Malenadu Gidda | ಮಲೆನಾಡು ಗಿಡ್ಡ ಸಾಕಾಣಿಕೆ ತರಬೇತಿ, ಯಾರೆಲ್ಲ ಪಾಲ್ಗೊಳ್ಳಬಹುದು?

Malenadu gidda

 

 

HIGHLIGHTS

  • ಸೆಪ್ಟೆಂಬರ್ 27ರಂದು ವಿನೋಬನಗರದ ಪಶುವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ತರಬೇತಿ
  • ತರಬೇತಿಯಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು ಸೆ. 26ರೊಳಗೆ ನೋಂದಣಿ ಮಾಡುವುದು ಕಡ್ಡಾಯ

ಸುದ್ದಿ ಕಣಜ.ಕಾಂ | DISTRICT | 23 SEP 2022
ಶಿವಮೊಗ್ಗ: ಪಶುವೈದ್ಯಕೀಯ ಮಹಾವಿದ್ಯಾಲಯವು ಸೆಪ್ಟೆಂಬರ್ 27ರಂದು ವಿನೋಬನಗರದ ಪಶುವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ಒಂದು ದಿನದ ಉಚಿತ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

READ | ಶಿವಮೊಗ್ಗದಲ್ಲಿ ಬಂಧಿತ ಶಂಕಿತ ಉಗ್ರರು ಬಾಂಬ್ ತಯಾರಿಸುವುದನ್ನು ಕಲಿತಿದ್ದೆಲ್ಲಿ? ವಿಚಾರಣೆ ವೇಳೆ ಗೊತ್ತಾಯ್ತು ರೋಚಕ ವಿಚಾರಗಳು

ಮಲೆನಾಡುಗಿಡ್ಡ ತಳಿ ಸಾಕಾಣಿಕಾ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ‘ಮಲೆನಾಡು ಗಿಡ್ಡ ತಳಿ ಸಾಕಾಣಿಕೆ; ಸಂರಕ್ಷಣೆಯ ಪ್ರಾಮುಖ್ಯತೆ ಹಾಗೂ ಹಸಿರು ಮೇವು ಉತ್ಪಾದನೆ’ ಕುರಿತು ಒಂದು ದಿನದ ಉಚಿತ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಗ್ರಾಮೀಣ ಪ್ರದೇಶದ ರೈತರು/ ರೈತ ಮಹಿಳೆಯರು/ ನಿರುದ್ಯೋಗ ಯುವಕ ಯುವತಿಯರಿಗೆ, ಗೋಶಾಲಾ ನಿರ್ವಾಹಕರು ಇನ್ನಿತರ ಸಾರ್ವಜನಿಕರಿಗಾಗಿ ಈ‌ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಏನೆಲ್ಲ‌ ಮಾಹಿತಿ ನೀಡಲಾಗುವುದು?
ಈ ತರಬೇತಿಯಲ್ಲಿ ಮಲೆನಾಡು ಗಿಡ್ಡ ಗೋ ತಳಿಯ ಸಾಕಾಣಿಕೆಯಲ್ಲಿ ಅಳವಡಿಸಬೇಕಾದ ವೈಜ್ಞಾನಿಕ ಕ್ರಮಗಳು, ದೇಶಿ ಗೋ-ತಳಿಗಳ ಪರಿಚಯ, ಹಸಿರು ಮೇವು ಉತ್ಪಾದನೆ ಹಾಗೂ ಪ್ರಾತ್ಯಕ್ಷತೆಯನ್ನು ಹಮ್ಮಿಕೊಳ್ಳಲಾಗುವುದು. ಆಸಕ್ತಿಯುಳ್ಳವರು ಸೆ.26 ರೊಳಗಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಮಹಾವಿದ್ಯಾಲಯದ ಡೀನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 7899587556/ 9916918909/ 8310384135 ಗಳನ್ನು ಸಂಪರ್ಕಿಸಿ.

https://suddikanaja.com/2021/12/25/70-spare-organ-siege-of-wild-animals-at-shimoga-veterinary-college-by-forest-official/

Leave a Reply

Your email address will not be published. Required fields are marked *

error: Content is protected !!