Cyber Crime | ಕಡಿಮೆ ಬೆಲೆಗೆ ಐಫೋನ್ ಮಾರಾಟ ಮಾಡುವ ಜಾಲದ ಬಗ್ಗೆ ಇರಲಿ ಎಚ್ಚರ, ಶಿವಮೊಗ್ಗದಲ್ಲಿ ಮೋಸಹೋದ ವಿದ್ಯಾರ್ಥಿನಿ

Cyber crime

 

 

HIGHLIGHTS

  • ಇನ್ ಸ್ಟಾಗ್ರಾಂ ಸಂದೇಶ‌ ನಂಬಿ ₹90,000 ಕಳೆದುಕೊಂಡ ವಿದ್ಯಾರ್ಥಿನಿ
  • ಅಮೆರಿಕದಿಂದ ಐಫೋನ್ ತರಿಸಿಕೊಡುವುದಾಗಿ‌ ಹೇಳಿ ಹಣ ಪಡೆದು ವಂಚನೆ
  • ಶಿವಮೊಗ್ಗದ CEN ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ

ಸುದ್ದಿ ಕಣಜ.ಕಾಂ | DISTRICT | 11 SEP 2022
ಶಿವಮೊಗ್ಗ: ದುಬಾರಿ ಬೆಲೆಯ ಐಫೋನ್(iPhone) ಅನ್ನು ಕಡಿಮೆ ಬೆಲೆಯಲ್ಲಿ ಕೊಡಿಸುವುದಾಗಿ ಹೇಳಿ ಹಣ ಪಡೆದು ₹90,000 ವಂಚನೆ (Fruad) ಮಾಡಿರುವ ಘಟನೆ ನಡೆದಿದೆ.
ಪದವಿ ವಿದ್ಯಾರ್ಥಿನಿಯೊಬ್ಬರಿಗೆ ಇನ್ ಸ್ಟಾ ಗ್ರಾಂ (Instagram)ನಲ್ಲಿ ಬಂದ ಸಂದೇಶ(Massage)ವನ್ನು ನಂಬಿ ಖರೀದಿಸುವುದಕ್ಕಾಗಿ ಹಂತ ಹಂತವಾಗಿ ಹಣ ಪಾವತಿಸಿದ್ದಾರೆ.

READ | ಸಕ್ರೆಬೈಲಿನ‌ ವಿಡಿಯೋ ವೈರಲ್, ರಸ್ತೆ‌ ಬದಿಯ ವ್ಯಕ್ತಿಯೊಬ್ಬರನ್ನು ಅಟ್ಟಾಡಿಸಿಕೊಂಡು‌ ಹೋದ ಆನೆ

ಮೋಸ ಹೋಗಿದ್ದು ಹೇಗೆ?
ಇನ್ ಸ್ಟಾಗ್ರಾಂ ನಲ್ಲಿ ದುಬಾರಿ ಬೆಲೆಯ ಐಫೋನ್’ಗಳನ್ನು ಕಡಿಮೆ ಬೆಲೆಗೆ ತರಿಸಿಕೊಡಲಾಗುತ್ತದೆ ಎಂಬ ಸಂದೇಶ ಹಾಕಲಾಗಿತ್ತು‌. ಅದನ್ನು ನಂಬಿದ ಯುವತಿಯು ವಂಚಕ ಕಳುಹಿಸಿದ ಬ್ಯಾಂಕ್ ಖಾತೆಗೆ ಮೇ 24ರಂದು ₹47,000 ವರ್ಗಾವಣೆ ಮಾಡಿದ್ದಾರೆ. ಸ್ನೇಹಿತನ ಪೇಟಿಎಂನಿಂದ ₹43,000 ಹಾಕಿಸಿದ್ದರು.
ಹಣವೆಲ್ಲ‌ ಪಾವತಿಯಾದ ಬಳಿಕ ವಂಚಕರ ಕಡೆಯಿಂದ ಕರೆಬಂದಿದ್ದು, ‘ಹಣ ಜಮಾ ಆಗಿದ್ದು, ಜೂನ್ 7ರಂದು ಅಮೆರಿಕದಿಂದ ಐಫೋನ್ ತರಿಸುವುದಾಗಿ ಹೇಳಿದ್ದ. ಹಲವು ದಿನಗಳು ಕಳೆದರೂ ಐಫೋನ್ ಮಾತ್ರ ತರಿಸಿಕೊಟ್ಟಿಲ್ಲ. ಬಳಿಕ ಮೊಬೈಲ್ ಅನ್ನು ಸ್ವಿಚ್ ಆಫ್‌‌‌ ಮಾಡಿದ್ದಾರೆ. ಮೋಸ ಹೋಗಿರುವುದು ಅರಿವಾಗಿ ಶಿವಮೊಗ್ಗ (shimoga) ಸಿಇಎನ್ ಪೊಲೀಸ್ ಠಾಣೆಗೆ (Cyber Economic and Narcotics Crime Police Station) ದೂರು ನೀಡಿದ್ದಾರೆ. ತನಿಖೆ ನಡೆಯುತ್ತಿದೆ.

https://suddikanaja.com/2021/11/26/fake-note-seized-at-bhadravathi-rangappa-circle/

Leave a Reply

Your email address will not be published. Required fields are marked *

error: Content is protected !!