Gandhi Bazar | ಗಾಂಧಿ ಬಜಾರಿನಲ್ಲಿ ಬುಲ್ಡೋಜರ್ ಸದ್ದು, ತ್ರಿಮೂರ್ತಿಗಳಿಂದ ಭರ್ಜರಿ ಕಾರ್ಯಾಚರಣೆ

gandhi bazar

 

 

ಸುದ್ದಿ ಕಣಜ.ಕಾಂ | SHIVAMOGGA CITY
ಶಿವಮೊಗ್ಗ: ನಗರದಲ್ಲಿ ಫುಟ್ಬಾತ್ ತೆರವು ಕಾರ್ಯಾಚರಣೆ ಎರಡನೇ ದಿನಕ್ಕೆ ಕಾಲಿಟ್ಟಿದೆ. ಎರಡನೇ ದಿನವಾದ ಗುರುವಾರ ಗಾಂಧಿ ಬಜಾರಿನಲ್ಲಿ ಜೆಸಿಬಿ ಬಳಸಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಯಿತು.

READ | ಒಕ್ಕಲಿಗರ ಮೀಸಲಾತಿಯಲ್ಲಿನ ಗೊಂದಲ ನಿವಾರಣೆ ಮಾಡುವುದಾಗಿ ಯಡಿಯೂರಪ್ಪ ಭರವಸೆ 

ಮಂಗಳವಾರ ಸಂಜೆ ಆರಂಭಗೊಂಡಿರುವ ಕಾರ್ಯಾಚರಣೆಯು ನಗರದ ವಿವಿಧ ಪ್ರದೇಶಗಳಲ್ಲಿ ನಡೆಯುತ್ತಿದೆ. ಡಿಸಿ ಡಾ.ಆರ್.ಸೆಲ್ವಮಣಿ, ಎಸ್‍ಪಿ ಜಿ.ಕೆ.ಮಿಥುನ್ ಕುಮಾರ್, ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣಗೌಡ ನೇತೃತ್ವದಲ್ಲಿ ಭದ್ರತೆಯ ನಡುವೆ ತೆರವು ಕಾರ್ಯ ಬಿರುಸಾಗಿ ನಡೆದಿದೆ.
ಗುರುವಾರ ಬೆಳಗ್ಗೆ ಗಾಂಧಿ ಬಜಾರಿನ ಪಾದಾಚಾರಿ ರಸ್ತೆಗಳ ಮೇಲೆ ಕಟ್ಟಿದ್ದ ಶೀಟ್, ಕಟ್ಟೆ ಇತ್ಯಾದಿಗಳನ್ನು ಒಡೆದುಹಾಕಲಾಯಿತು.

ರಸ್ತೆಗೆ ಅಡ್ಡಾದಿಡ್ಡಿ ಇಟ್ಟ ವಾಹನಗಳನ್ನು ಮುಲಾಜಿಲ್ಲದೇ ಟೈಗರ್’ಗೆ ಹಾಕಿ. ನೋ ಪಾಕೀರ್ಂಗ್ ನಲ್ಲಿ ಬೇಜವಾಬ್ದಾರಿಯಾಗಿ ನಿಲ್ಲಿಸಿದ ವಾಹನಗಳು, ಒನ್ ವೇಯಲ್ಲಿ ಬಂದ ವಾಹನಗಳಿಗೆ ಸ್ಥಳದಲ್ಲೆ ದಂಡ ವಿಧಿಸಿ.
| ಜಿ.ಕೆ.ಮಿಥುನ್ ಕುಮಾರ್, ಎಸ್‍ಪಿ

ಸಭೆಯಲ್ಲಿ ಬಂದಿದ್ದವು ದೂರು
ಮಹಾನಗರ ಪಾಲಿಕೆ ಆಯುಕ್ತ ಮಾಯಾಣ್ಣ ಗೌಡ ಅವರು ಕಳೆದ ತಿಂಗಳ 19ರಂದು ಮಹಾನಗರ ಪಾಲಿಕೆಯ ಪಟ್ಟಣ ಮಾರಾಟ ಸಮಿತಿ ಸಭೆಯಲ್ಲಿ ಸಾರ್ವಜನಿಕರಿಂದ ಪುಟ್ ಪಾತ್ ಆಕ್ರಮಿಸಿಕೊಂಡಿರುವರ ವಿರುದ್ಧ ಬಹಳಷ್ಟು ದೂರುಗಳು ಬಂದಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿದ ಅಧಿಕಾರಿಗಳು ಕಾರ್ಯಾಚರಣೆ ಆರಂಭಿಸಿದ್ದಾರೆ.

READ | ಶಿವಮೊಗ್ಗ ಜಿಲ್ಲೆಯ 304 ಗ್ರಾಮಗಳಲ್ಲಿ ಚರ್ಮಗಂಟು ರೋಗ ಪತ್ತೆ, 47 ಜಾನುವಾರುಗಳ ಬಲಿ, ಪರಿಹಾರಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ

ಚಾರುಲತಾ ಸೋಮಲ್ ಅವಧಿಯಲ್ಲೂ ಬುಲ್ಡೋಜರ್ ಸದ್ದು
ಈ ಹಿಂದೆ ಆಯುಕ್ತರಾಗಿದ್ದ ಚಾರುಲತಾ ಸೋಮಲ್ ಅವರು ಸಹ ಫುಟ್ಪಾತ್ ಹಾಗೂ ಸೆಲ್ಲಾರ್ ತೆರವು ಕಾರ್ಯ ಕೈಗೊಂಡಿದ್ದರು.
ಎಲ್ಲೆಲ್ಲಿ ಕಾರ್ಯಾಚರಣೆ?
ಗಾಂಧಿ ಬಜಾರಿನಿಂದ ರಾಮಣ್ಣ ಶ್ರೇಷ್ಟಿ ಪಾರ್ಕ್, ಚೋರ್ ಬಜಾರ್, ಸಿದ್ದಯ್ಯ ವೃತ್ತ, ಎಂಕೆಕೆ ರಸ್ತೆ, ಶಿವಪ್ಪನಾಯಕ ವೃತ್ತ, ಬಸವೇಶ್ವರ ಸ್ಕೂಲ್ ಮುಂಭಾಗ ವೀರಶೈವ ಕಲ್ಯಾಣ ಮಂಟಪ, ಇನ್ನೂ ಹಲವು ಕಡೆ ತೆರವು ಕಾರ್ಯಾಚರಣೆ ಮಾಡಲಾಗಿದೆ.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಸಿಬ್ಬಂದಿ, ಪೆÇಲೀಸ್ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.

error: Content is protected !!