Filmi Beat | ‘ವೃಷ್ಟಿ’ ಪೋಸ್ಟರ್ ರಿಲೀಸ್, ಏನಿದು ಚಿತ್ರ?

Vrushti

 

 

ಸುದ್ದಿ ಕಣಜ.ಕಾಂ | KARNATAKA | 07 OCT 2022
ಶಿವಮೊಗ್ಗ(shivamogga): ‘ವೃಷ್ಟಿ’ ಕನ್ನಡ ಚಲನಚಿತ್ರದ ಪೋಸ್ಟರ್ ಅನ್ನು ಮಂಗಳೂರಿನ ಪ್ರಕಾಶ್ ನಾಥ ಮಂದಿರದಲ್ಲಿ ವಿಧ್ಯುಕ್ತವಾಗಿ ಬಿಡುಗಡೆ ಮಾಡಲಾಯಿತು.

vrushti 2
‘ವೃಷ್ಟಿ’ ಚಲನಚಿತ್ರದ ಪೋಸ್ಟರ್ ಬಿಡುಗಡೆ.

ವಾಗ್ಮಿ ಸಿನಿ ಕ್ರಿಯೇಷನ್ಸ್ ಅರ್ಪಿಸುವ ಸಾಧನಾ ಜಗದೀಶ್ ಶೆಟ್ಟಿ ಅವರ ನಿರ್ಮಾಣದ ಹೊಸ ಕನ್ನಡ ಚಿತ್ರ ಇದಾಗಿದ್ದು, ಪ್ರಕಾಶ್ ನಾಥ ಮಂದಿರದ ಸುಮಂತ್ ಅವರು ಪೋಸ್ಟರ್ ಅನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಧಾರ್ಮಿಕ ಮುಖಂಡ ನಾಗರಾಜ್ ಆಚಾರ್ಯ ಉಪಸ್ಥಿತರಿದ್ದರು.

READ | ಎಚ್.ಕೆ.ಜಂಕ್ಷನ್ ಬಳಿ ಏಳೆಂಟು ಮಂಗಗಳ ಸಾವು, ಜನರಲ್ಲಿ ಆತಂಕ

ನಿಶಿತ್ ಶೆಟ್ಟಿ ನಿರ್ದೇಶನದ ಚಿತ್ರ
ಈ ಮೊದಲು ಕನಸು ಮಾರಾಟಕ್ಕಿದೆ ಚಲನಚಿತ್ರ ಹಾಗೂ ವನಜಾ ವೆಬ್ ಸೀರಿಸ್, ಮಾಡಿದ ತಂಡವೇ ಈ ವೃಷ್ಟಿ ಚಲನಚಿತ್ರವನ್ನು ಚಿತ್ರೀಕರಿಸಿದ್ದು, ನಿಶಿತ್ ಶೆಟ್ಟಿ ಅವರು ನಿರ್ದೇಶನ ಮಾಡಿದ್ದಾರೆ. ಸಂತೋಷ್ ಆಚಾರ್ಯ ಗುಂಪಲಾಜೆ ಕ್ಯಾಮರಾ ಕೈಚಳಕ ಈ ಚಿತ್ರದಲ್ಲಿದೆ. ಗಣೇಶ್ ನೀರ್ಚಾಲ್ ಸಂಕಲನ ಮಾಡಿದ್ದು, ಸಂಗೀತ ನಿರ್ದೇಶನವನ್ನು ಮಾನಸ ಹೊಳ್ಳ ಅವರು ನಿರ್ವಹಿಸಿದ್ದಾರೆ.ಮುಖ್ಯ ಭೂಮಿಕೆಯಲ್ಲಿ ಯಶವಂತ್ ಬೆಳ್ತಂಗಡಿ, ಸಿಂಚನಾ ಪಿ‌.ರಾವ್,ವಿನಿಶಾ,ಕಾಮಿಡಿ ಕಿಲಾಡಿ ಖ್ಯಾತಿಯ ಪ್ರವೀಣ್ ಜೈನ್, ಯುವ ಶೆಟ್ಟಿ,ರಾಕೇಶ್ ಪೂಜಾರಿ, ಅನೀಶ್ ಪೂಜಾರಿ ಮುಂತಾದವರು ಅಭಿನಯಿಸಿದ್ದಾರೆ.

https://suddikanaja.com/2022/01/25/prakash-travels-owner-prakash-found-dead-at-sharavathi-backwaters/

Leave a Reply

Your email address will not be published. Required fields are marked *

error: Content is protected !!