Bhadravathi | ಎಚ್.ಕೆ.ಜಂಕ್ಷನ್ ಬಳಿ ಏಳೆಂಟು ಮಂಗಗಳ ಸಾವು, ಜನರಲ್ಲಿ ಆತಂಕ

Bhadravati taluk

 

 

HIGHLIGHTS

  • ಭದ್ರಾವತಿ ತಾಲೂಕಿನ .ಕೆ.ಜಂಕ್ಷನ್ ಸಮೀಪದ ಆನೆಕಲ್ಲು ಉದ್ಭವ ಗಣಪತಿ ದೇವಸ್ಥಾನ ಸುತ್ತ ಮಂಗಗಳ ಸಾವು
  • ಏಕಾಏಕಿ ಏಳೆಂಟು ಮಂಗಗಳು ಮೃತಪಟ್ಟಿರುವುದರಿಂದ ಜನರಲ್ಲಿ ಗಾಬರಿ, ಅಧಿಕಾರಿಗಳು ಸ್ಥಳಕ್ಕೆ ದೌಡು

ಸುದ್ದಿ ಕಣಜ.ಕಾಂ | DISTRICT | 07 OCT 2022
ಭದ್ರಾವತಿ(Bhadravathi): ತಾಲೂಕಿನ ಎಚ್.ಕೆ.ಜಂಕ್ಷನ್ ಸಮೀಪದ ಆನೆಕಲ್ಲು ಉದ್ಭವ ಗಣಪತಿ ದೇವಸ್ಥಾನ ಅಕ್ಕಪಕ್ಕ ಏಳೆಂಟು ಮಂಗಗಳು ಮೃತಪಟ್ಟ ಘಟನೆ ನಡೆದಿದೆ.
ಏಕಾಏಕಿ ಹಲವು ಮಂಗಗಳು ಮೃತಪಟ್ಟಿದ್ದರಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಈ‌ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ವಲಯ ಅರಣ್ಯಾಧಿಕಾರಿ ಬಿ.ಜೆ.ತೇಜ, ಪಶುವೈದ್ಯಾಧಿಕಾರಿ ಮಹಾದೇವ್ ಶರ್ಮಾ ಸೇರಿದಂತೆ ಇತರರು ಭೇಟಿ ನೀಡಿ ಪರಿಶೀಲಿಸಿದ್ದಾರೆ‌.

READ | ಶಿರಾಳಕೊಪ್ಪ‌ ಭೂ‌ಕಂಪನ ಬಗ್ಗೆ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಹತ್ವದ ಪ್ರಕಟಣೆ

ವಿಷಪ್ರಾಶನದ ಬಗ್ಗೆ ಅನುಮಾನ
ದೇವಸ್ಥಾನದ ಸುತ್ತವೇ ಮಂಗಗಳು ಮೃತಪಟ್ಟಿರುವುದರಿಂದ ವಿಷಪ್ರಾಶನ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಆದರೆ, ಈ ಬಗ್ಗೆ ಮರಣೋತ್ತರ ಪರೀಕ್ಷೆ ಬಳಿಕ ಮಾತ್ರ ಖಚಿತವಾಗಿ ತಿಳಿದುಬರಲಿದೆ.

https://suddikanaja.com/2022/10/05/super-cop-shimoga-sp-bm-lakshmiprasad/

Leave a Reply

Your email address will not be published. Required fields are marked *

error: Content is protected !!