Kunchitiga | ಕುಂಚಿಟಿಗರಿಗೆ ಓಬಿಸಿ ಮೀಸಲಾತಿ ಹಕ್ಕೊತ್ತಾಯ ಸಮಾವೇಶದಲ್ಲಿ ಯಡಿಯೂರಪ್ಪ ಮಹತ್ವದ ಘೋಷಣೆ

Kunchatiga

 

 

HIGHLIGHTS

  • ಶಿಕಾರಿಪುರದಲ್ಲಿ ನಡೆದ ಕುಂಚಿಟಿಗರಿಗೆ ಓಬಿಸಿ ಮೀಸಲಾತಿ ಹಕ್ಕೊತ್ತಾಯ ರಾಜ್ಯಮಟ್ಟದ ಸಮಾವೇಶ
  • ಕೇಂದ್ರ ಓಬಿಸಿ ಪಟ್ಟಿಯಲ್ಲಿ ಸೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಭರವಸೆ
  • ಈಗಾಗಲೇ ಅಗತ್ಯ ದಾಖಲೆಗಳನ್ನು ಪಡೆದಿದ್ದು, ಪ್ರಧಾನಿ ಮೋದಿ ಅವರ ಗಮನಕ್ಕೆ ತರಲಾಗುವುದು

ಸುದ್ದಿ ಕಣಜ.ಕಾಂ | DISTRICT | 17 OCT 2022
ಶಿಕಾರಿಪುರ(shikaripura): ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಕುಂಚಿಟಿಗರಿ(kunchitiga)ಗೆ ಓಬಿಸಿ(OBC) ಮೀಸಲಾತಿ ಹಕ್ಕೊತ್ತಾಯ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (BS Yediyurappa) ಅವರು ಮಹತ್ವದ ಘೋಷಣೆ ಮಾಡಿದರು.

READ | ಭದ್ರತಾ ಸಿಬ್ಬಂದಿ, ಪಿಎಸ್.ಐ ನಡುವೆ ಸಂಘರ್ಷ, ಪಾಸ್‍ಗಾಗಿ ಮಾತಿನ ಚಕಮಕಿ, ರೂಲ್ಸ್ ಏನು ಹೇಳುತ್ತೆ?

ಕುಂಚಿಟಿಗ ಸಮುದಾಯ ಕೇಂದ್ರದ ಓಬಿಸಿ ಪಟ್ಟಿಗೆ ಸೇರಿಸಲು ಪ್ರಧಾನ ನರೇಂದ್ರ ಮೋದಿ  (Narendra modi)ಅವರ ಮನವೊಲಿಸಲಾಗುವುದು. ಈ ಮೂಲಕ ಸಮಾಜದ ಬೇಡಿಕೆ ಈಡೇರಿಸಲು ಪ್ರಯತ್ನಿಸಲಾಗುವುದು. ನಿಶ್ಚಿತವಾಗಿ ಮೀಸಲಾತಿ ದೊರೆಯಲಿದೆ ಎಂದು ಭರವಸೆ ನೀಡಿದರು.
ಮಾಜಿ ಸಚಿವರೂ ಆದ ಸಮಾಜದ ಪ್ರಮುಖ ಟಿ.ಬಿ.ಜಯಚಂದ್ರ (TB Jayachandra) ಅವರಿಂದ ಮೀಸಲಾತಿಗೆ ಸಂಬಂಧಿಸಿದಂತೆ ದಾಖಲೆ ಹಾಗೂ ಮನವಿಯನ್ನು ಪಡೆಯಲಾಗಿದೆ. ಈ ವಿಚಾರವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಾಗುವುದು ಎಂದು ಹೇಳಿದರು.

ಕುಂಚಟಿಗ ಜಾತಿಯ ಹೆಸರು ಕೇಂದ್ರದ ಪಟ್ಟಿಯಲ್ಲಿಲ್ಲ. 1998ರಲ್ಲಿ ಕೇಂದ್ರ ಓಬಿಸಿ ಪಟ್ಟಿಗೆ ಸೇರಿಸಲು ಕಡತ ಸಲ್ಲಿಸಿದರೂ ಅದು ಕೈಬಿಡಲಾಗಿತ್ತು. 24 ಬಾರಿ ಮನಸಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಕುಲಶಾಸ್ತ್ರದ ಅಧ್ಯಯನ ನಡೆಸಿ ವರದಿಯನ್ನು ಸಹ ಸಲ್ಲಿಸಲಾಗಿದೆ. ನ್ಯಾಯ ಸಿಗುವ ನಂಬಿಕೆ ಇದೆ.
| ಟಿ.ಬಿ.ಜಯಚಂದ್ರ, ಮಾಜಿ ಸಚಿವ

ಪ್ರಾಮಾಣಿಕ ಪ್ರಯತ್ನದ ಭರವಸೆ
ಕೇಂದ್ರ ಓಬಿಸಿ ಪಟ್ಟಿಗೆ ಕುಂಚಟಿಗ ಸಮಾಜವನ್ನು ಸೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಕುಂಚಟಿಗ ಸಮಾಜದ ತಾಲೂಕು ಅಧ್ಯಕ್ಷ ಕೆ.ಪಿ.ರುದ್ರಪ್ಪ ಮಾತನಾಡಿರು. ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಶಾಸಕರಾದ ರಾಜೇಶ್ ಗೌಡ, ವೀರಭದ್ರಯ್ಯ, ಚಿದಾನಂದ ಗೌಡ, ಕೌಶಲ ಅಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷ ಮುರುಳೀಧರ್ ಹಾಲಪ್ಪ, ಕಣಿವೆಮನೆ ಅರುಣ್ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.

https://suddikanaja.com/2021/02/14/kunchatiga-community-meeting-in-shivamogga-demand-for-central-obc/

Leave a Reply

Your email address will not be published. Required fields are marked *

error: Content is protected !!