ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: 2023ನೇ ಸಾಲಿನ ಗಣೇಶ ಹಬ್ಬ (Ganesh Festival) ಮತ್ತು ಈದ್ ಮಿಲಾದ್ (Eid Milad) ಹಬ್ಬದ ಪ್ರಯುಕ್ತ ಗಣಪತಿ ಸಮಿತಿ ಮತ್ತು ಈದ್ ಮಿಲಾದ್ ಸಮಿತಿಯವರು ಪೊಲೀಸ್ ಇಲಾಖೆಯಿಂದ ಧ್ವನಿವರ್ಧಕ ಪರವಾನಗಿಯನ್ನು ಮೆಸ್ಕಾಂ (MESCOM) ಇಲಾಖೆಯಿಂದ ತಾತ್ಕಾಲಿಕ ವಿದ್ಯುತ್ ಸಂಪರ್ಕ ಮತ್ತು ಮಹಾನಗರ ಪಾಲಿಕೆ (Shimoga city corporation) (ನಗರ ಪಾಲಿಕೆ/ ಪುರಸಭೆ/ ತಾಲೂಕು ಕಚೇರಿಯಿಂದ ಅನುಮತಿಯನ್ನು ಪಡೆಯುವುದು ಅವಶ್ಯಕವಿರುತ್ತದೆ. ಅದಕ್ಕಾಗಿ, ಸಿಂಗಲ್ ವಿಂಡೋ ವ್ಯವಸ್ಥೆಯನ್ನು ಮಾಡಲಾಗಿದೆ.
READ | ಬಿ.ಎಚ್.ರಸ್ತೆಯ ಈ ಭಾಗದಲ್ಲಿ ವಾಹನ ನಿಲುಗಡೆಗೆ ನಿರ್ಬಂಧ, ಎಲ್ಲೆಲ್ಲಿ ನೋ ಪಾರ್ಕಿಂಗ್? ಕಾರಣವೇನು?
ವಿವಿಧ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಅನುಮತಿ ಪಡೆಯುವ ಕೆಲಸವನ್ನು ಸರಳಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡುವ ಉದ್ದೇಶದಿಂದ ಮೂರು ಇಲಾಖೆಯ ಅಧಿಕಾರಿಗಳು ಒಂದೇ ಸ್ಥಳದಲ್ಲಿ ಲಭ್ಯವಿರುವಂತೆ ಏಕಗವಾಕ್ಷಿ ವ್ಯವಸ್ಥೆಯನ್ನು ಈ ಕೆಳಕಂಡ ಸ್ಥಳಗಳಲ್ಲಿ ಪ್ರಾರಂಭಿಸಲಾಗಿದೆ. ಸಂಬಂಧಪಟ್ಟವರು ಸ್ಥಳಗಳಿಗೆ ಭೇಟಿ ನೀಡಿ ಅನುಕೂಲ ಪಡೆಯಬಹುದು.
ತಾಲೂಕು | ಏಕಗವಾಕ್ಷಿ ಸ್ಥಳ | ಪ್ರಾರಂಭಿಸುವ ದಿನಾಂಕ |
ಶಿವಮೊಗ್ಗ | ಮಹಾನಗರ ಪಾಲಿಕೆ ಕಚೇರಿ ಏಕಗವಾಕ್ಷಿ 01 ಶಿವಮೊಗ್ಗ ಎ ಉಪ ವಿಭಾಗ ಏಕಗವಾಕ್ಷಿ 02 ಶಿವಮೊಗ್ಗ ಬಿ ಉಪ ವಿಭಾಗ |
07-09-2023 |
ಭದ್ರಾವತಿ | ನಗರಸಭೆ ಕಚೇರಿ ಭದ್ರಾವತಿ ಪಟ್ಟಣ | 06-09-2023 |
ಶಿಕಾರಿಪುರ | ತಾಲೂಕು ಕಚೇರಿ | 08-09-2023 |
ಸೊರಬ | ತಾಲೂಕು ಕಚೇರಿ | 08-09-2023 |
ಸಾಗರ | ತಾಲೂಕು ಕಚೇರಿ | 08-09-2023 |
ತೀರ್ಥಹಳ್ಳಿ | ತಾಲೂಕು ಕಚೇರಿ | 09-09-2023 |
ಹೊಸನಗರ | ತಾಲೂಕು ಕಚೇರಿ | 09-09-2023 |
Dacoit | ಲಿಫ್ಟ್ ನೀಡುವುದಾಗಿ ಕರೆದೊಯ್ದು ದರೋಡೆ, 24 ಗಂಟೆಯಲ್ಲೇ ಆರೋಪಿಗಳು ಅಂದರ್