Whatsapp | ಎರಡು ಗಂಟೆ ವಾಟ್ಸಾಪ್ ಸ್ಥಗಿತ ಬಳಿಕ‌ ಪುನರಾರಂಭ, onlineನಲ್ಲಿ‌ ಬಂದ ದೂರುಗಳೆಷ್ಟು?

Whatsapp 2

 

 

ಸುದ್ದಿ ಕಣಜ.ಕಾಂ | NATIONAL | 25 OCT 2022
ನವದೆಹಲಿ(New Delhi): ಕಳೆದ ಎರಡು ಗಂಟೆಗಳಿಂದ ಸ್ಥಗಿತಗೊಂಡಿದ್ದ ವಾಟ್ಸಾಪ್ (WhatsApp) ಪುನರಾರಂಭಗೊಂಡಿದೆ.

Down detector whatsapp
ವಾಟ್ಸಾಪ್ ಸೇವೆ ಪುನರಾರಂಭಗೊಂಡಿದ್ದು, ದೂರುಗಳ‌ ಸಂಖ್ಯೆಯಲ್ಲಿ ಇಳಿಕೆ. (Source- Downdetector)

READ | ಕಳೆದ ಅರ್ಧ ಗಂಟೆಯಿಂದ ವಾಟ್ಸಾಪ್ ಸಮಸ್ಯೆ, ಏನಾಗಿದೆ?

ಮಂಗಳವಾರ ಮಧ್ಯಾಹ್ನ 12.30ರಿಂದ 2.30 ಗಂಟೆಯವರೆಗೆ ವಾಟ್ಸಾಪ್ ಸ್ಥಗಿತಗೊಂಡಿತ್ತು. ಈ ವೇಳೆ, ಯಾವುದೇ ಸಂದೇಶಗಳು ರವಾನಿಸಲಾಗದೇ ಬಳಕೆದಾರರು ಗೊಂದಲಕ್ಕೀಡಾಗಿದ್ದರು.
ವಾಟ್ಸಾಪ್ ಸಮಸ್ಯೆ ಇರುವ ವಿಚಾರ ವೈರಲ್ ಆಗಿದ್ದೇ ಜನ ನಿರಾಳರಾಗಿದ್ದರು. ಆದರೂ ಈ ವೇಳೆ, ಸಾಕಷ್ಟು ಜನ ತಮ್ಮ ವಾಟ್ಸಾಪ್ ಗಳನ್ನು ಅನ್ ಇನ್’ಸ್ಟಾಲ್ ಮಾಡಿ, ಮೊಬೈಲ್‌ ರಿಸ್ಟಾರ್ಟ್ ಪ್ರಯತ್ನಿಸಿದ್ದೂ ಉಂಟು.
ಅರ್ಧ ಗಂಟೆಯ ಅವಧಿಯಲ್ಲಿ 29,229 ದೂರುಗಳು ಬಳಕೆದಾರರಿಂದ ಬಂದಿದೆ. 2.27ರ ಹೊತ್ತಿಗೆ ವಾಟ್ಸಾಪ್ ಪುನರಾರಂಭಗೊಂಡಿದೆ.
ಭಾರೀ ವೈರಲ್ ಆಯ್ತು WhatsApp Outage
ವಾಟ್ಸಾಪ್‌ ಸಂದೇಶಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು ಸಾಧ್ಯವಾಗದಿದ್ದಾಗ ಸೋಶಿಯಲ್ ಮೀಡಿಯಾದಲ್ಲಿ ಇದು ಭಾರೀ‌ ವೈರಲ್ ಆಗಿತ್ತು‌.

https://suddikanaja.com/2022/10/21/trade-license-period-extend-up-five-years/

Leave a Reply

Your email address will not be published. Required fields are marked *

error: Content is protected !!