G+2 Ashraya house | ಆಶ್ರಯ ಜಿ+2 ಮಾದರಿ ಮನೆಗಳಿಗೆ ಅರ್ಜಿ ಆಹ್ವಾನ, ಮಹಿಳೆಯರಿಗಷ್ಟೇ ಅವಕಾಶ, ಪುರುಷರಿಗೆ ಹಲವು ಷರತ್ತು

Ashraya house

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
Shivamogga: ನಗರದ ಗೋಪಿಶೆಟ್ಟಿಕೊಪ್ಪ (Gopishettikoppa) ಗ್ರಾಮದ ಒಟ್ಟು 19 ಎಕರೆ 23 ಗುಂಟೆ ಜಮೀನಿನಲ್ಲಿ ಬೆಂಗಳೂರಿನ ರಾಜೀವ್‍ ಗಾಂಧಿ ಗ್ರಾಮೀಣ ವಸತಿ ನಿಗಮ (Rajiv Gandhi Housing Corporation Limited) ಇವರ ಆದೇಶ ಮತ್ತು ಶಿವಮೊಗ್ಗ (shimoga) ನಗರ ಆಶ್ರಯ ಸಮಿತಿ ತೀರ್ಮಾನದಂತೆ ಜಿ+2 ಮಾದರಿಯ ಮನೆಗಳನ್ನು ನಗರದ ನಿವೇಶನರಹಿತರಿಗೆ ಹಂಚುವ ಸಲುವಾಗಿ ಹೊಸದಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

READ | 10 ದಿನಗಳಲ್ಲಿ ಎರಡನೇ ಫೈರಿಂಗ್, ಕ್ರಿಮಿನಲ್‍ಗಳ ಚಳಿ ಬಿಡಿಸುತ್ತಿರುವ ಪೊಲೀಸ್ ಇಲಾಖೆ

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ 05-11-2022
ಅರ್ಜಿ ಸಲ್ಲಿಸಲು ಕಡೆಯ ದಿನಾಂಕ 31-01-2023
ಬ್ಯಾಂಕ್ ಮೂಲಕ ನಿಗದಿತ ಶುಲ್ಕ ಪಾವತಿಸಲು ಕೊನೆಯ ದಿನ 07-02-2023
ಅರ್ಜಿ ಸಲ್ಲಿಕೆ ವಿಧಾನ ಆನ್ ಲೈನ್
ವೆಬ್‍ಸೈಟ್ Shivamoggacitycorp.org (ಜಾಲತಾಣದ Ashraya Yojana Application ಮೆನುವಿನಲ್ಲಿ ಸಲ್ಲಿಸಬೇಕು.)

ಯಾರೆಲ್ಲ‌ ಅರ್ಜಿ‌ ಸಲ್ಲಿಸಬಹುದು?

  • 18 ವರ್ಷ ಮೇಲ್ಪಟ್ಟ ಮಹಿಳಾ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು.
  • ಪುರುಷ ಅಭ್ಯರ್ಥಿಯಾಗಿದ್ದಲ್ಲಿ ಮಾಜಿ ಸೈನಿಕ, ವಿಕಲಚೇತನ, ವಿಧುರ ಹಾಗೂ ಹಿರಿಯ ನಾಗರಿಕ ಆಗಿರಬೇಕು.
  • ಅರ್ಜಿದಾರರು ಶಿವಮೊಗ್ಗ ನಗರ ಪ್ರದೇಶದಲ್ಲಿ ವಾಸವಿರಬೇಕು.
  • ಬಿಪಿಎಲ್(BPL)/ ಅಂತ್ಯೋದಯ (Antyodaya) ಪಡಿತರ ಚೀಟಿ ಹೊಂದಿರಬೇಕು.
  • ಸ್ವಂತ ನಿವೇಶನ ಹೊಂದಿರಬಾರದು.
  • ಇತ್ತೀಚಿನ ವಾರ್ಷಿಕ ಆದಾಯ ಪ್ರಮಾಣ ಪತ್ರ ಹೊಂದಿರಬೇಕು.
  • ತೃತೀಯ ಲಿಂಗಿಗಳೂ ಸಹ ಅರ್ಜಿಯನ್ನು ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಶುಲ್ಕ ವಿವರ
ಸಾಮಾನ್ಯ ಪ್ರವರ್ಗ-1, 2(ಎ), 2(ಬಿ), 3(ಎ), 3(ಬಿ) ಗೆ ಸೇರಿದ ಅರ್ಜಿದಾರರಿಗೆ ಅರ್ಜಿ ಶುಲ್ಕ ₹200 ಇಎಂಡಿ ₹8000 ಒಟ್ಟು ₹8200, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದ ಅರ್ಜಿದಾರರಿಗೆ ಅರ್ಜಿ ಶುಲ್ಕ ₹100, ಇಎಂಡಿ ₹5000 ಒಟ್ಟು ₹5100 ಆಗಿದ್ದು ನಗರದ ಕೆನರಾ ಬ್ಯಾಂಕ್‍ನ ಎಲ್ಲ ಶಾಖೆಗಳಲ್ಲಿ/ಬ್ಯಾಂಕ್ ಆಫ್ ಬರೋಡಾದ ಎಸ್‍ಆರ್ ಶಾಖೆಗಳಲ್ಲಿ/ ಇಂಡಿಯನ್ ಬ್ಯಾಂಕ್‍ನ ಮಹಾನಗರ ಪಾಲಿಕೆ ಶಾಖೆ ಹಾಗೂ ಶಿವಮೊಗ್ಗ ಒನ್ ಕೇಂದ್ರಗಳಲ್ಲಿ ನಗದು ಅಥವಾ ಡೆಟಿಟ್ ಕಾರ್ಡ್ ಮೂಲಕ ಪಾವತಿಸಬಹುದು.

READ | ಶಿವಮೊಗ್ಗದ ಇಂದಿನ ಟಾಪ್ 10 ಸುದ್ದಿಗಳ ಕಣಜ ಇಲ್ಲಿದೆ

ಈ ದಾಖಲೆಗಳನ್ನು ಸಲ್ಲಿಸಿ
ಅರ್ಜಿದಾರರ ಇತ್ತೀಚಿನ 1 ಪಾಸ್‍ಪೋರ್ಟ್ ಅಳತೆಯ ಕಲರ್ ಭಾವಚಿತ್ರ, ಆಧಾರ್ ಕಾರ್ಡ್, ಬಿಪಿಎಲ್ ಪಡಿತರ ಚೀಟಿ, ಜಾತಿ, ಇತರೆ ಪ್ರಮಾಣ ಪತ್ರ, ಚಾಲ್ತಿಯಲ್ಲಿರುವ ಬ್ಯಾಂಕಿನ ಪಾಸ್‍ ಪುಸ್ತಕ, ವಾರ್ಷಿಕ ಆದಾಯ ಪ್ರಮಾಣ ಪತ್ರದ ಸೇರಿದಂತೆ ಎಲ್ಲ ಮೂಲ ದಾಖಲಾತಿಗಳು ಹಾಗೂ ದಾಖಲಾತಿಗಳ ಸಂಖ್ಯೆಯನ್ನು ಆನ್‍ಲೈನ್ ಅರ್ಜಿ ಸಲ್ಲಿಸುವ ಸಮಯದಲ್ಲಿ ಮೂಲ ದಾಖಲೆಯಲ್ಲಿರುವಂತೆ ಮಾಹಿತಿಯನ್ನು ಸ್ಪಷ್ಟವಾಗಿ ಸಲ್ಲಿಸಬೇಕೆಂದು ನಗರ ಆಶ್ರಯ ಸಮಿತಿ ಅಧ್ಯಕ್ಷರು ಹಾಗೂ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.

error: Content is protected !!