Jobs Junction | ಶಿವಮೊಗ್ಗದಲ್ಲಿ ನಡೆಯಲಿದೆ ಅ.13ರಂದು‌ ನೇರ ಸಂದರ್ಶನ, ಯಾರೆಲ್ಲ ಪಾಲ್ಗೊಳ್ಳಬಹುದು?

IMG 20220517 232257 102

 

 

HIGHLIGHTS

  • ಅಕ್ಟೋಬರ್ 10ರಂದು ಶಿವಮೊಗ್ಗದಲ್ಲಿ ನಡೆಯಲಿದೆ ಉದ್ಯೋಗ ಮೇಳ
  • ಎಸ್ಸೆಸ್ಸೆಲ್ಸಿ‌, ಪಿಯುಸಿ, ಐಟಿಐ, ಡಿಪ್ಲೋಮಾ, ಯಾವುದೇ ಡಿಗ್ರಿ ವಿದ್ಯಾರ್ಥಿಗಳು ಭಾಗವಹಿಸಬಹುದು

ಸುದ್ದಿ ಕಣಜ.ಕಾಂ | DISTRICT | 10 OCT 2022
ಶಿವಮೊಗ್ಗ(Shivamogga): ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರವು ಅಕ್ಟೋಬರ್ 13 ರಂದು ಬೆಳಗ್ಗೆ 10ಕ್ಕೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಉದ್ಯೋಗ ಮೇಳ(Job fair), ನೇರ ಸಂದರ್ಶನ (interview) ಆಯೋಜಿಸಿದೆ.

READ | ಶಿವಮೊಗ್ಗದಲ್ಲಿ ಜಾನುವಾರು ಸಂತೆ, ಜಾತ್ರೆ, ಸಾಗಾಣಿಕೆ ನಿಷೇಧ, ಕಾರಣವೇನು?

ಈ ನೇರ ಸಂದರ್ಶನದಲ್ಲಿ ಪ್ರತಿಷ್ಠಿತ ಖಾಸಗಿ ಕಂಪನಿಗಳು ಭಾಗವಹಿಸಲಿದ್ದು, ಎಸ್.ಎಸ್.ಎಲ್.ಸಿ(SSLC), ಪಿಯುಸಿ(PUC), ಐಟಿಐ(ITI), ಡಿಪ್ಲೊಮೋ(Diploma), ಯಾವುದೇ ಪದವಿ(any degree)ಗಳಲ್ಲಿ ತೇರ್ಗಡೆ ಹೊಂದಿರುವ 18 ರಿಂದ 35 ವರ್ಷದೊಳಗಿನ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ.
ಆಸಕ್ತರು ತಮ್ಮ ಬಯೋಡಾಟಾ (Bio data) ಮತ್ತು ಆಧಾರ್ ಕಾರ್ಡ್ (aadhar card) ಪ್ರತಿಗಳೊಂದಿಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಗುತ್ಯಪ್ಪ ಕಾಲೋನಿ, ಪಂಪಾನಗರ 2ನೇ ಕ್ರಾಸ್, ಸಾಗರ ರಸ್ತೆ, ಶಿವಮೊಗ್ಗ ಇಲ್ಲಿಗೆ ಹಾಜರಾಗುವಂತೆ ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯನ್ನು ಖುದ್ದಾಗಿ ಅಥವಾ ದೂ.ಸಂ.: 08182-255293/ 9380663606/ 9108235132 ಗಳನ್ನು ಸಂಪರ್ಕಿಸುವುದು.

https://suddikanaja.com/2022/10/07/south-western-railway-renaming-of-two-trains/

Leave a Reply

Your email address will not be published. Required fields are marked *

error: Content is protected !!