Grama Vastavya | ಮುಕ್ತ ಮನಸ್ಸಿನಿಂದ ಮಕ್ಕಳೊಂದಿಗೆ ಬೆರೆತ ಡಿಸಿ‌, ಎಲ್ಲೆಲ್ಲಿ ಭೇಟಿ‌ ನೀಡಿದರು?

DC Grama Vastavya

 

 

ಸುದ್ದಿ ಕಣಜ.ಕಾಂ | 20 AUG 2022 | DC GRAMA VASTAVYA
ಶಿವಮೊಗ್ಗ: ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರು ಭದ್ರಾವತಿ ತಾಲೂಕಿನ ಹುಣಸೆಕಟ್ಟೆ ಗ್ರಾಮದಲ್ಲಿ ಶನಿವಾರ ನಡೆಸಿದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಜೊತೆಗೆ ಬೆರೆತು ಅವರ ಮಾತುಗಳನ್ನು ಆಲಿಸಿದರು. ಶಾಲೆ, ವಿದ್ಯಾರ್ಥಿ ನಿಲಯ ಹಾಗೂ ಆರೋಗ್ಯ ಕೇಂದ್ರಗಳ‌ ಸ್ಥಿತಿಯನ್ನು ಅವಲೋಕಿಸಿದರು.
ಹುಣಸೆಕಟ್ಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಗೆ ಭೇಟಿ ನೀಡಿದ ಡಿಸಿ, ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ತಿಳಿವಳಿಕೆ ಮೂಡಿಸಿದರು. ಯುಪಿಎಸ್ಸಿ ಮತ್ತು ಕೆಪಿಎಸ್ಸಿ‌ ಪರೀಕ್ಷೆಗಳ ಬಗ್ಗೆ ಮಾಹಿತಿ ಹಂಚಿಕೊಂಡರು.‌ ವಿದ್ಯಾರ್ಥಿಗಳು ಹೊಂದಿರುವ ಗುರಿಯನ್ನು ಕೇಳಿ‌ ಅದನ್ನು ಸಾಧಿಸಲು ಮಾಡಬೇಕಾದ ಪ್ರೆಯತ್ನಗಳ‌ ಬಗ್ಗೆ ಮಾರ್ಗದರ್ಶನ ನೀಡಿದರು.
ಸಿಂಗನಮನೆಯ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದ ಡಾ.ಸೆಲ್ವಮಣಿ, ಹಾಸ್ಟೆಲ್ ನಲ್ಲಿ ನೀಡುತ್ತಿರುವ ಆಹಾರ, ಏನೇನು ಕೊಡುತ್ತಿದ್ದಾರೆ? ಗುಣಮಟ್ಟವನ್ನು ಪರಿಶೀಲಿಸಿದರು.

DC Grama vastavya BRP
ಭದ್ರಾವತಿ ತಾಲೂಕು‌ ಹುಣಸೆಕಟ್ಟೆ ಗ್ರಾಮದಲ್ಲಿ ಅಧಿಕಾರಿಗಳಿಂದ ಮಾಹಿತಿ‌ ಪಡೆಯುತ್ತಿರುವ ಡಿಸಿ‌ ಡಾ.ಆರ್.ಸೆಲ್ವಮಣಿ.

READ | ಶಿರಾಳಕೊಪ್ಪ‌ ಪೊಲೀಸರ ಭರ್ಜರಿ ಕಾರ್ಯಾಚರಣೆ, ಒಂದು ಕೇಸ್ ಬೇಧಿಸಲು ಹೋಗಿ 14 ಪ್ರಕರಣ ಪತ್ತೆ

ಸಂಯುಕ್ತ ಆಸ್ಪತ್ರೆಗೆ ಭೇಟಿ, ತಪಾಸಣೆ
ಸಿಂಗನಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಆರ್ ಪ್ರಾಜೆಕ್ಟ್ (BRP) ಸಂಯುಕ್ತ ಆಸ್ಪತ್ರೆಗೆ ಭೇಟಿ‌ ನೀಡಿ‌ ಲಸಿಕೆ, ಔಷಧದ ದಾಸ್ತಾನು, ಲಭ್ಯ ಚಿಕಿತ್ಸೆಗಳ ಬಗ್ಗೆ ಮಾಹಿತಿ ಪಡೆದರು. ಯಾವುದಾದರೂ ಸಮಸ್ಯೆಗಳಿದ್ದರೆ ತಿಳಿಸುವಂತೆ ಮನವಿ ಮಾಡಿದರು.
ಎಲ್ಲೆಲ್ಲಿ ಭೇಟಿ?
ರಾಷ್ಟ್ರೀಯ ಮೀನು ಮರಿ ಉತ್ಪಾದನಾ ಕೇಂದ್ರ ಬಿ ಆರ್ ಪಿ, ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಸಿಂಗನಮನೆ, ಹುಣಸೆಕಟ್ಟೆ ಸರ್ಕಾರಿ ಪ್ರೌಢಶಾಲೆ, ಸಿಂಗನಮನೆ ಸ್ವಚ್ಚ ಸಂಕೀರ್ಣ ಘಟಕ, ಸಂಯುಕ್ತ ಆಸ್ಪತ್ರೆ ಬಿಆರ್ ಪಿ, ಕಿತ್ತೂರು ರಾಣಿ ಚೆನ್ನಮ್ಮ‌ವಸತಿ ಶಾಲೆ.

ಈಗಾಗಲೇ ಹಲವು ಅರ್ಜಿಗಳನ್ನು ಸ್ವೀಕರಿಸಿ ವಿಲೇವಾರಿ ಮಾಡಲಾಗಿದ್ದು, ಇನ್ನೂ ಗ್ರಾಮಸ್ಥರು, ಸುತ್ತಮುತ್ತಲ ಗ್ರಾಮಸ್ಥರಿಂದ ಅರ್ಜಿಗಳನ್ನು ಸ್ವೀಕರಿಸಿ ಪರಿಹಾರೋಪಾಯ ಕುರಿತು ಚರ್ಚಿಸಿ ಕ್ರಮ ವಹಿಸಲಾಗುವುದು.
| ಡಾ.ಆರ್.ಸೆಲ್ವಮಣಿ,‌ ಡಿಸಿ

ಪ್ರತಿ‌ ಮೂರನೇ‌ ಶನಿವಾರ ಭೇಟಿ
ಸಾರ್ವಜನಿಕರಿಂದ ಕುಂದು ಕೊರತೆ ಅರ್ಜಿಗಳನ್ನು ಸ್ಥಳದಲ್ಲೇ ಸ್ವೀಕರಿಸಿ ಶೀಘ್ರ ಪರಿಹಾರಕ್ಕೆ ಕ್ರಮ ಕೈಗೊಳ್ಳುವ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ-ಕಂದಾಯ ಇಲಾಖೆ’ ಕಾರ್ಯಕ್ರಮವನ್ನು ಪ್ರತಿ 3ನೇ ಶನಿವಾರದಂದು ಆಯ್ದ ಗ್ರಾಮಗಳಲ್ಲಿ ಆಯೋಜಿಸಲಾಗುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕೆಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ತಿಳಿಸಿದರು.
‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ-ಕಂದಾಯ ಇಲಾಖೆ’ ಕಾರ್ಯಕ್ರಮದಡಿ ಇಂದು ಭದ್ರಾವತಿ ತಾಲ್ಲೂಕಿನ ಕಸಬಾ ಹೋಬಳಿಯ ಹುಣಸೆಕಟ್ಟೆ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ್, ಎಡಿಸಿ ಡಾ.ನಾಗೇಂದ್ರ ಎಫ್ ಹೊನ್ನಳ್ಳಿ, ಎಸಿ ದೊಡ್ಡಗೌಡರ್, ಭದ್ರಾವತಿ ತಹಶೀಲ್ದಾರ್, ಜನಪ್ರತಿನಿಧಿಗಳು, ಅಧಿಕಾರಿಗಳು ಹಾಜರಿದ್ದರು.

https://suddikanaja.com/2022/01/30/new-dc-dr-r-selvamani-express-his-deed-on-development-of-shivamogga/

Leave a Reply

Your email address will not be published. Required fields are marked *

error: Content is protected !!