ಸುದ್ದಿ ಕಣಜ.ಕಾಂ | SHIVAMOGGA | POWER CUT
ಶಿವಮೊಗ್ಗ: ನಗರದ ಆಲ್ಕೋಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಎ.ಎಫ್ 8 ರಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಆಗಸ್ಟ್ 6 ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಯಾವ್ಯಾವ ಪ್ರದೇಶಗಳಲ್ಲಿ ಪವರ್ ಕಟ್?
ಜಯದೇವ ಬಡಾವಣೆ, ಶಿವಪ್ಪ ನಾಯಕ ಬಡಾವಣೆ, ಸುಬ್ಬಣ್ಣ ಕಾಂಪ್ಲೆಕ್ಸ್, ಕೆಎಚ್.ಬಿ ಕಾಲೊನಿಯ ಎ, ಬಿ, ಸಿ, ಡಿ, ಇ, ಎಫ್ ಮತ್ತು ಜಿ ಬ್ಲಾಕ್, ತಿಮ್ಮಕ್ಕ ಬಡಾವಣೆ, ಕಾಶಿಪುರ, ಕೇಂಬ್ರಿಡ್ಜ್ ಶಾಲೆ, ಎಸ್.ಕೆ ಎನ್. ಶಾಲೆ, ಪ್ರಿಯದರ್ಶಿನಿ ಬಡಾವಣೆ, ಹುಚ್ಚುರಾಯ ಕಾಲೊನಿ, ವೀರಣ್ಣ ಬಡಾವಣೆ, ಚೇತನ ಪಾರ್ಕ್ ಸುತ್ತಮುತ್ತ, ಮೋರ್ ಹತ್ತಿರ, ಲಕ್ಷ್ಮೀಪುರ, ಕೆಂಚಪ್ಪ ಬಡಾವಣೆ, ಕುವೆಂಪು ಬಡಾವಣೆ, ದಯಾನಂದ ಪ್ರಿಂಟರ್ಸ್, ಸೂಡಾ ಕಾಂಪ್ಲೆಕ್ಸ್, ಪೊಲೀಸ್ ಚೌಕಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ನಗರ ಉಪ ವಿಭಾಗ 3 ರ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕೋರಿದ್ದಾರೆ.
https://www.suddikanaja.com/2021/07/29/shikshaka-mitra-app-using-mandotory-from-august-2/