Court News | ಅಪ್ರಾಪ್ತ ವಯಸ್ಸಿನ ಮಗನಿಗೆ ಓಡಿಸಲು ಬೈಕ್ ಕೊಟ್ಟ ಹೆತ್ತವರಿಗೆ ಕೋರ್ಟ್’ನಿಂದ ಭಾರೀ ದಂಡ

Judgement

 

 

ಸುದ್ದಿ ಕಣಜ.ಕಾಂ ತೀರ್ಥಹಳ್ಳಿ
THIRTHALLI: ಅಪ್ರಾಪ್ತ ವಯಸ್ಸಿನ ಮಗನಿಗೆ ಬೈಕ್ ನೀಡಿದ ಹಾಗೂ ಆತ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ ತೀರ್ಥಹಳ್ಳಿ ಪ್ರಿನ್ಸಿಪಲ್ ಸಿವಿಲ್ ಜಡ್ಜ್ ಮತ್ತು ಜೆಎಂಎಫ್’ಸಿ ನ್ಯಾಯಾಲಯದ ನ್ಯಾಯಧೀಶರು ಪೋಷಕರಿಗೆ ₹25,000 ದಂಡ ವಿಧಿಸಿ ಆದೇಶಿಸಿದ್ದಾರೆ.

READ | ರೈಲ್ವೆ ನಿಲ್ದಾಣದಿಂದ ಶಿವಮೊಗ್ಗ ಪಾಲಿಕೆಯ 35 ವಾರ್ಡ್’ಗಳಿಗೆ ಸಿಟಿ‌ ಬಸ್ ಬಿಡಿ

ತೀರ್ಥಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ವಿನಾಯಕ ಟಾಕೀಸ್ ರಸ್ತೆಯಲ್ಲಿ 16 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕನೊಬ್ಬನು ದ್ವಿ ಚಕ್ರ ವಾಹನವನ್ನು ಹೆಲ್ಮೆಟ್ ಧರಿಸದೇ ಮತ್ತು ವಾಹನ ಚಾಲನಾ ಪರವಾನಗಿ ಹೊಂದಿರದೇ ಚಾಲನೆ ಮಾಡಿ ಸಂಚಾರಿ ನಿಯಮವನ್ನು ಕಳೆದ‌ ಅಕ್ಟೋಬರ್ 18ರಂದು ಉಲ್ಲಂಘನೆ ಮಾಡಿದ್ದಾನೆ.
ಬೈಕ್ ನಡೆಸಲು ಅವಕಾಶ ನೀಡಿದ ತಂದೆಗೆ ಬಿತ್ತು ದಂಡ
ಅಪ್ರಾಪ್ತ ವಯ್ಯಸ್ಸಿನ ಬಾಲಕನಿಗೆ ದ್ವಿ ಚಕ್ರ ವಾಹನವನ್ನು ಚಾಲನೆ ಮಾಡಲು ಅವಕಾಶ ನೀಡಿದ ವಾಹನದ ಮಾಲೀಕ ಆತನ ತಂದೆ ಆಸಿಫ್ ಬಾಷಾ(46) ವಿರುದ್ಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಲಘು ಪ್ರಕರಣವನ್ನು ದಾಖಲಿಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಾಗಿತ್ತು.
ಈ‌ ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಧೀಶರು ದ್ವಿ ಚಕ್ರ ವಾಹನದ ಮಾಲೀಕ ಬಾಲಕನ ತಂದೆ ಆಸಿಫ್ ಬಾಷಾ ಅವರಿಗೆ ₹25,000 ದಂಡ ವಿಧಿಸಿದ್ದಾರೆ.

error: Content is protected !!