Competition | ಶಾರ್ಟ್ ಮೂವಿಗಳನ್ನು ಇಲ್ಲಿಗೆ ಕಳುಹಿಸಿ ಆಕರ್ಷಕ ಬಹುಮಾನ ಗೆಲ್ಲಿ, ಷರತ್ತುಗಳೇನು,‌ ಕೊನೆ‌ ದಿನಾಂಕವೇನು?

DS arun

 

 

HIGHLIGHTS

  • ಅಂಬೆಗಾಲು – 5 ಸ್ಪರ್ಧೆಗೆ ಕಿರುಚಿತ್ರ ಕಳುಹಿಸಲು ಅಕ್ಟೋಬರ್ 31 ಲಾಸ್ಟ್‌ ಡೇಟ್ 
  • ವಿಜೇತರಿಗೆ ಆಕರ್ಷಕ ಬಹುಮಾನಗಳು. ಜೊತೆಗೆ, ವಿವಿಧ ಕ್ಷೇತ್ರದಲ್ಲಿ ಪ್ರಶಸ್ತಿ

ಸುದ್ದಿ ಕಣಜ.ಕಾಂ | KARNATAKA | 02 OCT 2022
ಶಿವಮೊಗ್ಗ (shivamogga): ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಂಗ ಸಂಸ್ಥೆಯಾದ ಶಿವಮೊಗ್ಗ ಬೆಳ್ಳಿಮಂಡಲ(belli mandala), ನಗರದ ಪ್ರತಿಷ್ಠಿತ ಯುಗಧರ್ಮ ಜಾನಪದ ಸಮಿತಿ ಹಾಗೂ ಸಿನಿಮೊಗೆ – ಶಿವಮೊಗ್ಗ ಚಿತ್ರ ಸಮಾಜಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿರುವ ಅಂಬೆಗಾಲು – 5 ಕಿರು ಚಿತ್ರ (ಶಾರ್ಟ್ ಫಿಲಂ- short film) ಸ್ಪರ್ಧೆಗೆ ಕಿರುಚಿತ್ರಗಳನ್ನು ಸಲ್ಲಿಸಲು ಅಕ್ಟೋಬರ್ 31ರ ವರೆಗೆ ಕಾಲಾವಕಾಶ ನೀಡಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ, ಬೆಳ್ಳಿಮಂಡಲದ ಕಾರ್ಯಧ್ಯಕ್ಷರು ಹಾಗೂ ಅಂಬೆಗಾಲು ಕಿರುಚಿತ್ರ ಸ್ಪರ್ಧೆಯ ಸಂಚಾಲಕ ಡಿ. ಎಸ್. ಅರುಣ್ (DS Arun) ತಿಳಿಸಿದ್ದಾರೆ.

READ | ಶಿವಮೊಗ್ಗಕ್ಕೆ ಸ್ವಚ್ಛ ಭಾರತ್ ಪ್ರಶಸ್ತಿಯ ಗರಿ, ರಾಷ್ಟ್ರಪತಿಯಿಂದ ಪ್ರಶಸ್ತಿ ಪ್ರದಾನ, ಶಿವಮೊಗ್ಗಕ್ಕೆ ಸಿಕ್ಕ ಪ್ರಶಸ್ತಿ ಯಾವುದು?

ಈ ಕುರಿತು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಅವರು, ಈ ಕಿರುಚಿತ್ರ ಸ್ಪರ್ಧೆಯಲ್ಲಿ ಭಾಗವಹಿಸಿರುವವರ ಮನವಿಯ ಮೇರೆಗೆ ಅವಧಿಯನ್ನು ವಿಸ್ತರಿಸಲಾಗಿದ್ದು, ಬಹುಮಾನ ವಿತರಣಾ ಸಮಾರಂಭ ಡಿಸೆಂಬರ್ ಮೂರನೇ ವಾರದಲ್ಲಿ ವಿಶೇಷವಾಗಿ ನಡೆಯಲಿದೆ ಎಂದಿದ್ದಾರೆ.
ಯುವಜನತೆಯಲ್ಲಿ ಚಲನಚಿತ್ರ ಕುರಿತಾಗಿ ಅರಿವು ಮೂಡಿಸುವ ಹಾಗೂ ಅವರಲ್ಲಿನ ಸೃಜನಶೀಲತೆಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಈ ಕಿರುಚಿತ್ರ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.

ಸ್ಪರ್ಧೆಗೆ ಹೇಗಿರಬೇಕು ವಿಡಿಯೋ?

  • ಶೀರ್ಷಿಕೆ ಹಾಗೂ ಟೈಟಲ್ ಕಾರ್ಡ್ ಸೇರಿ 8 ರಿಂದ 10 ನಿಮಿಷಗಳ ಕಿರುಚಿತ್ರಗಳನ್ನು ಸ್ಪರ್ಧೆಗೆ ಕಳುಹಿಸಬಹುದು. ಮೊಬೈಲ್ ಸೇರಿದಂತೆ ಯಾವುದೇ ಕ್ಯಾಮೆರಾವನ್ನು ಬಳಸಿ ಚಿತ್ರೀಕರಿಸಬಹುದಾಗಿದೆ.
  • ಸಾಮಾಜಿಕ ಜಾಲತಾಣಗಳೂ ಸೇರಿದಂತೆ ಯಾವುದೇ ಮಾಧ್ಯಮಗಳಿಗಿಂದ ದೃಶ್ಯಗಳನ್ನು ಕಟ್ ಆ್ಯಡ್ ಪೇಸ್ಟ್ ಆಗಲೀ, ಸಾಕ್ಷ್ಯಚಿತ್ರವನ್ನಾಗಲೀ ಅಥವಾ ಸಂಪೂರ್ಣ ಎನಿಮೇಷನ್ ಚಿತ್ರಗಳನ್ನಾಗಲೀ ಸ್ಪರ್ಧೆಗೆ ಕಳಿಸುವಂತಿಲ್ಲ.

READ | KSRTC ನೌಕರರ ವೇತನ ಪರಿಷ್ಕರಣೆಗೆ ಒಪ್ಪಿಗೆ

ವಿಜೇತರಿಗೆ ಆಕರ್ಷಕ ಬಹುಮಾನ
ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕರು, ಕಲಾವಿದರು ತೀರ್ಪುಗಾರರಾಗಿ ಪಾಲ್ಗೊಳ್ಳಲಿದ್ದು, ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ₹25,000 ಪ್ರಥಮ ಬಹುಮಾನ, ₹15,000 ದ್ವಿತೀಯ ಹಾಗೂ ₹10,000 ತೃತೀಯ ಬಹುಮಾನಗಳ ಜೊತೆಗೆ ಶ್ರೇಷ್ಠ ನಟ, ಶ್ರೇಷ್ಟ ನಟಿ, ಶ್ರೇಷ್ಠ ನಿರ್ದೇಶಕ, ಶ್ರೇಷ್ಠ ಕಥೆ-ಚಿತ್ರಕಥೆ, ಶ್ರೇಷ್ಠ ಛಾಯಾಗ್ರಹಣ, ಶ್ರೇಷ್ಠ ಸಂಗೀತ, ಶ್ರೇಷ್ಠ ಸಂಗೀತ ವಿಭಾಗಗಳಲ್ಲಿ ಆಕರ್ಷಣೀಯ ಸ್ಮರಣಿಕೆಗಳಿವೆ. ಪ್ರಶಸ್ತಿ ಪುರಸ್ಕೃತರಿಗೆ ಡಿಸೆಂಬರ್ ಮಾಸಾಂತ್ಯದಲ್ಲಿ, ನಡೆಯುವ ವರ್ಣರಂಜಿತ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು.
ಕಿರು ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಹೀಗೆ ಮಾಡಿ
ಕಿರು ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ₹500 ಪ್ರವೇಶ ಶುಲ್ಕವಿದ್ದು, ಅರ್ಜಿಗಳನ್ನು ಬಿ.ಎಚ್. ರಸ್ತೆಯ ದೀಪಕ್ ಪೆಟ್ರೋಲ್ ಬಂಕ್‍ನಲ್ಲಿ ಪಡೆದು, ಭರ್ತಿ ಮಾಡಿ, ಕಿರು ಚಿತ್ರಗಳನ್ನು ನಾಲ್ಕು ಎಚ್‍.ಡಿ ಶ್ರೇಣಿಯ ಡಿವಿಡಿ ಸಹಿತ ಅಕ್ಟೋಬರ್ 31, 2022 ಒಳಗಾಗಿ ಸಲ್ಲಿಸಬಹುದು ಎಂದಿದ್ದಾರೆ. ಸ್ಪರ್ಧೆಯ ವಿವರಗಳಿಗೆ ವೈದ್ಯ ಸಂಚಾಲಕರು (98444 56505), ಡಾ. ನಾಗಭೂಷಣ್ (94492 84495) ಮಂಜುನಾಥ್ (96865 59950) ಅವರನ್ನು ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.

https://suddikanaja.com/2021/01/07/amrutavahini-movie-release-hs-venkateshmurthy/

Leave a Reply

Your email address will not be published. Required fields are marked *

error: Content is protected !!