Siddaramaiah Allegation | ಶಿವಮೊಗ್ಗದಲ್ಲಿನ ಗಲಾಟೆಗಳಿಗೆ ಕೆ.ಎಸ್.ಈಶ್ವರಪ್ಪನವರೇ ಕಾರಣ

KS Eshwarappa siddaramaih 1

 

 

ಸುದ್ದಿ ಕಣಜ.ಕಾಂ | DISTRICT | 30 OCT 2022 
ಶಿವಮೊಗ್ಗ: ನಗರದಲ್ಲಿ ಸಂಭವಿಸಿರುವ ಗಲಾಟೆಗಳಿಗೆ ಶಾಸಕ ಕೆ.ಎಸ್.ಈಶ್ವರಪ್ಪನವರೇ ಕಾರಣ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

READ | ಸಂಗಮೇಶ್ ಮೇಲೂ ಆಪರೇಷನ್ ಕಮಲ ನಡೆದಿತ್ತು, ಸ್ಫೋಟಕ ಮಾಹಿತಿ ಹಂಚಿಕೊಂಡು ಸಿದ್ದರಾಮಯ್ಯ

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹರ್ಷನ ಹತ್ಯೆಯಾದ ನಂತರ ಸೆಕ್ಷನ್ 144 ವಿಧಿಸಲಾಗಿತ್ತು. ಆದರೂ ಹೆಣವಿಟ್ಟು ಮೆರವಣಿಗೆ ಮಾಡಲಾಗಿದೆ. ಇತಿಹಾಸದಲ್ಲಿ ಇಂತಹ ಜನಪ್ರತಿನಿಧಿಯನ್ನು ನಾನು ಕಂಡಿಲ್ಲ. ಇಂತಹವರು ಇರುವುದರಿಂದಲೇ ಸಮಾಜದಲ್ಲಿ ಅಶಾಂತಿ ನಿರ್ಮಾಣವಾಗುತ್ತಿದೆ ಎಂದು ಟೀಕಿಸಿದರು.
ಭಾರತ ಜೋಡೊಗೆ ಸ್ಪಂದನೆ
ಭಾರತ ಜೋಡೋ ನಿರೀಕ್ಷೆಗೂ ಮೀರಿ ಬೆಂಬಲ ವ್ಯಕ್ತವಾಗಿದೆ. ಉತ್ತಮ ಜನಸ್ಪಂದನೆ ಸಿಕ್ಕಿದೆ. ರಾಹುಲ್ ಗಾಂಧಿ ಅವರ ವ್ಯಕ್ತಿತ್ವದ ಬಗ್ಗೆ ಬಿಜೆಪಿಯವರು ಆರೋಪಿಸಿದ್ದರು. ಅವರ ವ್ಯಕ್ತಿತ್ವ ಜನರಿಗೆ ಗೊತ್ತಾಗಿದೆ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಅನಿತಾಕುಮಾರಿ, ಪ್ರಮುಖರಾದ ಜಿ.ಪಲ್ಲವಿ, ಸೌಗಂಧಿಕಾ, ರೇಖಾ ರಂಗನಾಥ್ ಮತ್ತಿತರರು ಉಪಸ್ಥಿತರಿದ್ದರು.

https://suddikanaja.com/2022/10/29/open-challenge-to-bs-yediyurappa-and-ks-eshwarappa-at-shimoga/

Leave a Reply

Your email address will not be published. Required fields are marked *

error: Content is protected !!