Bommanakatte | ಬೊಮ್ಮನಕಟ್ಟೆಯಲ್ಲಿ ನಿವೇಶನ ಕಳೆದುಕೊಳ್ಳುವ ಭೀತಿಯಲ್ಲಿರುವವರಿಗೆ ಶುಭ ಸುದ್ದಿ

Ashraya mane

 

 

HIGHLIGHTS

  • ಕಳೆದ 20 ವರ್ಷಗಳಿಂದ ನಿರ್ಮಾಣವಾಗದೇ ಉಳಿದ 543 ನಿವೇಶಗಳನ್ನು ರದ್ದುಗೊಳಿಸಿದ್ದ ಆಶ್ರಯ ಸಮಿತಿ
  • ಫಲಾನುಭವಿಗಳ ಮನವಿಯ ಮೇರೆಗೆ ಇನ್ನೂ ಮೂರು ತಿಂಗಳುಗಳ‌ ಕಾಲಾವಕಾಶ ನೀಡುವಂತೆ ಶಾಸಕ ಈಶ್ವರಪ್ಪ ಸೂಚನೆ

ಸುದ್ದಿ ಕಣಜ.ಕಾಂ | SHIMOGA CITY | 11 OCT 2022
ಶಿವಮೊಗ್ಗ(Shivamogga): ಬೊಮ್ಮನಕಟ್ಟೆ (Bommanakatte)ಯಲ್ಲಿ‌ ಆಶ್ರಯ‌ (Aashraya) ನಿವೇಶನ‌ ಪಡೆದು ಮನೆ ಕಟ್ಟಿಸಿಕೊಳ್ಳದವರಿಗೆ ಆಶ್ರಯ ಸಮಿತಿ ಬಿಸಿ‌ ಮುಟ್ಟಿಸಿತ್ತು. ಆದರೆ, ಫಲಾನುಭವಿಗಳ ಮನವಿ ಹಿನ್ನೆಲೆ ಇನ್ನೂ ಮೂರು ತಿಂಗಳು ಕಾಲಾವಕಾಶ ನೀಡುವಂತೆ ಶಾಸಕ ಕೆ.ಎಸ್.ಈಶ್ವರಪ್ಪ ಸೂಚನೆ ನೀಡಿದರು.
ಮನೆಗಳ‌ ಪ್ರಗತಿ‌ ಕಾರ್ಯದ ಕುರಿತು ಅಧಿಕಾರಿಗಳು ಮತ್ತು ಸಮಿತಿಯ ಪದಾಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದರು.

READ | ಶಿವಮೊಗ್ಗದಲ್ಲಿ 12 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ಲಭ್ಯ,‌ ಯಾರೆಲ್ಲ, ಎಲ್ಲೆಲ್ಲಿ‌ ಪಡೆಯ‌ಬಹುದು?

ಫಲಾನುಭವಿಗಳಿಗೆ ಮೂರು ತಿಂಗಳ ಕಾಲಾವಕಾಶ
ಬೊಮ್ಮನಕಟ್ಟೆಯಲ್ಲಿ ‘ಎ’ ಬ್ಲಾಕ್’ದಿಂದ ‘ಜಿ’ವರೆಗೆ 20 ವರ್ಷಗಳಾ ದರೂ ಮನೆ ಕಟ್ಟಿಕೊಳ್ಳದ ಹಿನ್ನೆಲೆಯಲ್ಲಿ 543 ಖಾಲಿ ನಿವೇಶನಗಳನ್ನು ಆಶ್ರಯ ಸಮಿತಿ ಇತ್ತೀಚೆಗೆ ರದ್ದುಗೊಳಿಸಿತ್ತು. ಆದರೆ, ಸಂತ್ರಸ್ತರು ಶಾಸಕರ ಸಮ್ಮುಖದಲ್ಲಿ ಅಳಲು ತೋಡಿಕೊಂಡಿದ್ದರಿಂದ ಮೂರು ತಿಂಗಳ ಕಾಲಾವಕಾಶ ನೀಡುವಂತೆ ಅಧಿಕಾರಿಗಳಿಗೆ ಕೆ.ಎಸ್.ಈಶ್ವರಪ್ಪ ಸೂಚಿಸಿದರು. ಮೂರು ತಿಂಗಳೊಳಗೆ ಹಂಚಿಕೆಯಾದ ನಿವೇಶನದಲ್ಲಿ ಮನೆಗಳನ್ನು ಕಟ್ಟಿಕೊಳ್ಳಬೇಕು. ಇಲ್ಲವಾದರೆ ಆ ನಿವೇಶನವನ್ನು ಬೇರೆಯವರಿಗೆ ಹಂಚಿಕೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಅಡಿಪಾಯ ಒಬ್ಬರದ್ದು ಮನೆ ಮತ್ತೊಬ್ಬರದ್ದು
ಬೊಮ್ಮನಕಟ್ಟೆಯ ಬಡಾವಣೆಯ ಬ್ಲಾಕ್‌’ವೊಂದರಲ್ಲಿ ಫಲಾನುಭವಿಯೊಬ್ಬರು ಅಡಿಪಾಯ ಹಾಕಿದ್ದರು. ಆದರೆ, ಅದರ ಮೇಲೆ ಮತ್ತೊಬ್ಬರು ಮನೆ ನಿರ್ಮಾಣ ಮಾಡಿದ್ದಾರೆ ಎಂದು ಫಲಾನುಭವಿಯೊಬ್ಬರು ಆರೋಪಿಸಿದರು. ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಸೂಚಿಸಿದರು.
ಡಿಸೆಂಬರ್ ಅಂತ್ಯಕ್ಕೆ 1,200 ಆಶ್ರಯ ಮನೆಗಳ ನಿರ್ಮಾಣ ಕಾರ್ಯ ಪೂರ್ಣ
ತಾಲೂಕಿನ ಗೋವಿಂದಾಪುರದಲ್ಲಿ ಡಿಸೆಂಬರ್ ಅಂತ್ಯಕ್ಕೆ ಎರಡು ಅಂತಸ್ತಿನ 1,200 ಮನೆಗಳ‌ ನಿರ್ಮಾಣ ಪೂರ್ಣಗೊಳ್ಳಲಿದೆ. ಯುಜಿಡಿ, ನೀರು ಮತ್ತು ವಿದ್ಯುತ್ ಸಂಪರ್ಕ ಕೂಡಲೇ ಕಲ್ಪಿಸಬೇಕು. ಮನೆಯ ಕಾಮಗಾರಿ ಮುಗಿದ ನಂತರ ಮೂಲಸೌಲಭ್ಯಕ್ಕಾಗಿ ಕಾಯಬೇಕೆ ಎಂದು ಪ್ರಶ್ನಿಸಿದರು.
ನಗರ ಆಶ್ರಯ ಸಮಿತಿ ಅಧ್ಯಕ್ಷ ಎಚ್.ಶಶಿಧರ್, ಸೂಡಾ ಅಧ್ಯಕ್ಷ ಎನ್.ಜಿ.ನಾಗರಾಜ್, ಮಹಾನಗರ ಆಯುಕ್ತ ಕೆ.ಮಾಯಣ್ಣಗೌಡ, ಬಿಜೆಪಿ ನಗರ ಅಧ್ಯಕ್ಷ ಎನ್.ಕೆ.ಜಗದೀಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

https://suddikanaja.com/2022/10/10/job-in-shivamogga-application-invited-for-eligible-candidates/

Leave a Reply

Your email address will not be published. Required fields are marked *

error: Content is protected !!