Court News | ಬಾಲಕಿ‌ ಮೇಲೆ‌ ದೌರ್ಜನ್ಯ ಎಸಗಿದ್ದ ವೃದ್ಧನಿಗೆ ಜೀವಾವಧಿ‌ ಶಿಕ್ಷೆ

Shivamogga Court

 

 

  • ಏಳು ವರ್ಷದ ಬಾಲಕಿ‌ ಹೊಲಕ್ಕೆ‌ ಹೋಗಿದ್ದಾಗ ಲೈಂಗಿಕ ದೌರ್ಜನ್ಯ ಎಸಗಿದ್ದ ವೃದ್ಧ
  • ಪೋಕ್ಸೋ ಕಾಯ್ದೆ ಅಡಿಯಲ್ಲಿ ಆರೋಪ ದೃಢಪಟ್ಟ ಹಿನ್ನೆಲೆ ತೀರ್ಪು ನೀಡಿದ ನ್ಯಾಯಾಲಯ

ಸುದ್ದಿ ಕಣಜ.ಕಾಂ | 20 AUG 2022 | COURT NEWS
ಶಿವಮೊಗ್ಗ: ಏಳು ವರ್ಷದ ಬಾಲಕಿಯು ಹೊಲಕ್ಕೆ‌ ಹೋದಾಗ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ ₹60,000 ದಂಡ‌ ವಿಧಿಸಿ ನ್ಯಾಯಾಲಯವು ಶನಿವಾರ ಮಹತ್ವದ ತೀರ್ಪು ನೀಡಿದೆ.
ನಾಗಪ್ಪ (65) ಎಂಬಾತನ ವಿರುದ್ಧ ಪೋಕ್ಸೊ ಕಾಯ್ದೆ ಅಡಿ ಆರೋಪಗಳು‌ ದೃಢಪಟ್ಟ ಹಿನ್ನೆಲೆಯಲ್ಲಿ The Addl District and Sessions Court, FTSC–II (POCSO) ನ್ಯಾಯಾಲಯ ಶಿಕ್ಷೆ ವಿಧಿಸಿದೆ.‌ ಸರ್ಕಾರಿ ಅಭಿಯೋಜಕ ಹರಿಪ್ರಸಾದ್ ವಾದ ಮಂಡಿಸಿದರು.

READ | 17 ವರ್ಷಗಳ ಬಳಿಕ ಓಟ ನಿಲ್ಲಿಸಿದ ಇಂಟರ್ನೆಟ್‌ ಎಕ್ಸ್‌ಪ್ಲೋರರ್‌

ಶಿವಮೊಗ್ಗದ ಮಹಿಳಾ‌ ಪೊಲೀಸ್ ಠಾಣೆಯ ಆಗಿ‌ನ ಪಿಐ ಅಭಯಪ್ರಕಾಶ್‌ ಸೋಮನಾಳ್ ಅವರು ತನಿಖೆ ನಡೆಸಿ ಚಾರ್ಜ್ ಶೀಟ್ ಅನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದರು.
(ಓದುಗರ ಗಮನಕ್ಕೆ | ಪ್ರಕರಣವು ಪೋಕ್ಸೊ ಕಾಯ್ದೆ ಅಡಿ ಬರುವುದರಿಂದ ಗೌಪ್ಯತೆ ಕಾರಣಕ್ಕೆ ಬಾಲಕಿಯ ಹೆಸರು, ವಿಳಾಸ ಇತ್ಯಾದಿಗಳನ್ನು ಪ್ರಕಟಿಸಿಲ್ಲ)

https://suddikanaja.com/2021/09/17/pocso-case-filed-in-shivamogga/

Leave a Reply

Your email address will not be published. Required fields are marked *

error: Content is protected !!