Muruga shri | ಎಂಜಿಯೋಗ್ರಾಮ್ ಪರೀಕ್ಷೆ ಬಳಿಕ ಮುರುಘಾ ಶರಣರು ಆಸ್ಪತ್ರೆಯಿಂದ ಡಿಸ್ಚಾರ್ಜ್

Murugha shreee

 

 

HIGHLIGHTS

  • ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಕರೋನರಿ ಆಂಜಿಯೋಗ್ರಾಮ್ ಪರೀಕ್ಷೆಗೆ ಒಳಪಟ್ಟ ಮುರುಘಾ ಶರಣರು
  • ಚಿತ್ರದುರ್ಗದ ಎರಡನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ನಿರಾಕರಣೆ, ಸೆ.27ರ ವರೆಗೆ ನ್ಯಾಯಾಂಗ ಬಂಧನದಲ್ಲಿರಲಿದ್ದಾರೆ ಶ್ರೀಗಳು

ಸುದ್ದಿ ಕಣಜ.ಕಾಂ | KARNATAKA | 23 SEP 2022
ಶಿವಮೊಗ್ಗ(shivamogga): ಚಿತ್ರದುರ್ಗ (Chitragurga) ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು (Shivamurthy Murugha Sharanaru ) ಶುಕ್ರವಾರ ಮೆಗ್ಗಾನ್  ಆಸ್ಪತ್ರೆ(Meggan hospital)ಯಿಂದ ಡಿಸ್ಚಾರ್ಜ್(Discharge) ಆಗಿದ್ದು, ಅವರನ್ನು ವಾಪಸ್ ಚಿತ್ರದುರ್ಗಕ್ಕೆ ಕರೆದುಕೊಂಡು ಹೋಗಲಾಗಿದೆ.

READ | ಶಿವಮೊಗ್ಗದಲ್ಲಿ ಬಂಧಿತ ಶಂಕಿತ ಉಗ್ರರು ಬಾಂಬ್ ತಯಾರಿಸುವುದನ್ನು ಕಲಿತಿದ್ದೆಲ್ಲಿ? ವಿಚಾರಣೆ ವೇಳೆ ಗೊತ್ತಾಯ್ತು ರೋಚಕ ವಿಚಾರಗಳು

ಎದೆನೋವು ಕಾಣಿಸಿಕೊಂಡಿದ್ದರಿಂದ ಚಿತ್ರದುರ್ಗ ನ್ಯಾಯಾಲಯದ ಸೂಚನೆಯ ಮೇರೆಗೆ ಕರೋನರಿ ಆಂಜಿಯೋಗ್ರಾಮ್ ಪರೀಕ್ಷೆ(angiogram test )ಗೆ ಒಳಪಡಿಸಲಾಗಿತ್ತು. 24 ಗಂಟೆ ಆರೋಗ್ಯದ ಮೇಲೆ ನಿಗಾವಹಿಸಲಾಗಿದೆ. ಹೃದಯ (heart) ಸರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಆರೋಗ್ಯ ಸ್ಥಿರವಾಗಿದೆ.
ಮುರುಘಾ ಶರಣರಿಗೆ ಜಾಮೀನು ನಿರಾಕರಣೆ
ಮುರುಘಾ ಶರಣರ ವಿರುದ್ಧ ಪೋಕ್ಸೊ (POCSO) ಪ್ರಕರಣ ದಾಖಲಾಗಿದ್ದು, ಅವರನ್ನು ಬಂಧಿಸಲಾಗಿದೆ. ಜಾಮೀನು ಕೋರಿ ಸಲ್ಲಿಸಿದ ಅರ್ಜಿಯನ್ನು ಚಿತ್ರದುರ್ಗದ ಎರಡನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ನಿರಾಕರಣೆ ಮಾಡಿದೆ. ಹೀಗಾಗಿ, ಶ್ರೀಗಳು ಸೆ.27ರ ವರೆಗೆ ನ್ಯಾಯಾಂಗ ಬಂಧನದಲ್ಲಿರಲಿದ್ದಾರೆ.

https://suddikanaja.com/2022/09/22/chitradurga-muruga-shri-came-to-meggan-hospital-shivamogga/

Leave a Reply

Your email address will not be published. Required fields are marked *

error: Content is protected !!