Elephant attack | ಶಿವಮೊಗ್ಗದ ಹಲವೆಡೆ ಮತ್ತೆ ಕಾಡಾನೆ ದಾಳಿ, ಬಾಳೆ, ಅಡಿಕೆ ತೋಟಕ್ಕೆ ನುಗ್ಗಿದ ಪುಂಡಾನೆ

ripponpete elephant

 

 

ಸುದ್ದಿ ಕಣಜ.ಕಾಂ | DISTRICT | 30 OCT 2022
ಶಿವಮೊಗ್ಗ(shivamogga): ಜಿಲ್ಲೆಯ ಹಲವೆಡೆ ಕಾಡಾನೆಗಳು ದಾಳಿ ಮಾಡಿದ್ದು, ಅಡಿಕೆ (arecanut) ಮತ್ತು ಬಾಳೆ (Banana) ತೋಟಕ್ಕೆ ನುಗ್ಗಿದ್ದರಿಂದ ಅಪಾರ ಹಾನಿಯಾಗಿದೆ.
ತಾಲೂಕಿನ ಆಯನೂರು (Aynur) ಸಮೀಪದ ಎರೆಬೀಸು ಗ್ರಾಮದ ಯಲ್ಲಪ್ಪ ಎಂಬುವವರ ಅಡಿಕೆ ತೋಟಕ್ಕೆ ಕಾಡಾನೆಗಳು ನುಗ್ಗಿದ್ದು, 35ಕ್ಕೂ ಹೆಚ್ಚು ಮರಗಳು ನೆಲಕ್ಕೆ ಉರುಳಿವೆ.
ಅಡಿಕೆ ತೋಟ ಮಾತ್ರವಲ್ಲದೇ ಅಕ್ಕಪಕ್ಕದ ಗದ್ದೆಗಳಿಗೂ ಆನೆಗಳು ನುಗ್ಗಿವೆ. ಪರಿಣಾಮ ಒಂದು ಎಕೆರೆಗೂ ಹೆಚ್ಚು ಮೆಕ್ಕೆಜೋಳ (Maze) ಹಾಳಾಗಿದೆ.

READ | 1048 ಸಮುದಾಯ ಆರೋಗ್ಯ ಅಧಿಕಾರಿಗಳ ನೇಮಕಕ್ಕೆ ಅಧಿಸೂಚನೆ, ಯಾರೆಲ್ಲ ಅರ್ಜಿ ಸಲ್ಲಿಸಲು ಅವಕಾಶ?

ರೈತರಲ್ಲಿ ನಿತ್ಯವೂ ಆತಂಕ
ಮಂಜರಿಕೊಪ್ಪ, ಮಲೆಶಂಕರ, ಕೂಡಿ ಭಾಗದ ರೈತರು ಆನೆ(Elephant)ಗಳ ದಾಳಿಯಿಂದ ಆತಂಕಕ್ಕೆ ಒಳಗಾಗಿದ್ದಾರೆ. ನಿರಂತರ ಆನೆಗಳ ದಾಳಿಯಿಂದ ಬೆಳೆ, ತೋಟಗಳು ಹಾಳಾಗುತ್ತಿವೆ ಎಂದು ರೈತರು ಆರೋಪಿಸಿದ್ದಾರೆ.
ಶಾಸಕ ಅಶೋಕ್ ನಾಯ್ಕ್ ಭೇಟಿ
ಆನೆ ದಾಳಿಯಿಂದ ಹಾಳಾದ ತೋಟಗಳಿಗೆ ಶಿವಮೊಗ್ಗ ಗ್ರಾಮಾಂತರ ಶಾಸಕ ಕೆ.ಬಿ.ಅಶೋಕ್ ನಾಯ್ಕ್ (KB Ashok Naik) ಅವರು ಭೇಟಿ ನೀಡಿದರು. ರೈತರ ಅಹವಾಲುಗಳನ್ನು ಆಲಿಸಿದರು. ಎಷ್ಟು ಬೆಳೆ ಹಾನಿಯಾಗಿದೆ ಎಂದು ಪರಿಶೀಲನೆ ಮಾಡಲಾಯಿತು. ಈ ಹಿಂದೆ ಹೊಡೆದ ಇಟಿಪಿ ಮುಚ್ಚಿಹೋಗಿದ್ದು ಅದನ್ನು ಆಳ ಹಾಗೂ ಉದ್ದ ಮಾಡುವಂತೆ ಸೂಚನೆ ನೀಡಿದರು.
ರಿಪ್ಪನಪೇಟೆಯಲ್ಲೂ ಕಾಡಾನೆ ದಾಳಿ
ಹೊಸನಗರ ತಾಲೂಕಿನ ರಿಪ್ಪನಪೇಟೆ(Ripponpete) ಬಳಿಯ ನೇರ್ಲಿಗೆಯಲ್ಲಿ ಬಾಳೆ ತೋಟಕ್ಕೆ ಆನೆ ನುಗ್ಗಿದ್ದು, ತೋಟ ಹಾಳಾಗಿದೆ. ನೇರ್ಲಿಗೆ ಗ್ರಾಮದ ನಿವಾಸಿ ನಾಗಪ್ಪ ಎಂಬುವವರ ತೋಟಕ್ಕೆ ಕಾಡಾನೆ ನುಗ್ಗಿದೆ. ಇಲ್ಲಿಯ ರೈತರು ಸಹ ಭೀತಿಯಲ್ಲಿದ್ದಾರೆ.
ರೈತರು ಹೇಳುವಂತೆ, ಕಳೆದ ಫೆಬ್ರವರಿ, ಮಾರ್ಚ್‍ನಲ್ಲಿ ಅರಸಾಳು, ಬೆಳ್ಳೂರು, ಹೆದ್ದಾರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲವು ಗ್ರಾಮಗಳಲ್ಲಿ ಆನೆಗಳು ನಿರಂತರವಾಗಿ ಕಾಣಿಸಿಕೊಂಡಿವೆ.

https://suddikanaja.com/2022/10/29/today-gold-silver-rate-decline-in-karnataka/

Leave a Reply

Your email address will not be published. Required fields are marked *

error: Content is protected !!