Route Change | ಇಂದು ಓಂ ಗಣಪತಿ ವಿಸರ್ಜನೆ, ಶಿವಮೊಗ್ಗದ ಈ ರಸ್ತೆಗಳಲ್ಲಿ ಸಂಚಾರ ನಿಷೇಧ, ಮಾರ್ಗ ಬದಲಾವಣೆ

DC Office

 

 

HIGHLIGHTS

  • ಸೆಪ್ಟೆಂಬರ್‌ 11ರಂದು ನಗರದಲ್ಲಿ ಓಂ ಗಣಪತಿ ಮೆರವಣಿಗೆ
  • ಮೆರವಣಿಗೆಯು ಅಶೋಕ ರಸ್ತೆಯಿಂದ ಪ್ರಾರಂಭ
  • ಸಂಚಾರ ಸುವ್ಯವಸ್ಥೆಗೆ ಪರ್ಯಾಯ ಮಾರ್ಗದ ವ್ಯವಸ್ಥೆ

ಸುದ್ದಿ ಕಣಜ.ಕಾಂ | SHIVAMOGGA CITY | 11 SEP 2022
ಶಿವಮೊಗ್ಗ: ನಗರದ ಓಂ ಗಣಪತಿ(Om Ganapathi)ಯನ್ನು ಸೆಪ್ಟೆಂಬರ್ 11 ರಂದು ಮೆರವಣಿಗೆ ಮೂಲಕ ತುಂಗಾ ನದಿ(Tunga river)ಯಲ್ಲಿ ವಿಸರ್ಜನೆ ಮಾಡಲಿದ್ದು ಸಾರ್ವಜನಿಕ ಹಿತದೃಷ್ಟಿ ಹಾಗೂ ವಾಹನಗಳ ಸಂಚಾರ ವ್ಯವಸ್ಥೆ ಸುಗಮಗೊಳಿಸುವ ನಿಟ್ಟಿನಲ್ಲಿ ಕೆಳಕಂಡಂತೆ ವಾಹನಗಳ ಸುಗಮ ಸಂಚಾರ, ನಿಲುಗಡೆ ಮತ್ತು ಮಾರ್ಗ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ (Dr R Selvamani) ಆದೇಶಿಸಿದ್ದಾರೆ.
ಮೆರವಣಿಗೆಯು ಅಂದು ಅಶೋಕ ರಸ್ತೆಯಿಂದ ಪ್ರಾರಂಭವಾಗಿ ಎಸ್.ಪಿ.ಎಂ ಮುಖ್ಯ ರಸ್ತೆ, ರಾಮಣ್ಣ ಶ್ರೇಷ್ಟಿ ಪಾರ್ಕ್, ಗಾಂಧಿ ಬಜಾರ್ ಮುಖ್ಯ ರಸ್ತೆ, ಎಸ್.ಎನ್.ಸರ್ಕಲ್, ಬಿ.ಎಚ್.ರಸ್ತೆ ಮುಖಾಂತರ ಕರ್ನಾಟಕ ಸಂಘ ಪೊಲೀಸ್ ಕಾರ್ನರ್ ಮುಖಾಂತರವಾಗಿ ಅಶೋಕ ರಸ್ತೆಯಿಂದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ, ದೇವಸ್ಥಾನದಿಂದ ತುಂಗಾ ನದಿಯಲ್ಲಿ ವಿಸರ್ಜನೆ ಮಾಡಲಾಗುವುದು.
ಈ ಮೆರವಣಿಗೆ ಮಾರ್ಗದಲ್ಲಿ ಮತ್ತು ಮಾರ್ಗದ ಸುತ್ತಮುತ್ತ 100 ಅಡಿ ಮೀಟರ್ ಅಂತರದಲ್ಲಿ ಎಲ್ಲ ವಾಹನಗಳ ಸಂಚಾರ ಹಾಗೂ ನಿಲುಗಡೆ ನಿಷೇಧಿಸಿ ಆದೇಶಿಸಲಾಗಿದೆ.

READ | ಸಕ್ರೆಬೈಲಿನ‌ ವಿಡಿಯೋ ವೈರಲ್, ರಸ್ತೆ‌ ಬದಿಯ ವ್ಯಕ್ತಿಯೊಬ್ಬರನ್ನು ಅಟ್ಟಾಡಿಸಿಕೊಂಡು‌ ಹೋದ ಆನೆ

ಪರ್ಯಾಯ ಮಾರ್ಗದ ವ್ಯವಸ್ಥೆ

  • ಭದ್ರಾವತಿ(Bhadravathi), ಬೆಂಗಳೂರು(Bengaluru) ಕಡೆಯಿಂದ ಬರುವ ಎಲ್ಲ ಭಾರೀ ವಾಹನ(Vehicle), ಎಲ್ಲ ಬಸ್‍ಗಳು ಮತ್ತು ಸಿಟಿ ಬಸ್‍ಗಳು ಹಾಗೂ ಕಾರು ವಾಹನಗಳು ಎಂಆರ್‍ಎಸ್ ಸರ್ಕಲ್(MRS Circle), ಬೈಪಾಸ್ ರಸ್ತೆ ಮುಖಾಂತರ ಹೋಗುವುದು.
  • ಚಿತ್ರದುರ್ಗ ಹೊಳೆಹೊನ್ನೂರಿನಿಂದ ಬರುವ ಮತ್ತು ಹೋಗುವ ಎಲ್ಲ ಭಾರೀ ವಾಹನ ಮತ್ತು ಬಸ್‍ಗಳು ಹೊಳೆಹೊನ್ನೂರು ಸರ್ಕಲ್, ಎಂಆರ್‍ಎಸ್ ಸರ್ಕಲ್ ಮಾರ್ಗವಾಗಿ ಬೈಪಾಸ್ ರಸ್ತೆ ಮುಖಾಂತರ ಹೋಗುವುದು.
  • ಹೊನ್ನಾಳಿ(Honnalli), ಹರಿಹರ(Harihara), ದಾವಣಗೆರೆ(Davanagere)ಯಿಂದ ಬರುವ ಮತ್ತು ಹೋಗುವ ಎಲ್ಲ ಭಾರೀ ವಾಹನ ಮತ್ತು ಬಸ್‍ಗಳು ಸಂಗೊಳ್ಳಿ ರಾಯಣ್ಣ ಸರ್ಕಲ್(Rayanna circle), ಶಂಕರಮಠ ಸರ್ಕಲ್(Shankeramatta cross), ಹೊಳೆಹೊನ್ನೂರು ಕ್ರಾಸ್, ಎಂ.ಆರ್.ಎಸ್ ಸರ್ಕಲ್ ಮಾರ್ಗವಾಗಿ ಬೈಪಾಸ್ ರಸ್ತೆ ಮುಖಾಂತರವಾಗಿ ಹೋಗುವುದು.
  • ಕೋಟೆ ರಸ್ತೆ ಮತ್ತು ಓಲ್ಡ್ ಬಾರ್‌ ಲೈನ್ ರಸ್ತೆಯ ಎಲ್ಲ ವಾಹನಗಳ ಸಂಚಾರ ನಿಷೇಧ ಮಾಡುವುದು.
  • ಕೆಎಸ್‍ಆರ್‍.ಟಿಸಿ ಮತ್ತು ಖಾಸಗಿ ಬಸ್‍ನಿಲ್ದಾಣದಿಂದ ಶಿಕಾರಿಪುರ, ಸೊರಬ ಕಡೆ ಹೋಗುವ ಎಲ್ಲ ಬಸ್‍ಗಳು ಮತ್ತು ಭಾರೀ ಸರಕು ವಾಹನಗಳು ಸಾಗರ ರಸ್ತೆ ಮುಖಾಂತರವಾಗಿ ಹೆಲಿಪ್ಯಾಡ್ ಸರ್ಕಲ್-ಆಲ್ಕೊಳ ಸರ್ಕಲ್-ಪೊಲೀಸ್ ಚೌಕಿ-ರಾಜ್‍ಕುಮಾರ್ ಸರ್ಕಲ್, ಬೊಮ್ಮನಕಟ್ಟೆ ಮುಖಾಂತರ ಸವಳಂಗ ರಸ್ತೆಗೆ ಹೋಗುವುದು.
  • ಕೆ.ಎಸ್.ಆರ್.ಟಿ.ಸಿ (KSRTC) ಮತ್ತು ಖಾಸಗಿ ಬಸ್ ನಿಲ್ದಾಣ(Private Bus stand)ದಿಂದ ಬೆಂಗಳೂರು, ಭದ್ರಾವತಿ ಕಡೆಗೆ ಹೋಗುವ ಎಲ್ಲ ವಾಹನಗಳು ಬೈಪಾಸ್ ರಸ್ತೆಯ ಮುಖಾಂತರ ಎಂ.ಆರ್.ಎಸ್ ಸರ್ಕಲ್ ಕಡೆಗೆ ಹೋಗುವುದು.

ಈ ಎಲ್ಲ ಮಾರ್ಗ ಬದಲಾವಣೆಗಳು ಪೊಲೀಸ್ ವಾಹನಗಳು, ಅತಿಗಣ್ಯ ವ್ಯಕ್ತಿಗಳ ವಾಹನಗಳು ಆಂಬ್ಯುಲೆನ್ಸ್ ಹಾಗೂ ಮೂಲಸೌಕರ್ಯ ಒದಗಿಸುವ ವಾಹನಗಳನ್ನು ಅನುಕೂಲಕ್ಕೆ ತಕ್ಕಂತೆ ಹೊರತುಪಡಿಸಿರುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

https://suddikanaja.com/2022/09/09/hindu-mahasabha-ganapathi-festival-in-shimoga/

Leave a Reply

Your email address will not be published. Required fields are marked *

error: Content is protected !!