Bhadra dam | ಭದ್ರಾ ಬಲದಂಡೆ ನಾಲೆಗೆ ನೀರು ನಿಲುಗಡೆ, ಕಾರಣವೇನು?

Bhadra Dam

 

 

HIGHLIGHTS

  • ದಾವಣಗೆರೆ ಮತ್ತು ಸುತ್ತಮುತ್ತ ಭಾರಿ ಮಳೆಯಿಂದ ಕೊಚ್ಚಿಹೋದ ಅಕ್ವಡಕ್ಟ್ ನ ರಕ್ಷಣಾ ತಡೆಗೋಡೆ, ಕಾಲುವೆಯ ಕೊನೆ ಭಾಗದ ಸೇತುವೆ
  • ರಿಪೇರಿ ಹಿನ್ನೆಲೆ ಭದ್ರಾ ಬಲದಂಡೆ ನಾಲೆಗೆ ಹರಿಸಲಾಗುತ್ತಿರುವ ನೀರು ತಾತ್ಕಾಲಿಕ ನಿಲುಗಡೆ

ಸುದ್ದಿ ಕಣಜ.ಕಾಂ | DISTRICT | 08 OCT 2022
ಶಿವಮೊಗ್ಗ(Shivamogga): ಭದ್ರಾ (Bhadra dam) ಬಲದಂಡೆ ನಾಲೆಗೆ ಹರಿಸಲಾಗುತ್ತಿರುವ ನೀರನ್ನು ತಾತ್ಕಾಲಿಕವಾಗಿ ನಿಲುಗಡೆ ಮಾಡಲಾಗುತ್ತಿದೆ ಎಂದು ಕರ್ನಾಟಕ ನೀರಾವರಿ ನಿಗಮ ನಿಯಮಿತದ ಅಧೀಕ್ಷಕ ಎಂಜಿನಿಯರ್ ತಿಳಿಸಿದ್ದಾರೆ.

READ | ಅ.8ರಿಂದ ತಾಳಗುಪ್ಪ, ಟಿಪ್ಪು ಎಕ್ಸಪ್ರೆಸ್ ರೈಲುಗಳ ಹೆಸರು ಬದಲಾವಣೆ, ಹೊಸ ಹೆಸರುಗಳೇನು?

ನೀರು ನಿಲುಗಡೆಗೇನು ಕಾರಣ?
ದಾವಣಗೆರೆ (Davanagere) ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಅಕ್ಟೋಬರ್ 1ರಂದು ಸುರಿದ ಭಾರೀ ಮಳೆ(heavy rain)ಯಿಂದಾಗಿ ಭದ್ರಾ ಬಲದಂಡೆ ನಾಲೆಯ ದಾವಣಗೆರೆ ಶಾಖಾ ಕಾಲುವೆಗೆ ಮಳೆ ನೀರು ಸೇರಿಕೊಂಡ ಪರಿಣಾಮ ಸರಪಳಿ 35.50 ಕಿ.ಮೀ ನಲ್ಲಿ ಬರುವ ನಲ್ಕುಂದ ಗ್ರಾಮದ ಸಮೀಪ ಅಕ್ವಡಕ್ಟ್ ನ ರಕ್ಷಣಾ ತಡೆಗೋಡೆ ಸೇರಿದಂತೆ ಕಾಲುವೆಯ ಕೊನೆ ಭಾಗದ ಸೇತುವೆ ಸಂಪೂರ್ಣ ಕೊಚ್ಚಿ ಹೋಗಿದೆ. ತುರ್ತಾಗಿ ದುರಸ್ತಿ ಕಾಮಗಾರಿ ಕೈಗೊಳ್ಳಬೇಕಾಗಿರುತ್ತದೆ.
ಆದ್ದರಿಂದ, ಮುಂಗಾರು ಹಂಗಾಮಿನ ಬೆಳೆಗಳಿಗೆ ಬಲದಂಡೆ ನಾಲೆಯಲ್ಲಿ ಹರಿಸಲಾಗುತ್ತಿರುವ ನೀರನ್ನು ನಿಲ್ಲಿಸಲಾಗಿರುತ್ತದೆ. ಅಕ್ವಡಕ್ಟ್ ನ ದುರಸ್ತಿ ಕಾರ್ಯ ಕೈಗೊಂಡು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕಾಗಿರುವುದರಿಂದ ಸಂಬಂಧಪಟ್ಟ ರೈತರು ಇಲಾಖೆಯೊಂದಿಗೆ ಸಹಕರಿಸಬೇಕೆಂದು ಎಂದು ಮನವಿ ಮಾಡಲಾಗಿದೆ.

https://suddikanaja.com/2020/12/22/plantation-of-trees-tunga-canal-in-shivamogga/

 

Leave a Reply

Your email address will not be published. Required fields are marked *

error: Content is protected !!