School holiday | ನಾಳೆ‌ ಶಾಲೆಗಳಿಗೆ ಸಾರ್ವಜನಿಕ ರಜೆ ಇರಲ್ಲ, ಶಿಕ್ಷಣ ಇಲಾಖೆ ಅಧಿಕಾರಿಗಳು ಹೇಳಿದ್ದೇನು?

Public Notice

 

 

HIGHLIGHTS

  • ಸ್ಥಳೀಯ ‌ಪರಿಸ್ಥಿತಿಗೆ ಅನುಗುಣವಾಗಿ ಶಾಲೆಗಳಿಗೆ ರಜೆ‌ ನೀಡುವ ಬಗ್ಗೆ ನಿರ್ಧರಿಸಬೇಕು
  • ಒಂದುವೇಳೆ, ಶುಕ್ರವಾರ ರಜೆ ನೀಡಿದರೆ, ಮುಂದಿನ ಭಾನುವಾರ ಪೂರ್ಣ ದಿನ ಶಾಲೆ ನಡೆಸಬೇಕು

ಸುದ್ದಿ ಕಣಜ.ಕಾಂ | CITY | 08 SEP 2022
ಶಿವಮೊಗ್ಗ: ನಗರ ವ್ಯಾಪ್ತಿಯ ಎಲಾ ಶಾಲೆಗಳ ಮುಖ್ಯ ಶಿಕ್ಷಕರ ಗಮನಕ್ಕೆ ಸೆಪ್ಟೆಂಬರ್ 9ರಂದು ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಪ್ರಯುಕ್ತ ನಡೆಯಲಿರುವ ಮರವಣಿಗೆ ಕಾರಣಕ್ಕೆ ನಗರ‌ ವ್ಯಾಪ್ತಿಯ‌ ಶಾಲೆಗಳಿಗೆ ಸ್ಥಳೀಯ ಪರಿಸ್ಥಿತಿ ಅನುಗುಣವಾಗಿ ಅಗತ್ಯವಿದ್ದಲ್ಲಿ ರಜೆ‌ ನೀಡುವಂತೆ ಶಿವಮೊಗ್ಗ ಬಿಇಒ‌ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಹಾಗೂ ಡಿಡಿಪಿಐ ಸೂಚನೆಯ ಅನ್ವಯ ಶಿವಮೊಗ್ಗ ನಗರ ವ್ಯಾಪ್ತಿಯ ಶಾಲೆಗಳು ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಅಗತ್ಯವಿದ್ದಲ್ಲಿ ಶಾಲೆಗೆ ರಜೆ ನೀಡಿ ಮುಂದಿನ ಭಾನುವಾರ ಪೂರ್ಣ ದಿನ ಶಾಲೆ ನಡೆಸಬೇಕು. ಯಾವುದೇ ಸಾರ್ವಜನಿಕ ರಜೆ ನೀಡಿರುವುದಿಲ್ಲ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!