Terrorist link | ಶಂಕಿತ‌ ಉಗ್ರರ ಪ್ರಕರಣ, ಶಿವಮೊಗ್ಗದ 11 ಕಡೆಗಳಲ್ಲಿ ದಾಳಿ, ಮಹತ್ವದ ದಾಖಲೆ ವಶಕ್ಕೆ

police

 

 

HIGHLIGHTS

  • ನಿಷೇಧಿತ ಭಯೋತ್ಪಾದಕ ಸಂಘಟನೆಯ ನಂಟು ಹಿನ್ನೆಲೆ ಇಬ್ಬರ ಬಂಧನ
  • ಮಂಗಳೂರು ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಕೃತ್ಯವೆಸಗಲು ಸಂಚು ರೂಪಿಸಿದ ಮತ್ತು ಚಟುವಟಿಕೆ ನಡೆಸುತ್ತಿದ್ದ ಒಟ್ಟು 11 ಸ್ಥಳಗಳ ಮೇಲೆ ದಾಳಿ

ಸುದ್ದಿ ಕಣಜ.ಕಾಂ‌| KARNATAKA | 21 SEP 2022
ಶಿವಮೊಗ್ಗ(shivamogga): ನಗರದಲ್ಲಿ‌ ಶಂಕಿತ‌ ಉಗ್ರರ (suspected terrorist) ಬಂಧನದ ಬೆನ್ನಲ್ಲೇ ಶಿವಮೊಗ್ಗದ 11 ಕಡೆಗಳಲ್ಲಿ ದಾಳಿ‌ ನಡೆಸಿ ಶೋಧ ಕಾರ್ಯ ಕೈಗೊಳ್ಳಲಾಗಿದೆ.

READ | ಐಸಿಸ್’ನೊಂದಿಗೆ ಶಿವಮೊಗ್ಗ ಲಿಂಕ್, ಶಾರೀಕ್‌ ಸಹಚರರ ಬಂಧನ, ಕಿಂಗ್ ಪಿನ್ ಎಸ್ಕೇಪ್

ತೀರ್ಥಹಳ್ಳಿ(Thirthahalli)ಯ ಸೊಪ್ಪುಗುಡ್ಡೆಯ ಶಾರಿಕ್ ಮತ್ತು ಆತನ ಸಹಚರರಾದ ಮಂಗಳೂರಿ(Mangalore)ನ ಮಾಝ್ ಮುನೀರ್‌ ಅಹಮ್ಮದ್, ಶಿವಮೊಗ್ಗದ ಸಿದ್ದೇಶ್ವರ ನಗರ ನಿವಾಸಿ ಸೈಯದ್‌ ಯಾಸೀನ್‌ ನಿಷೇಧಿತ ಭಯೋತ್ಪಾದಕ ಸಂಘಟನೆಯ ನಂಟನ್ನು ಹೊಂದಿರುವ ಕಾರಣದಿಂದಾಗಿ ಇಬ್ಬರನ್ನು ಸೆ.19ರಂದು ಬಂಧಿಸಲಾಗಿದೆ. ಆರೋಪಗಳ ವಿರುದ್ಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ UNLAWFUL ACTIVITIES (PREVENTION) ACT (ಯುಎಪಿಎ) 1967 ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಆರೋಪಿಗಳು ಮಂಗಳೂರು ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಕೃತ್ಯವೆಸಗಲು ಸಂಚು ರೂಪಿಸಿದ ಮತ್ತು ಚಟುವಟಿಕೆ ನಡೆಸುತ್ತಿದ್ದ ಒಟ್ಟು 11 ಸ್ಥಳಗಳ ಮೇಲೆ ಇಲ್ಲಿಯವರೆಗೆ ದಾಳಿ ನಡೆಸಿ, ಶೋಧ ಕಾರ್ಯ ಕೈಗೊಳ್ಳಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಕೂಲಂಕಶವಾಗಿ ವಿಶ್ಲೇಷಣೆ ನಡೆಸಿ ಪಿಎಫ್‌’ನಲ್ಲಿ ನೋಂದಾಯಿಸಿ ನ್ಯಾಯಾಲಯಕ್ಕೆ ನಿವೇದಿಸಿಕೊಳ್ಳಲಾಗಿದೆ.

https://suddikanaja.com/2022/06/25/seven-hybrid-park-announced-by-karnataka-government/

Leave a Reply

Your email address will not be published. Required fields are marked *

error: Content is protected !!