Crime news | ಅಸ್ವಸ್ಥಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಿಸದೇ ಸಾವು

Dead body

 

 

ಸುದ್ದಿ ಕಣಜ.ಕಾಂ | SHIVAMOGGA CITY | 24 SEP 2022
ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆ ಕಾಂಪೌಂಡ್ ಫುಟ್‍ಪಾತ್ ಬಳಿ ಸುಸ್ತಾದಂತೆ ಬಿದ್ದಿದ್ದ ಸುಮಾರು 45 ರಿಂದ 50 ವರ್ಷದ ರೇಷ್ಮಾ ಎಂಬ ಮಹಿಳೆಯನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸೆಪ್ಟೆಂಬರ್ 16ರಂದು ಮೃತಪಟ್ಟಿರುತ್ತಾರೆ.
ವಾರಸುದಾರರಿಲ್ಲದ ಮೃತಳು ಸುಮಾರು 5.08 ಅಡಿ ಎತ್ತರವಿದ್ದು, ಗೋಧಿ ಮೈಬಣ್ಣ, ಕೋಲು ಮುಖ, ತೆಳುವಾದ ಮೈಕಟ್ಟು ಹೊಂದಿರುತ್ತಾಳೆ. ತಲೆಯಲ್ಲಿ ಸುಮಾರು 6 ಇಂಚು ಉದ್ದದ ಕಪ್ಪು ಕೂದಲು ಇದ್ದು, ಮಾಸಲು ಬಣ್ಣದ ನೈಟಿ, ಕಪ್ಪು ಬಣ್ಣದ ಬುರ್ಕಾ ಧರಿಸಿರುತ್ತಾರೆ. ಮೃತಳ ವಾರಸುದಾರರು ಯಾರಾದರೂ ಇದ್ದಲ್ಲಿ ದೂ.ಸಂ: 08182-261414, 9611761255 ನ್ನು ಸಂಪರ್ಕಿಸಬಹುದೆಂದು ದೊಡ್ಡಪೇಟೆ ಪೊಲೀಸ್ ಠಾಣೆ ಪ್ರಕಟಣೆ ತಿಳಿಸಿದೆ.

https://suddikanaja.com/2022/09/23/suda-deadlin-to-submit-report/

Leave a Reply

Your email address will not be published. Required fields are marked *

error: Content is protected !!