Elephant died | ಎರಡು ಗಂಡಾನೆಗಳ ಜೀವ ನುಂಗಿದ ಬೇಲಿ, ಪರಿಸರಾಸಕ್ತರು, ಅಧಿಕಾರಿಗಳು, ಗ್ರಾಮಸ್ಥರೇನು ಹೇಳುತ್ತಾರೆ?

Elephant death

 

 

HIGHLIGHTS 

  • ಶಿವಮೊಗ್ಗ ತಾಲೂಕಿನ ಆಯನೂರು ಬಳಿಯ ಚನ್ನಹಳ್ಳಿ ಗಡಿ ಪ್ರದೇಶವಾದ ಆನೆಸರ ಗ್ರಾಮದಲ್ಲಿ ಎರಡು ಕಾಡಾನೆಗಳ ಸಾವು
  • ಹೊಲಕ್ಕೆ ಹಾಕಿದ್ದ ವಿದ್ಯುತ್ ತಂತಿ ಬೇಲಿ ಸ್ಪರ್ಶಿಸಿ ಮೃತಪಟ್ಟ ಆನೆಗಳು, ಚಂದ್ರಾನಾಯ್ಕ್ ಎಂಬುವವರ ಬಂಧನ

ಸುದ್ದಿ ಕಣಜ.ಕಾಂ | DISTRICT | 25 SEP 2022
ಶಿವಮೊಗ್ಗ(Shivamogga): ತಾಲೂಕಿನ ಆಯನೂರು (aynur) ಸಮೀಪದ ಶೆಟ್ಟಿಹಳ್ಳಿ ಅಭಯಾರಣ್ಯ (shettihalli wildlife sanctuary) ವ್ಯಾಪ್ತಿಯ ಆನೆಸರ (Anesara) ಗ್ರಾಮದಲ್ಲಿ 10-12 ವರ್ಷದ ಎರಡು ಆನೆಗಳು ಶನಿವಾರ ರಾತ್ರಿ ಮೃತಪಟ್ಟಿವೆ.
ಚಂದ್ರಾನಾಯ್ಕ್ ಎಂಬುವವರು ತಮ್ಮ ಹೊಲದಲ್ಲಿ ಜೋಳ (Maze) ಹಾಕಿದ್ದು, ಅದನ್ನು ಕಾಡು ಪ್ರಾಣಿಗಳಿಂದ ರಕ್ಷಿಸುವುದಕ್ಕಾಗಿ ವಿದ್ಯುತ್ ತಂತಿ ಬೇಲಿಯನ್ನು ಹಾಕಲಾಗಿದೆ. ಆನೆ(Elephant)ಗಳು ಹೊಲಕ್ಕೆ ನುಗ್ಗಲು ಯತ್ನಿಸಿದಾಗ ಆನೆಗಳು ಮೃತಪಟ್ಟಿವೆ.

READ | ಇಂದು ದೇಶ ಕಂಡ ಅಪ್ರತಿಮ ವಿಜ್ಞಾನಿಯ ಜನ್ಮದಿನ, ಇವರು ಡಾ.ವಿಕ್ರಂ ಸಾರಾಭಾಯ್ ಕನಸಿನ ಹಕ್ಕಿಗೆ ಶಕ್ತಿ ತುಂಬಿದವರು

ಗ್ರಾಮಸ್ಥರ ಆರೋಪಗಳೇನು?
ಚನ್ನಹಳ್ಳಿ (Channahalli) ಗ್ರಾಮದಲ್ಲಿ ಕಾಡು ಹಂದಿ, ಜಿಂಕೆ ಸೇರಿದಂತೆ ವಿವಿಧ ಪ್ರಾಣಿಗಳು ಹೊಲಕ್ಕೆ ನುಗ್ಗಿ ಬೆಳೆಯನ್ನು ಹಾಳು ಮಾಡುತ್ತಿವೆ ಎಂಬ ಕಾರಣಕ್ಕಾಗಿ ತಂತಿ ಬೇಲಿಯನ್ನು ಹಾಕಲಾಗಿದೆ. ಕಾಡಾನೆಗಳೂ ಬೆಳೆ ಹಾಳು ಮಾಡುತ್ತಿರುವ ಬಗ್ಗೆ ಅರಣ್ಯ ಇಲಾಖೆ ಗಮನಕ್ಕೆ ತರಲಾಗಿದೆ ಎನ್ನುವುದು ಸ್ಥಳೀಯ ಗ್ರಾಮಸ್ಥರ ಆರೋಪವಾಗಿದೆ.
ರೈತನ ಬಂಧನ
ಕಾಡಾನೆಗಳು ಮೃತಪಟ್ಟಿರುವ ವಿಚಾರ ಸೋಶಿಯಲ್ ಮೀಡಿಯಾ (Social media) ಸೇರಿದಂತೆ ಹಲವೆಡೆ ವೇಗವಾಗಿ ಹರಡಿದ್ದು, ಅರಣ್ಯ ಇಲಾಖೆ(Forest department)ಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶಂಕರ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿದರು. ನಂತರ, ಆನೆಗಳ ಕಳೇಬರವನ್ನು ವೀಕ್ಷಿಸಿದರು.
ತಂತಿ ಬೇಲಿಗೆ ನೇರವಾಗಿ ವಿದ್ಯುತ್ ಅನ್ನು ಹರಿಬಿಟ್ಟಿರುವುದು ಅಪರಾಧವಾಗಿದೆ. ಹೀಗಾಗಿ, ಇದರಡಿಯೂ ರೈತನ ವಿರುದ್ಧ ಪ್ರಕರಣ ದಾಖಲಾಗುವ ಸಾಧ್ಯತೆ ಇದೆ. ಜತೆಗೆ, ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ಪ್ರಕರಣ ದಾಖಲಾಗಲಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಯುವುದು ಬಾಕಿ ಇದೆ.

https://suddikanaja.com/2021/12/08/wild-tusker-was-electrocuted-at-malligenahalli-near-lingadahalli-in-tarikere-taluk-place-is-close-to-tyagadabagi-reserve-forest-area/

Leave a Reply

Your email address will not be published. Required fields are marked *

error: Content is protected !!