Education Corner | ಮಕ್ಕಳಲ್ಲಿ ‘ಅಂಚೆ ಚೀಟಿ’ ಸಂಗ್ರಹ ಆಸಕ್ತಿ ಇರುವವರಿಗೆ ₹6,000 ಸ್ಕಾಲರ್ಶಿಪ್

Public Notice

 

 

HIGHLIGHTS

  • ಅಂಚೆ ಚೀಟಿ ಸಂಗ್ರಹಣೆಯನ್ನು ಉತ್ತೇಜಿಸಲು ‘ದೀನ್ ದಯಾಳ್ ಸ್ಪರ್ಶ್’ ಯೋಜನೆಯಡಿ ವಿದ್ಯಾರ್ಥಿ ವೇತನ
  • ಚಿಕ್ಕ ವಯಸ್ಸಿನ ಮಕ್ಕಳಲ್ಲಿ ಅಂಚೆ ಚೀಟಿ ಸಂಗ್ರಹವನ್ನು ಉತ್ತೇಜಿಸುವುದು ವಿದ್ಯಾರ್ಥಿ ವೇತನದ ಉದ್ದೇಶ
  • ವಿದ್ಯಾರ್ಥಿಗಳಲ್ಲಿನ ವಿಶ್ರಾಂತಿ ಮತ್ತು ಖಿನ್ನತೆ ಹೋಗಲಾಡಿಸಲು ಪೂರಕ

ಸುದ್ದಿ ಕಣಜ.ಕಾಂ | DISTRICT | 15 SEP 2022
ಶಿವಮೊಗ್ಗ: ಅಂಚೆ ಇಲಾಖೆ(Postal department)ಯು ಶಾಲಾ ಮಕ್ಕಳಲ್ಲಿ ಅಂಚೆ ಚೀಟಿ ಸಂಗ್ರಹಣೆಯನ್ನು ಉತ್ತೇಜಿಸಲು ‘ದೀನ್ ದಯಾಳ್ ಸ್ಪರ್ಶ್ (deen dayal sparsh yojana)’ ಯೋಜನೆಯಡಿ ವಿದ್ಯಾರ್ಥಿ ವೇತನ ಪ್ರಶಸ್ತಿಗಾಗಿ 6ನೇ ತರಗತಿಯಿಂದ 9ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ.

READ | ಬಿ.ಎಸ್.ಯಡಿಯೂರಪ್ಪ ಕುಟುಂಬವನ್ನು ಭ್ರಷ್ಟಾಚಾರ ಪ್ರಕಣದಲ್ಲಿ ಸಿಲುಕಿಸುವ ಪ್ರಯತ್ನ, ಆರೋಪ

ಶೈಕ್ಷಣಿಕ ಪಠ್ಯಕ್ರಮವನ್ನು ಬಲಪಡಿಸುವುದು ಮತ್ತು ಚಿಕ್ಕ ವಯಸ್ಸಿನ ಮಕ್ಕಳಲ್ಲಿ ಅಂಚೆ ಚೀಟಿ ಸಂಗ್ರಹವನ್ನು ಉತ್ತೇಜಿಸುವುದು ವಿದ್ಯಾರ್ಥಿ ವೇತನದ ಉದ್ದೇಶವಾಗಿದೆ. ಈ ಹವ್ಯಾಸ ಅವರಿಗೆ ವಿಶ್ರಾಂತಿ ಮತ್ತು ಖಿನ್ನತೆ ಹೋಗಲಾಡಿಸಲು ಸಹಾಯ ಮಾಡುತ್ತದೆ.
ವಾರ್ಷಿಕ ₹6000 ವಿದ್ಯಾರ್ಥಿ ವೇತನ
ಈ ಯೋಜನೆಯಡಿ 2021-22 ನೇ ಶೈಕ್ಷಣಿಕ ವರ್ಷದಲ್ಲಿ ಶೇ.60 ಅಂಕಗಳನ್ನು ಹೊಂದಿರುವ ಮತ್ತು ಅಂಚೆ ಚೀಟಿಗಳ ಸಂಗ್ರಹಣೆಯ ಖಾತೆಯನ್ನು/ ಫಿಲಾಟೆಲಿಕ್ ಕ್ಲಬ್‍ನ ಸದಸ್ಯರನ್ನು ಹೊಂದಿರುವ ಮತ್ತು ಅಂಚೆ ಚೀಟಿಗಳ ಸಂಗ್ರಹಣೆಯನ್ನು ಹವ್ಯಾಸವಾಗಿ ಮುಂದುವರಿಸುವ 6 ರಿಂದ 9 ನೇ ತರಗತಿಯ ವಿದ್ಯಾರ್ಥಿಗಳಿಗೆ ವಾರ್ಷಿಕ ₹6000 ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಅಂಚೆ ಚೀಟಿಗಳ ಸಂಗ್ರಹಣೆ ರಸಪ್ರಶ್ನೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ಅಂಚೆ ಇಲಾಖೆಯು ನೀಡುವ ಅಂಚೆ ಚೀಟಿ ಸಂಗ್ರಹ ಯೋಜನೆಯಲ್ಲಿ ಸ್ಪರ್ಧಿಸಬೇಕಾಗುತ್ತದೆ.
ಅರ್ಜಿ ಸಲ್ಲಿಕೆಗೆ ಸೆಪ್ಟೆಂಬರ್ 26 ಕಡೆಯ ದಿನ
ಕರ್ನಾಟಕ ರಾಜ್ಯದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಹಂತ-1 ಅಂಚೆ ಚೀಟಿಗಳ ರಸಪ್ರಶ್ನೆ(ಲಿಖಿತ) ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಜಿಯನ್ನು ಸಲ್ಲಿಸಲು/ ಪೋಸ್ಟ್ ಮಾಡಲು ಸೆಪ್ಟೆಂಬರ್ 26 ಕಡೆಯ ದಿನವಾಗಿದೆ. ರಾಜ್ಯದ ಎಲ್ಲ ಶಾಲೆಗಳು ತಮ್ಮ ವಿದ್ಯಾರ್ಥಿಗಳನ್ನು ವಿದ್ಯಾರ್ಥಿ ವೇತನ ಯೋಜನೆಯಲ್ಲಿ ಭಾಗವಹಿಸಲು ಪ್ರೋತ್ಸಾಹಿಸಲು ವಿನಂತಿಸಲಾಗಿದೆ. ಹೆಚ್ಚಿನ ಮಾಹಿತಿಗೆ www.indiapost.gov.in ಮತ್ತು www.karnatakapost.gov.in ಭೇಟಿ ನೀಡಬಹುದೆಂದು ಶಿವಮೊಗ್ಗ ಅಂಚೆ ವಿಭಾಗದ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.

https://suddikanaja.com/2021/09/01/appemidi-mango-postal-card/

Leave a Reply

Your email address will not be published. Required fields are marked *

error: Content is protected !!