PDS Rice seized | ಗಾಡಿಕೊಪ್ಪದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 168 ಕ್ವಿಂಟಾಲ್ ಪಡಿತರ ಅಕ್ಕಿ ಸೀಜ್

rice siezed

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಗೋದಾಮುವೊಂದರ ಮೇಲೆ ದಾಳಿ ಮಾಡಿದ ಘಟನೆ ಸೋಮವಾರ ನಡೆದಿದೆ.
ಗಾಡಿಕೊಪ್ಪ (gadikoppa) ಗ್ರಾಮದಲ್ಲಿ ಕಾರ್ತಿಕೇಯನ್ ಎಂಬುವವರಿಗೆ ಸೇರಿದ ಗೋದಾಮಿನ ಮೇಲೆ ತುಂಗಾನಗರ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರು ಜನರನ್ನು ಬಂಧಿಸಿದ್ದಾರೆ.

READ | ಮಂಗಳೂರು ಆಟೋ ರಿಕ್ಷಾ ಬ್ಲಾಸ್ ಕೇಸ್, ಶಿವಮೊಗ್ಗದಲ್ಲಿ ನಾಲ್ಕು ಕಡೆಗಳಲ್ಲಿ ಪೊಲೀಸರ ದಾಳಿ

ಆರು ಜನರ ಬಂಧನ
ಕಸ್ತೂರ್ ಬಾ ರಸ್ತೆ ನಿವಾಸಿ ಕಾರ್ತಿಕೇಯನ್ ಅಲಿಯಾಸ್ ಕಾರ್ತಿಕ(53), ಕಾಚಿನಕಟ್ಟೆ ನಿವಾಸಿಗಳಾದ ಗೋಪಿ(23), ಸೀತಾರಾಮ(40), ಮತ್ತಿನಘಟ್ಟದ ಕಾಂತರಾಜ್(32), ನ್ಯೂಮಂಡ್ಲಿಯ ಯುವರಾಜ್(28), ಭದ್ರಾವತಿಯ ದೇವರ ನರಸೀಪುರದ ಶ್ರೀನಿಧಿ (20) ಎಂಬುವವರನ್ನು ಬಂಧಿಸಲಾಗಿದೆ.
ಅಕ್ಕಿ ಲೋಡ್ ಮಾಡುವಾಗ ದಾಳಿ
ಸೋಮವಾರ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗಾಡಿಕೊಪ್ಪ ಗ್ರಾಮದಲ್ಲಿ ಗೋದಾಮಿನಲ್ಲಿ ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲು ಲಾರಿಗಳಲ್ಲಿ ಲೋಡ್ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ತುಂಗಾನಗರ ಪಿಎಸ್ಐ, ಸಿಬ್ಬಂದಿಯ ತಂಡವು ಆಹಾರ ನಿರೀಕ್ಷಕರೊಂದಿಗೆ ದಾಳಿ ನಡೆಸಿದೆ.
₹3.70 ಲಕ್ಷ ಮೌಲ್ಯದ ಅಕ್ಕಿ ಸೀಜ್
ಆರೋಪಿತರಿಂದ ಅಂದಾಜು ₹3,70,000 ಮೌಲ್ಯದ ಒಟ್ಟು 338 ಚೀಲಗಳಲ್ಲಿ ತುಂಬಿದ್ದ 168 ಕ್ವಿಂಟಾಲ್ ತೂಕದ ಅಕ್ಕಿ, 2 ಕ್ಯಾಂಟರ್ ವಾಹನಗಳು, 2 ಎಲೆಕ್ಟ್ರಾನಿಕ್ ತೂಕ ಮಾಡುವ ಯಂತ್ರ ಮತ್ತು 1 ಚೀಲಗಳನ್ನು ಹೊಲಿಗೆ ಯಂತ್ರವನ್ನು ವಶಕ್ಕೆ ಪಡೆಯಲಾಗಿದೆ‌. ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

error: Content is protected !!