Hindu Harsha | ಹಿಂದೂ ಹರ್ಷನ ಮನೆಯ ಮುಂದೆ ದುಷ್ಕರ್ಮಿಗಳಿಂದ ಕೂಗಾಟ, ಹಲ್ಲೆಗೆ ಒಳಗಾದ ವ್ಯಕ್ತಿ ಹೇಳುವುದೇನು?

Harsha Hindu

 

 

ಸುದ್ದಿ ಕಣಜ.ಕಾಂ | DISTRICT | 25 OCT 2022
ಶಿವಮೊಗ್ಗ(shivamogga): ಇತ್ತೀಚೆಗೆ ಹತ್ಯೆಯಾದ ಹಿಂದೂ ಹರ್ಷ(Hindu Harsha)ನ ಮನೆಯ ಮುಂದೆ ಸೋಮವಾರ ತಡರಾತ್ರಿ ಕೆಲವು ದುಷ್ಕರ್ಮಿಗಳು ಕಿರುಚಾಟ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇದನ್ನು ಖುದ್ದು ಹರ್ಷನ ಅಕ್ಕ ಅಶ್ವಿನಿ (Ashwini) ಅವರೇ ಇದನ್ನು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ.
ಬೈಕ್ ನಲ್ಲಿ ಬಂದ ಕೆಲವು ಯುವಕರು ಸೀಗೆಹಟ್ಟಿ(Seegehatti)ಯಲ್ಲಿರುವ ಹರ್ಷನ ಮನೆಯ ಮುಂದೆ ಬಂದ ಕಿರಚಾಡಿದ್ದಾರೆ. ಬೆದರಿಕೆಯೊಡ್ಡಿದ್ದಾರೆ ಎನ್ನಲಾಗಿದೆ.

READ | ಭರ್ಮಪ್ಪ ನಗರದಲ್ಲಿ ಕಿಡಿಗೇಡಿಗಳಿಂದ ವ್ಯಕ್ತಿಯ ಮೇಲೆ ಹಲ್ಲೆ, ತಲೆ ಭಾಗಕ್ಕೆ ಗಾಯ

ಭರ್ಮಪ್ಪ ನಗರದಲ್ಲಿ ಹಲ್ಲಿನಿಂದ ಹಲ್ಲೆ
ಭರ್ಮಪ್ಪ ನಗರದಲ್ಲಿ ಪ್ರಕಾಶ್(30) ಎಂಬುವವರ ಮೇಲೆ ಬೈಕಿನಲ್ಲಿ ಬಂದ ಕೆಲವರು ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ. ಈತ ಬಸ್ ನಿಲ್ದಾಣದಿಂದ ಮನೆಗೆ ಬಂದಿದ್ದು, ಸ್ನೇಹಿತರು ತಂದು ಬಿಟ್ಟು ಹೋಗಿದ್ದಾರೆ. ಆಗ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಏಕಾಏಕಿ ಹಲ್ಲೆ ನಡೆಸಿ ಅಲ್ಲಿಂದ ಪರಾರಿಯಾಗಿದ್ದಾರೆ.
ಗಾಯಾಳು ಪ್ರಕಾಶ್ ಹೇಳಿದ್ದೇನು?
“ನಾನು ಯಾವುದೇ ಸಂಘಟನೆಗೆ ಸೇರಿದವನಲ್ಲ. ಪಥ ಸಂಚಲನ ವೀಕ್ಷಿಸಲು ಹೋಗಿದ್ದು ಬಿಟ್ಟರೆ ಇನ್ನ್ಯಾವುದೇ ರೀತಿಯ ಸಂಬಂಧವಿಲ್ಲ” ಎಂದು ಹಲ್ಲೆಗೆ ಒಳಗಾದ ಪ್ರಕಾಶ್ ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ.
ಪೊಲೀಸ್ ಅಧಿಕಾರಿಗಳ ದೌಡು
ಹಳೇ ಶಿವಮೊಗ್ಗದಲ್ಲಿ ಹಲ್ಲೆ ಮತ್ತು ದುಷ್ಕರ್ಮಿಗಳ ಉಪಟಳದ ಬಗ್ಗೆ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಎಸ್.ಪಿ. ಜಿ.ಕೆ.ಮಿಥುನ್ ಕುಮಾರ್ ಸೇರಿದಂತೆ ಇನ್ನಿತರ ಪೊಲೀಸ್ ಅಧಿಕಾರಿಗಳು ಸೀಗೆಹಟ್ಟಿ, ಭರ್ಮಪ್ಪನಗರಕ್ಕೆ ರಾತ್ರಿಯೇ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಾಹಿತಿ ಪಡೆದಿದ್ದು, ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ.

https://suddikanaja.com/2022/10/24/auto-driver-murder-at-bhadravathi/

Leave a Reply

Your email address will not be published. Required fields are marked *

error: Content is protected !!