್ರೇಮ್ ಸಿಂಗ್’ಗೆ ಚಾಕು ಇರಿದ ಆರೋಪಿಗಳಿಗೆ ನ್ಯಾಯಾಂಗ ಬಂಧನ

Shivamogga Court

 

 

  • ವೀರ ಸಾವರ್ಕರ್ ಚಿತ್ರ‌ ಇರಿಸಿದ್ದನ್ನು ವಿರೋಧಿಸಿ ಸರ್ಕಾರಿ‌ ಅಧಿಕಾರಿಗಳ‌ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಬಂಧನಕ್ಕೆ‌ ಒಳಗಾಗಿದ್ದ ಎಂ.ಡಿ.ಷರೀಫ್
  • ಕೆಲವು ಷರತ್ತುಗಳನ್ನು ವಿಧಿಸಿ ಎಂ.ಡಿ.ಷರೀಫ್ ಗೆ ಜಾಮೀನು ಮಂಜೂರು ಮಾಡಿದ ಎರಡನೇ ಜೆ.ಎಂ.ಎಫ್.ಸಿ ನ್ಯಾಯಾಲಯ
  • ಗಾಂಧಿಬಜಾರಿನಲ್ಲಿ ಪ್ರೇಮ್ ಸಿಂಗ್ ಚಾಕು ಇರಿತ ಪ್ರಕರಣದ ಮೂರು ಜನ ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ

ಸುದ್ದಿ ಕಣಜ.ಕಾಂ | 21 AUG 2022 | COURT NEWS
ಶಿವಮೊಗ್ಗ: ಸ್ವಾತಂತ್ರ್ಯ ಅಮೃತ ಮಹೋತ್ಸವ ಪ್ರಯುಕ್ತ ನಗರದ ಸಿಟಿ ಸೆಂಟರ್ ಮಾಲ್’ನಲ್ಲಿ ವೀರ ಸಾವರ್ಕರ್ ಫೋಟೊ ಇರಿಸಿದ್ದನ್ನು ವಿರೋಧಿಸಿ ಸರ್ಕಾರಿ‌ ಅಧಿಕಾರಿಗಳ‌ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಬಂಧನಕ್ಕೆ‌ ಒಳಪಟ್ಟ ಎಂ.ಡಿ.ಷರೀಫ್‌ಗೆ ಜಾಮೀನು‌ ಮಂಜೂರು ಮಾಡಲಾಗಿದೆ.
ಆಗಸ್ಟ್ 14ರಂದು ಸಿಟಿ ಸೆಂಟರ್ ಮಾಲ್’ನಲ್ಲಿ ಸಾವರ್ಕರ್ ಚಿತ್ರ ಇರಿಸಿದ್ದಕ್ಕೆ ಷರೀಫ್ ಅವರು ವಿರೋಧ ವ್ಯಕ್ತಪಡಿಸಿ ತೆರವುಗೊಳಿಸುವಂತೆ ಆಗ್ರಹಿಸಿದ್ದರು. ಪಾಲಿಕೆಯ ಆಯುಕ್ತರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆಂಬ ಕಾರಣಕ್ಕೆ ಪೊಲೀಸರು ದೂರು ದಾಖಲಿಸಿ‌ ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದರು. ಆ.26ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.
ಈ‌ ನಡುವೆ ಷರೀಫ್ ಜಾಮೀನು ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಆದರೆ, ಅರ್ಜಿ ವಿಚಾರಣೆ ಮುಂದೂಡಲಾಗಿತ್ತು. ಶನಿವಾರ ವಿಚಾರಣೆ ನಡೆಸಿ‌ದ ನ್ಯಾಯಾಧೀಶರು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದಾರೆ.

READ | ಶಿರಾಳಕೊಪ್ಪ‌ ಪೊಲೀಸರ ಭರ್ಜರಿ ಕಾರ್ಯಾಚರಣೆ, ಒಂದು ಕೇಸ್ ಬೇಧಿಸಲು ಹೋಗಿ 14 ಪ್ರಕರಣ ಪತ್ತೆ

ವಿಧಿಸಿರುವ ಷರತ್ತುಗಳೇನು?

  • ಠಾಣಾಧಿಕಾರಿ ಪ್ರಕರಣದ‌ ವಿಚಾರಣೆಗೆ ಕರೆದರೆ ಹಾಜರಾಗುವ ಮೂಲಕ ಸಹಕಾರ ನೀಡಬೇಕು.
  • ನ್ಯಾಯಾಲಯಕ್ಕೆ ₹50,000 ಬಾಂಡ್ ಹಾಜರುಪಡಿಸಬೇಕು.
  • ಯಾವುದೇ ಕಾರಣಕ್ಕೂ ಸಾಕ್ಷ್ಯ ನಾಶ ಮಾಡಬಾರದು.

ಚಾಕು‌ ಇರಿತ ಪ್ರಕರಣದ ಆರೋಪಿಗಳಿಗೆ ನ್ಯಾಯಾಂಗ ಬಂಧನ
ನಗರದ ಅಮೀರ್‌ ಅಹ್ಮದ್ ವೃತ್ತದಲ್ಲಿ ಆಗಸ್ಟ್ 15ರಂದು ವೀರ ಸಾವರ್ಕರ್ ಫ್ಲೆಕ್ಸ್ ತೆರವುಗೊಳಿಸಲು ಯತ್ನಿಸಿದಾಗ ಗಲಾಟೆ‌ ಉಂಟಾಗಿದೆ.
ಗಾಂಧಿ ಬಜಾರ್’ನಲ್ಲಿ ಪ್ರೇಮ್ ಸಿಂಗ್ ಎಂಬುವವರಿಗೆ ಚಾಕು ಇರಿಯಲಾಗಿದೆ. ಈ ಪ್ರಕರಣದ ಆರೋಪಿಗಳಾದ ನದೀಮ್, ಅಬ್ದುಲ್ ರೆಹಮಾನ್ ಅವರಿಗೆ ಐದನೇ ಜೆಎಂ.ಎಫ್.ಸಿ ನ್ಯಾಯಾಧೀಶರು 14 ನ್ಯಾಯಾಂಗ ಬಂಧನ ವಿಧಿಸಿದೆ.
ಮೂವರು ಆರೋಪಿಗಳನ್ನು ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಪಡೆಯಲಾಗಿತ್ತು. ಇದು ಶನಿವಾರ ಅಂತ್ಯಗೊಂಡಿದ್ದು, ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.

https://suddikanaja.com/2022/08/16/section-144-imposed-in-shivamogga-2/

Leave a Reply

Your email address will not be published. Required fields are marked *

error: Content is protected !!