ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಕೋವಿಡ್ ಪಾಸಿಟಿವ್ ಪ್ರಕರಣ ಶಿವಮೊಗ್ಗ ತಾಲೂಕಿನಲ್ಲಿ ದಾಖಲಾಗುತ್ತಿದ್ದವು. ಆದರೆ, ಕಳೆದ ಎರಡು ದಿನಗಳಿಂದ ಭದ್ರಾವತಿಯಲ್ಲಿ ಹೆಚ್ಚು ಸೋಂಕು ಪತ್ತೆಯಾಗುತ್ತಿವೆ. ಶನಿವಾರ ಭದ್ರಾವತಿಯಲ್ಲಿ 8 ಪಾಸಿಟಿವ್ ಬಂದಿವೆ.
ಜಿಲ್ಲೆಯಲ್ಲಿ ಹೊಸದಾಗಿ 23 ಜನರಿಗೆ ಸೋಂಕು ತಗಲಿದೆ. 18 ಜನ ಗುಣಮುಖರಾಗಿದ್ದಾರೆ. ಯಾವುದೇ ಸಾವು ಸಂಭವಿಸಿಲ್ಲ. ಇದುವರೆಗೆ 348 ಜನ ಸಾವನ್ನಪ್ಪಿದ್ದಾರೆ. 3,660 ಜನರ ಗಂಟಲು ದ್ರವದ ಮಾದರಿ ಪಡೆದಿದ್ದು, 3148 ನೆಗೆಟಿವ್ ಬಂದಿವೆ.
ತಾಲೂಕುವಾರು: ಶಿವಮೊಗ್ಗ 2, ಭದ್ರಾವತಿ 8, ಶಿಕಾರಿಪುರ 2, ತೀರ್ಥಹಳ್ಳಿ 1, ಸೊರಬ 0, ಸಾಗರ 7, ಹೊಸನಗರದ 3 ಪ್ರಕರಣಗಳು ಪತ್ತೆಯಾಗಿವೆ. ಇದುವರೆಗೆ 7,159 ಕಂಟೈನ್ಮೆAಟ್ ಜೋನ್ಗಳಿದ್ದು, ಅದರಲ್ಲಿ 6500 ಕೈಬಿಡಲಾಗಿದೆ.