Thawar Chand Gehlot | ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ ರಾಜ್ಯಪಾಲ ಥಾವರ್‍ ಚಂದ್ ಗೆಹ್ಲೋಟ್

thawar chand gehlot

 

 

ಸುದ್ದಿ ಕಣಜ.ಕಾಂ | DISTRICT | 27 SEP 2022
ಶಿವಮೊಗ್ಗ: ಕರ್ನಾಟಕ ರಾಜ್ಯಪಾಲ ಥಾವರ್‍ ಚಂದ್ ಗೆಹ್ಲೋಟ್ (Thawar Chand Gehlot) ಅವರು ಸೆಪ್ಟೆಂಬರ್ 28 ರಂದು ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.
ಸೆ.28 ರ ಬೆಳಗ್ಗೆ 9.30 ಗಂಟೆಗೆ ಬೆಂಗಳೂರಿನಿಂದ ಹೊರಟು ಮಧ್ಯಾಹ್ನ 12 ಗಂಟೆಗೆ ಚಿತ್ರದುರ್ಗದ ಪ್ರವಾಸಿ ಮಂದಿರಕ್ಕೆ ಆಗಮಿಸುವರು. ಮಧ್ಯಾಹ್ನ 12.30 ಕ್ಕೆ ಚಿತ್ರದುರ್ಗದಿಂದ ಹೊರಟು 2 ಗಂಟೆಗೆ ಶಿವಮೊಗ್ಗದ ಪ್ರವಾಸಿ ಮಂದಿರಕ್ಕೆ ಆಗಮಿಸುವರು. ಮಧ್ಯಾಹ್ನ 2.20 ಕ್ಕೆ ಶಿವಮೊಗ್ಗ ಪ್ರವಾಸಿ ಮಂದಿರದಿಂದ ಹೊರಟು ಮಧ್ಯಾಹ್ನ 2.50 ಕ್ಕೆ ಸಾಗರ ತಾಲ್ಲೂಕಿನ ಇರುವಕ್ಕಿಯ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಬರುವರು.

READ | ಬೆಳ್ಳಂಬೆಳಗ್ಗೆ ಕಾರ್ಯಾಚರಣೆ, ಶಿವಮೊಗ್ಗ, ಭದ್ರಾವತಿಯಲ್ಲಿ ಐವರು ಪಿಎಫ್.ಐ ಕಾರ್ಯಕರ್ತರನ್ನು ವಶ, ಈ ಬಗ್ಗೆ ಪೊಲೀಸರೇನು ಹೇಳ್ತಾರೆ?

ಮಧ್ಯಾಹ್ನ 3 ಗಂಟೆಗೆ ಇರುವಕ್ಕಿ ಮುಖ್ಯ ಆವರಣದಲ್ಲಿ ಆಯೋಜಿಲಾಗಿರುವ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 7ನೇ ಘಟಿಕೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಸಂಜೆ 4.30ಕ್ಕೆ ಇರುವಕ್ಕಿ ಆವರಣದಿಂದ ಹೊರಟು ಶಿವಮೊಗ್ಗ ಪ್ರವಾಸಿ ಮಂದಿರಕ್ಕೆ ತೆರಳುವರು. ರಾತ್ರಿ 7.10 ಕ್ಕೆ ಚಿತ್ರದುರ್ಗ ಪ್ರವಾಸಿ ಮಂದಿರಕ್ಕೆ ಆಗಮಿಸಿ, 7.30 ಕ್ಕೆ ಚಿತ್ರದುರ್ಗದಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸುವರು.

https://suddikanaja.com/2021/11/25/karnataka-governor-thawar-chand-gehlot-tour-to-shivamogga-by-road/

Leave a Reply

Your email address will not be published. Required fields are marked *

error: Content is protected !!