Private Bus stand | ಶಿವಮೊಗ್ಗದ ಎಲ್ಲ ಖಾಸಗಿ ಬಸ್ ನಿಲ್ದಾಣಗಳಲ್ಲಿ ಸಿಸಿಟಿವಿ ಅಳವಡಿಕೆಗೆ 10 ದಿನಗಳ ಡೆಡ್‍ಲೈನ್, ಕಾರಣವೇನು?

Private bus stand CCTV

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲೆಯ ಎಲ್ಲ ಖಾಸಗಿ ಬಸ್ ನಿಲ್ದಾಣಗಳಲ್ಲಿ ಕಡ್ಡಾಯವಾಗಿ ಇನ್ಮುಂದೆ ಸಿಸಿಟಿವಿ ಕ್ಯಾಮೆರಾ ಅಳವಡಿಸಲೇಬೇಕು. ಇದಕ್ಕಾಗಿ ಜಿಲ್ಲಾ ಪೊಲೀಸ್ ಇಲಾಖೆ ಹತ್ತು ದಿನಗಳ ಗಡುವನ್ನು ನೀಡಿದೆ. ಇದರೊಳಗೆ ಜಿಲ್ಲೆಯ ಎಲ್ಲ ಖಾಸಗಿ ಬಸ್ ನಿಲ್ದಾಣಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸಬೇಕು.
ನಗರದ ಡಿಎಆರ್ ಮೈದಾನದಲ್ಲಿ ಗುರುವಾರ ಸಂಜೆ ನಡೆದ ಖಾಸಗಿ ಬಸ್ ಮಾಲೀಕರ ಸಭೆಯಲ್ಲಿ ವಿಸ್ತøತವಾಗಿ ಚರ್ಚಿಸಿದ ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ ಅವರು ಈ ಸೂಚನೆಯನ್ನು ನೀಡಿದ್ದಾರೆ.

READ | ಇನ್ಮುಂದೆ ಪೊಲೀಸ್ ನಿಗಾದಲ್ಲಿರಲಿದೆ ಶಿವಮೊಗ್ಗದ ಪ್ರತಿಯೊಂದು ಸಾರ್ವಜನಿಕ ಸಥಳ, ನಾಗರಿಕ ಸುರಕ್ಷತಾ ಕಾಯ್ದೆ ಅನುಷ್ಠಾನಕ್ಕೆ ಗಡುವು

ಎಡಿಜಿಪಿ ಸೂಚನೆ ನೀಡಿದ್ದರು
ಇತ್ತೀಚೆಗೆ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಅವರು ನಗರಕ್ಕೆ ಆಗಮಿಸಿದಾಗ ನವೆಂಬರ್ ತಿಂಗಳೊಳಗೆ ನಾಗರಿಕ ಸುರಕ್ಷತಾ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಅದರನ್ವಯ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಮುಂದಾಗಿದೆ.
ನಿತ್ಯ ಸಾವಿರಾರು ಜನ ಓಡಾಡುವ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರ ಸುರಕ್ಷತೆಯ ಅಗತ್ಯವಿದೆ. ಹೀಗಾಗಿ, ಸಿಸಿಟಿವಿ ಅಳವಡಿಕೆ ಕಡ್ಡಾಯವಾಗಿದೆ.
ನಾಗರಿಕ ಸುರಕ್ಷತಾ ಕಾಯ್ದೆ ಏನು ಹೇಳುತ್ತದೆ?
ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಸಾರ್ವಜನಿಕರಿಗೆ ಹೆಚ್ಚಿನ ಭದ್ರತೆ ನೀಡುವ ಉದ್ದೇಶದಿಂದ ಕರ್ನಾಟಕ ನಾಗರಿಕ ಸುರಕ್ಷತಾ ಕಾಯ್ದೆ ಜಾರಿಗೆ ಸರ್ಕಾರ ಮುಂದಾಗಿದೆ. 2017ರಲ್ಲಿ ರಾಜ್ಯ ಸರ್ಕಾರವು ಚಳಿಗಾಲ ಅಧಿವೇಶನದಲ್ಲಿ ಈ ಕಾಯ್ದೆಗೆ ನಿಯಮಾವಳಿಗಳನ್ನು ರೂಪಿಸಿ ಅನುಷ್ಠಾನಕ್ಕೆ ಮುಂದಾಗಿದೆ.

READ | ಮನೆಯ ಮಾಲೀಕನನ್ನೇ ಕೊಂದ ಮೊಬೈಲ್ ಚಾರ್ಜ್ ಮಾಡಿಕೊಳ್ಳಲು ಬಂದ ವ್ಯಕ್ತಿ

ಕಾಯ್ದೆಯಲ್ಲಿ ಏನಿದೆ?

  • ಏಕಕಾಲಕ್ಕೆ 100 ಅಥವಾ ಒಂದು ದಿನದಲ್ಲಿ 500 ಜನ ಸೇರುವಂತಹ ಜಾಗಗಳಿಗೆ ಈ ಕಾಯ್ದೆ ಅನ್ವಯವಾಗುತ್ತದೆ. ಇದರಡಿ, ಧಾರ್ಮಿಕ ಕೇಂದ್ರ, ಸಾರ್ವಜನಿಕ ಪ್ರದೇಶ, ಶೈಕ್ಷಣಿಕ ಸಂಸ್ಥೆ, ಆಸ್ಪತ್ರೆ, ಕ್ರೀಡಾ ಸಂಕೀರ್ಣ, ರೈಲು ಹಾಗೂ ಬಸ್ ನಿಲ್ದಾಣಗಳು ಸೇರಿದಂತೆ ಇನ್ನಿತರ ಸಾರ್ವಜನಿಕ ಸ್ಥಳಗಳು ಒಳಪಡುತ್ತವೆ.
  • ಕಾಯ್ದೆಯ ಪ್ರಕಾರ, ಸಾರ್ವಜನಿಕ ಸ್ಥಳಗಳು, ಪಾರ್ಕಿಂಗ್ ಜಾಗದ ಪ್ರವೇಶ ಮತ್ತು ನಿರ್ಗಮನದಲ್ಲಿ ಸಿಸಿಟಿವಿ ಇರಬೇಕು.
  • ಸಾರ್ವಜನಿಕರು ಪ್ರವೇಶಿಸಬೇಕಾದರೆ, ಅವರನ್ನು ದೈಹಿಕವಾಗಿ ಮತ್ತು ತಾಂತ್ರಿಕ ಯಂತ್ರೋಪಕರಣಗಳ ಮೂಲಕ ಪರಿಶೀಲನೆಗೆ ಒಳಪಡಿಸಬೇಕು. (ಮೆಟಲ್ ಡಿಟೆಕ್ಟರ್ ಇತ್ಯಾದಿ)
  • ಬರೀ ಕ್ಯಾಮೆರಾ ಅಳವಡಿಸಿದರೆ ಮಾತ್ರ ಸಾಲದು. ಅಳವಿಡಿಸುವ ಸಿಸಿಟಿವಿ ಕ್ಯಾಮೆರಾಗಳಲ್ಲಿ ವಿಡಿಯೋ ತುಣುಕುಗಳು 30 ದಿನಗಳವರೆಗೆ ಶೇಖರಿಸಬಹುದಾದ ಸಾಮಥ್ರ್ಯವಿರಬೇಕು.

error: Content is protected !!