ಸುದ್ದಿ ಕಣಜ.ಕಾಂ | KARNATAKA | 23 SEP 2022
ಶಿವಮೊಗ್ಗ: ಶಿವಮೊಗ್ಗ ಪೊಲೀಸರಿಂದ ಬಂಧಿಸಲ್ಪಟ್ಟಿರುವ ಶಂಕಿತ ಉಗ್ರ ಮಂಗಳೂರು ಮೂಲದ ಮಾಜ್ ಅವರ ತಂದೆ ಮುನೀರ್ ಅಹಮದ್(55) ಅವರು ಶುಕ್ರವಾರ ಸಂಜೆ ಹೃದಯಾಘಾತದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಉಗ್ರರೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂಬ ಕಾರಣಕ್ಕೆ ಮಾಜ್’ನನ್ನು ಬಂಧಿಸಲಾಗಿದ್ದು, ಇದರಿಂದ ಮುನೀರ್ ಅವರು ನೊಂದುಕೊಂಡಿದ್ದರು.
ಮೂಲತಃ ತೀರ್ಥಹಳ್ಳಿಯವರಾದ ಮುನೀರ್
ಮೂಲತಃ ತೀರ್ಥಹಳ್ಳಿಯವರಾದ ಮುನೀರ್ ಅವರು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮಂಗಳೂರಿಗೆ ತೆರಳಿದ್ದರು. ಅಲ್ಲಿಯೇ ವಾಸವಾಗಿದ್ದರು. ತಂದೆಯ ಅಂತಿಮ ದರ್ಶನಕ್ಕೆ ಮಾಜ್’ನನ್ನು ಕರೆದೊಯ್ಯಲು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಅನುಮತಿ ದೊರೆತಿದೆ. ಮೃತರ ಅಂತ್ಯಕ್ರಿಯೆಯು ಉಡುಪಿ ಸಮೀಪದ ಹೊನ್ನಾಲೆಯಲ್ಲಿ ನಡೆಯಲಿದೆ.
https://suddikanaja.com/2022/09/22/knife-stabbing-at-bhadravathi/