Sports news | ಶಿವಮೊಗ್ಗಕ್ಕೆ ಆಗಮಿಸಿದ್ದ ಭಾರತದ ಮೊದಲ ಮಹಿಳಾ ಪಿಚ್ ಕ್ಯುರೇಟರ್, ಭೇಟಿ ನೀಡಿದ್ದೆಲ್ಲಿ? ಅವರ ತಿಳಿದುಕೊಳ್ಳಬೇಕಾದ ವಿಚಾರಗಳಿವು

Jacintha kalyan KSCA

 

 

| HIGHLIGHTS |

  • ಕೆಎಸ್‍ಸಿಎನಲ್ಲಿ ಜೆಸ್ಸಿ ಮ್ಯಾಮ್ ಎಂದೇ ಖ್ಯಾತಿ ಪಡೆದಿರುವ ಜೆಸ್ಸಿಂತಾ ಕಲ್ಯಾಣ್ ಅವರು ರಾಹುಲ್ ದ್ರಾವಿಡ್ ಅವರಿಂದಲೂ ಮೆಚ್ಚುಗೆ ಪಡೆದವರು
  • ಜೆಸ್ಸಿಂತಾ ಕಲ್ಯಾಣ ಅವರ ಬದುಕೇ ಇತರರಿಗೆ ಪ್ರೇರಕ. ವಿವಿಧ ಹಂತಗಳನ್ನು ದಾಟಿ ಬದುಕು ಕಟ್ಟಿಕೊಂಡ ದಿಟ್ಟ ಮಹಿಳೆ

ಸುದ್ದಿ ಕಣಜ.ಕಾಂ | KARNATAKA | 07 SEP 2022
ಶಿವಮೊಗ್ಗ: ದೇಶದ ಮೊದಲ ಮಹಿಳಾ ಕ್ರಿಕೆಟ್ ಪಿಚ್ ಕ್ಯುರೇಟರ್ (pitch curator) ಜೆಸ್ಸಿಂತಾ ಕಲ್ಯಾಣ್ (Jassintha kalyan) ಅವರು ನಗರದ ನವುಲೆಯಲ್ಲಿರುವ ರಾಜ್ಯಮಟ್ಟದ ಕ್ರಿಕೆಟ್ ಮೈದಾನಕ್ಕೆ ಇತ್ತೀಚೆಗೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಶಿವಮೊಗ್ಗ ನಗರ ಆಮ್ ಆದ್ಮಿ ಪಾರ್ಟಿಯ ವಿಧಾನಸಭಾ ಆಕಾಂಕ್ಷಿ ಡಾ.ನೇತ್ರಾವತಿ, ಅಧ್ಯಕ್ಷ ಸುರೇಶ್ ಕೌಟೆಕಾರ್, ರವಿಕುಮಾರ್ ಇದ್ದರು.
ಜಸ್ಸಿಂತಾ ಕಲ್ಯಾಣ್ ಅವರ ಬಗ್ಗೆ ಒಂದಿಷ್ಟು ಮಾಹಿತಿ
ಮೂಲತಃ ಕನಕಪುರ(kanakapura)ದವರಾದ ಜೆಸ್ಸಿಂತಾ ಅವರು ರೈತನ ಮಗಳು. ಎಸ್ಸೆಸ್ಸೆಲ್ಸಿವರೆಗೆ ಹುಟ್ಟೂರಿನಲ್ಲಿಯೇ ಓದಿದ ಇವರು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಆಗಮಿಸಿದರು. ವಿದ್ಯಾಭ್ಯಾಸದೊಂದಿಗೆ 1993ರಲ್ಲಿ ಕೆಎಸ್‍ಸಿಎದಲ್ಲಿ ರಿಸೆಪ್ಷನಿಸ್ಟ್ ಆಗಿ ಕೆಲಸ ಆರಂಭಿಸಿದರು. ಸಂಜೆ 6ರಿಂದ ರಾತ್ರಿ 9 ಗಂಟೆಯವರೆಗೆ ಸಂಜೆ ಕಾಲೇಜಿನಲ್ಲಿ ಓದುತ್ತಾ ಇತ್ತ ಕೆಲಸವನ್ನೂ ಮುಂದುವರಿಸಿದರು.

KSCA Stadium
ಶಿವಮೊಗ್ಗದ ಕೆಎಸ್.ಸಿ.ಎ ಸ್ಟೇಡಿಯಂಗೆ ಭೇಟಿ ನೀಡಿದ ಪಿಚ್ ಕ್ಯುರೇಟರ್ ಜೆಸ್ಸಿಂತಾ.

READ | ನೈಋತ್ಯ ರೈಲ್ವೆ ಪ್ರಯಾಣಿಕರ ಸಂಚಾರದಲ್ಲಿ ದಾಖಲೆಯ ಸಾಧನೆ, ಆದಾಯ ಕೇಳಿದರೆ ಶಾಕ್‌ ಆಗ್ತೀರಾ! 

ಆರು ವರ್ಷ ಪಿಚ್ ಕ್ಯುರೇಟರ್ ಆಗಿ ಕೆಲಸ ಕಲಿತ ಜೆಸ್ಸಿಂತಾ ಅವರು ಬಿಸಿಸಿಐ ಗ್ರೌಂಡ್ಸ್ ಮತ್ತು ಪಿಚ್ ಕಮಿಟಿಯ ಮುಖ್ಯಸ್ಥರ ನೇತೃತ್ವದಲ್ಲಿ ಬರವಣಿಗೆ, ಪ್ರಾಯೋಗಿಕ, ಮೌಖಿಕ ಪರೀಕ್ಷೆಗಳಲ್ಲಿ ತೇರ್ಗಡೆಗೊಂಡು 2018ರಲ್ಲಿ ದೇಶದ ಮೊದಲ ಮಹಿಳಾ ಪಿಚ್ ಕ್ಯುರೇಟರ್ ಆಗಿ ಆಯ್ಕೆಯಾದರು.
ಜೆಸ್ಸಿಂತಾ ಅವರು ಅಂತಾರಾಷ್ಟ್ರೀಯ ಪಂದ್ಯಕ್ಕೆ ಪಿಚ್ ಪಡಿಸಿದ್ದರು. ಆ ಬಗ್ಗೆ ರಾಹುಲ್ ದ್ರಾವಿಡ್ ಅವರು ಮೆಚ್ಚುಗೆಯ ಮಾತುಗಳನ್ನು ಆಡಿದ್ದರು. ಪತಿಯ ಪ್ರೋತ್ಸಾಹ, ಸಹುದ್ಯೋಗಿಗಳ ಸಹಕಾರದಿಂದ ಜೆಸ್ಸಿಂತಾ ಅವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಶಿವಮೊಗ್ಗದ ಕೆಎಸ್.ಸಿಎ ಮೈದಾನಕ್ಕೆ ಭೇಟಿ ನೀಡಿದ್ದು ವಿಶೇಷವಾಗಿತ್ತು.

https://suddikanaja.com/2021/01/26/koo-application-developed-by-indian-got-good-response-from-users/

Leave a Reply

Your email address will not be published. Required fields are marked *

error: Content is protected !!