ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ವಿದ್ಯುತ್ ಬಿಲ್ ಅನ್ನು ಸಿಕ್ಕವರ ಕೈಯಲ್ಲಿ ನೀಡದಿರುವಂತೆ ಮೆಸ್ಕಾಂ (MESCOM) ಪ್ರಕಟಣೆ ತಿಳಿಸಿದೆ.
READ | ಶಾಲೆಗೆ ತೆರಳುವ ಸಿದ್ಧತೆಯಲ್ಲಿದ್ದ ಬಾಲಕನಿಗೆ ಹಾರ್ಟ್ ಅಟ್ಯಾಕ್, ಸಾವು
ಶಿವಮೊಗ್ಗ ವ್ಯಾಪ್ತಿಯ ಮೆಸ್ಕಾಂ ಗ್ರಾಹಕರು ವಿದ್ಯುತ್ ಬಿಲ್‍ಗಳ ಮೊತ್ತವನ್ನು ಉಪ ವಿಭಾಗ ಕಚೇರಿಗಳ ನಗದು ಕೌಂಟರ್ ಗಳಲ್ಲಿ, ಎ.ಟಿ.ಪಿ ಕೌಂಟರ್ ಗಳಲ್ಲಿ, ಮೆಸ್ಕಾಂ ಆನ್ಲೈನ್ ಸೇವೆಗಳಾದ ಫೋನ್ ಪೇ, ಗೂಗಲ್ ಪೇ, ಪೇಟಿಎಂ, ಆರ್.ಟಿಜಿಎಸ್ ಅಥವಾ ನೆಫ್ಟ್, ಕರ್ನಾಟಕ ಒನ್, ನನ್ನ ಮೆಸ್ಕಾಂ ಆ್ಯಪ್ ಹಾಗೂ ಪೋಸ್ಟ್ ಆಫೀಸ್‍ಗಳಲ್ಲಿ ಪಾವತಿಸಬೇಕು. ವಿದ್ಯುತ್ ನಿಲುಗಡೆಗೆ ಬರುವ ಅಥವಾ ಯಾವುದೇ ಸಿಬ್ಬಂದಿಗೆ ಹಣವನ್ನು ನೀಡದಿರುವಂತೆ ಮೆಸ್ಕಾಂ ಕಾರ್ಯ ಮತ್ತು ಪಾಲನಾ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.