Political news | ಮಧು ಬಂಗಾರಪ್ಪಗೆ ಕೆಪಿಸಿಸಿಯಲ್ಲಿ ಪ್ರಮುಖ ಜವಾಬ್ದಾರಿ, ಅಭಿನಂದನೆಗಳ ಮಹಾಪೂರ

Madhu Bangarappa

 

 

HIGHLIGHTS

  • ಕೆಪಿಸಿಸಿ ಓಬಿಸಿ ಕಾರ್ಯಾಧ್ಯಕ್ಷರಾಗಿ ಮಧು ಬಂಗಾರಪ್ಪ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ ಎಐಸಿಸಿ
  • 2021ರ ಜುಲೈನಲ್ಲಿ ಜೆಡಿಎಸ್’ನಿಂದ ಕಾಂಗ್ರೆಸ್ ಸೇರ್ಪಡೆಯಾಗಿದ್ದ ಮಾಜಿ ಶಾಸಕ ಮಧು ಬಂಗಾರಪ್ಪ

ಸುದ್ದಿ ಕಣಜ.ಕಾಂ | KARNATAKA | 15 SEP 2022
ಶಿವಮೊಗ್ಗ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ Karnataka Pradesh Congress Committee (ಕೆಪಿಸಿಸಿ) ಹಿಂದುಳಿದ ವರ್ಗಗಳ ಘಟಕ(ಓಬಿಸಿ-OBC)ದ ಕಾರ್ಯಾಧ್ಯಕ್ಷರಾಗಿ ಮಾಜಿ ಶಾಸಕ ಮಧು ಬಂಗಾರಪ್ಪ (Madhu Bangarappa) ಅವರನ್ನು ನೇಮಕ ಮಾಡಿ ಎಐಸಿಸಿ (All India Congress Committee) ಆದೇಶ ಹೊರಡಿಸಿದೆ.

Madhu Bangarappa letter
ಕೆಪಿಸಿಸಿ ಓಬಿಸಿ ಕಾರ್ಯಾಧ್ಯಕ್ಷರಾಗಿ ಮಧು ಬಂಗಾರಪ್ಪ ನೇಮಕದ ಆದೇಶ ಪ್ರತಿ.

READ | ಆಟೋ ಚಾಲಕ ಮಹಮ್ಮದ್ ಗೌಸ್ ಪ್ರಾಮಾಣಿಕತೆಗೆ ಖಾಕಿ‌ ಶಹಭಾಷ್’ಗಿರಿ, ನಡೆದಿದ್ದೇನು?

2021ರ ಜುಲೈನಲ್ಲಿ ಜೆಡಿಎಸ್ ಯುವ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಕಾಂಗ್ರೆಸ್ (Congress) ಸೇರ್ಪಡೆಯಾಗಿದ್ದ ಮಧು ಬಂಗಾರಪ್ಪ ಅವರು ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಪಕ್ಷದಲ್ಲಿ ಪ್ರಮುಖ ಸ್ಥಾನ ನೀಡಲಾಗಿದೆ.
ಸೋನಿಯಾಗಾಂಧಿ ಆಗಮನ ಬಳಿಕ ಸ್ಥಾನ ಬದಲಾವಣೆ ಸಾಧ್ಯತೆ
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಅವರು ವಿದೇಶ ಪ್ರವಾಸದಲ್ಲಿದ್ದು, ವಾಪಸ್ ಆಗುತ್ತಿದ್ದಂತೆಯೇ ಮಧು ಅವರಿಗೆ ಅಧ್ಯಕ್ಷ ಸ್ಥಾನ ನೀಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಅಭಿನಂದನೆಗಳ ಮಹಾಪೂರ
ಮಧು ಬಂಗಾರಪ್ಪ ಅವರನ್ನು ಕೆಪಿಸಿಸಿ ಕಾಯಾಧ್ಯಕ್ಷರಾಗಿ ನೇಮಕ ಮಾಡಿದ್ದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಪಕ್ಷದ ಪ್ರಮುಖರು, ಫ್ಯಾನ್ಸ್ ಕ್ಲಬ್’ಗಳು ಅಭಿನಂದನೆಗಳನ್ನು ತಿಳಿಸಿದ್ದಾರೆ.

https://suddikanaja.com/2022/03/13/karnataka-government-failed-to-address-the-issue-of-bagar-hukum-cultivators-madhu-bangarappa-alleged-25000-applications-were-rejected-in-shimoga/

Leave a Reply

Your email address will not be published. Required fields are marked *

error: Content is protected !!