ಸುದ್ದಿ ಕಣಜ.ಕಾಂ | DISTRICT | MARKET TREND
ಶಿವಮೊಗ್ಗ: ಎರಡು ವರ್ಷಗಳ ಕೊರೊನಾ ಕರಿಛಾಯೆ ಬಳಿಕ ಅಕ್ಷಯ ತೃತೀಯವಾದ ಮಂಗಳವಾರದಂದು ದಾಖಲೆಯ ಚಿನ್ನಾಭರಣ ಖರೀದಿ ಮಾಡಲಾಗಿದೆ.
READ | ಹಟ್ಟಿ ಗೋಲ್ಡ್ ಮೈನ್ಸ್ನಲ್ಲಿ ಉದ್ಯೋಗ, ನೇರ ಸಂದರ್ಶನ ಮೂಲಕ ನೇಮಕಾತಿ
ಒಂದೇ ದಿನ 8 ಕೋಟಿ ರೂಪಾಯಿಯಷ್ಟು ವಹಿವಾಟು ನಡೆದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಲ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಸುಧಾರಣೆ ಕಂಡಿದೆ. ಕಳೆದ ವರ್ಷ ಕೊರೊನಾ ಸೋಂಕಿನಿಂದಾಗಿ ಕೆಲವು ಕಾರ್ಪೋರೇಟ್ ಚಿನ್ನಾಭರಣ ಮಳಿಗೆಗಳು ಆನ್ ಲೈನ್ ಖರೀದಿಗೆ ಅವಕಾಶ ನೀಡಿದ್ದವು. ಆದರೆ, ಸಾರ್ವಜನಿಕರು ಆರ್ಥಿಕ ಸಂಕಷ್ಟದಲ್ಲಿದ್ದ ಕಾರಣದಿಂದಾಗಿ ಖರೀದಿ ಪ್ರಮಾಣ ಕಡಿಮೆಯಾಗಿತ್ತು.
ಜಿಲ್ಲೆಯಲ್ಲಿ 200ಕ್ಕೂ ಅಧಿಕ ಜ್ಯುವೆಲರಿ ಶಾಪ್ ಗಳಿವೆ. ಅದರಲ್ಲಿ ಎಂಟು ಕಾರ್ಪೋರೇಟ್, 2 ಸಾವಿರಕ್ಕೂ ಹೆಚ್ಚು ಆಭರಣ ತಯಾರಕರು ಇದ್ದಾರೆ. ಎಲ್ಲ ಕಡೆಗಳಲ್ಲಿ ಉತ್ತಮ ವಹಿವಾಟು ಆಗಿದೆ.