Arecanut | ಅಡಿಕೆಯಲ್ಲಿ ಹಿಡಿಗುಂಟೆ ರೋಗ, ಆತಂಕದಲ್ಲಿ ರೈತರು

beluru gopal krishna

 

 

ಸುದ್ದಿ ಕಣಜ.ಕಾಂ | DISTRICT | 05 OCT 2022
ಶಿವಮೊಗ್ಗ: ಮಲೆನಾಡಿನ ರೈತರ ಜೀವನಾಡಿ ಆಗಿರುವ ಅಡಿಕೆಗೆ ಒಂದಿಲ್ಲೊಂದು ರೋಗಗಳು ಕಾಡುತ್ತಿವೆ.
ಸಾಗರ ತಾಲೂಕಿನ ಕರೂರು ಹೋಬಳಿ ಬಾರಂಗಿ ತುಂಬಿ ಬ್ಯಾಕೊಡು ನೆಲ್ಲಿಬೀಡು, ಹಾಬಿಗೆ, ನಿಟ್ಟೂರು, ಸಾಗರ ತಾಲ್ಲೂಕಿನ ಮುಳುಗಡೆ ಪ್ರದೇಶದ ಜನರಿಗೆ ಮತ್ತೊಂದು ಆತಂಕ ಎದುರಾಗಿದೆ.
ಬಿಳಿ ಚಿಕ್ಕಿ, ರೋಗ ಅಥವಾ ಹಿಡಿಕುಂಟೆ ರೋಗ ಬಂದು ತೋಟದಲ್ಲಿ ಬೆಳೆ ನಾಶವಾಗುತ್ತಿದೆ.
ಅಡಿಕೆಯನ್ನೇ ನಂಬಿ ಜೀವನ ಕಟ್ಟಿಕೊಂಡ ಮಲೆನಾಡ ರೈತರ ಗೋಳನ್ನು ಕೇಳಲು ಇಲ್ಲಿವರೆಗೂ ಇಲ್ಲಿನ ಶಾಸಕರು ಅಧಿಕಾರಿಗಳು ಬಂದಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

READ | ಅಡಿಕೆ ಬೆಳೆಗಾರರಿಗೆ ಗುಡ್ ನ್ಯೂಸ್, ಎಲೆ ಚುಕ್ಕೆ ರೋಗ ನಿಯಂತ್ರಣಕ್ಕೆ ರಾಜ್ಯ ಸರಕಾರದಿಂದ ಮಹತ್ವದ ಘೋಷಣೆ

ಮಾಜಿ‌ ಶಾಸಕ‌ ಗೋಪಾಲಕೃಷ್ಣ ಭೇಟಿ
ಮಾಜಿ ಶಾಸಕರು ಗೋಪಾಲ ಕೃಷ್ಣ ಬೇಳೂರು ಅವರು ಇತ್ತೀಚೆಗೆ ತೋಟಗಳಿಗೆ ಭೇಟಿ ನೀಡಿದ್ದು, ರೈತರ ಕಷ್ಟಗಳನ್ನು ಆಲಿಸಿದ್ದರು. ಸರ್ಕಾರ ಮತ್ತು ಸ್ಥಳೀಯ ಶಾಸಕರು ಇದರ ಬಗ್ಗೆ ಗಮನ ಹರಿಸಿ ಅಲ್ಲಿನ ರೈತರಿಗೆ ಅನುಕೂಲ ಮಾಡಿಕೊಡಲು ಒತ್ತಾಯಿಸಿದರು. ಮುಂದಿನ ದಿನಗಳಲ್ಲಿ ಸರ್ಕಾರ ರೈತರಪರ ನಿಲ್ಲದೆ ಹೋದರೆ ಬೃಹತ್ ಪಾದ ಯಾತ್ರೆ ಮಾಡುವುದಾಗಿ ಎಚ್ಚರಿಸಿದ್ದಾರೆ.

https://suddikanaja.com/2021/10/04/disease-in-arecanut/

Leave a Reply

Your email address will not be published. Required fields are marked *

error: Content is protected !!